ಮಾಧ್ಯಮ ಲೋಕದಲ್ಲಿ ಮತ್ತೊಂದು ಹೆಜ್ಜೆ ಇಟ್ಟ ಡಾ ವಿಜಯ ಸಂಕೇಶ್ವರ – ಉತ್ತಮ ಪತ್ರಕರ್ತರಾಗಲು ಮತ್ತೊಂದು ಅವಕಾಶ…..

Suddi Sante Desk
ಮಾಧ್ಯಮ ಲೋಕದಲ್ಲಿ ಮತ್ತೊಂದು ಹೆಜ್ಜೆ ಇಟ್ಟ ಡಾ ವಿಜಯ ಸಂಕೇಶ್ವರ – ಉತ್ತಮ ಪತ್ರಕರ್ತರಾಗಲು ಮತ್ತೊಂದು ಅವಕಾಶ…..

ಬೆಂಗಳೂರು

ಹೌದು ಈಗಾಗಲೇ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರು ಮಾಡಿರುವ ಡಾ ವಿಜಯ ಸಂಕೇಶ್ವರ ಈಗ ಮತ್ತೊಂದು ಹೆಜ್ಜೆ ಆರಂಭ ಮಾಡಿದ್ದಾರೆ ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ತೆರೆಯಲು ಮುಂದಾಗಿ ದ್ದಾರೆ.

ವಿಶ್ವದರ್ಶನ ಸಂಸ್ಥೆಯಿಂದ ಪತ್ರಿಕೋದ್ಯಮ ಪಿಜಿ ಡಿಪ್ಲೊಮಾ ಕೋರ್ಸ್ ನ್ನು ತೆರೆಯುತ್ತಿದ್ದಾರೆ.ಇದ ರೊಂದಿಗೆ ಉತ್ತಮ ಪತ್ರಕರ್ತರಾಗಲು ಅತ್ಯು ತ್ತಮವಾದ ಅವಕಾಶವನ್ನು ಒದಗಿಸುತ್ತಿದ್ದಾರೆ

ಈಗಾಗಲೇ ಕನ್ನಡ ಪತ್ರಿಕಾರಂಗದಲ್ಲಿ ಹೊಸ ಹೊಸ ಸಾಹಸಗಳ ಮೂಲಕ ದಾಖಲೆಗಳನ್ನು ಬರೆದಿರುವ ಹೆಸರಾಂತ ಉದ್ಯಮಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಹೆಸರಿನಲ್ಲಿ ಮೀಡಿಯಾ ಸ್ಕೂಲ್ ಆರಂಭವಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಈ ಒಂದು ಕೋರ್ಸ್‌ ಆರಂಭವಾಗುತ್ತಿದೆ ವಿಶ್ವ ದರ್ಶನ ಎಜುಕೇಶನ್ ಸೊಸೈಟಿಯಲ್ಲಿ,ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಮಾರ್ಗ ದರ್ಶನದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿ ಡಿಪ್ಲೊಮಾ ಕೋರ್ಸ್ ಶುರುವಾ ಗಲಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲ ಯದ ಮಾನ್ಯತೆ ಪಡೆದಿದೆ.

ಭವಿಷ್ಯದ ಪತ್ರಕರ್ತರನ್ನು ವೃತ್ತಿಪರ ರೀತಿಯಲ್ಲಿ ರೂಪಿಸುವ ಹಾಗೆ ಕೋರ್ಸ್ ವಿನ್ಯಾಸಗೊಳಿ ಸಲಾಗಿದ್ದು, ಮಾಧ್ಯಮ ವೃತ್ತಿಯನ್ನು ಸಮಾಜ ಮುಖಿಯಾಗಿ ಸೃಜನಶೀಲವಾಗಿ ನಿರ್ವಹಿಸಲು ಅನುವಾಗುವಂತೆ ವೈವಿಧ್ಯಮಯ ಬೋಧನೆ ಹಾಗೂ ತರಬೇತಿ ನೀಡಲಾಗುತ್ತದೆ.

ಮುದ್ರಣ, ಟಿವಿ ಹಾಗೂ ಡಿಜಿಟಲ್- ಈ ಮೂರೂ ಮಾಧ್ಯಮಗಳ ಸಮಗ್ರ ಅಂಶಗಳನ್ನು ಕೋರ್ಸ್ ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದ್ದು ಹೇಗೆ ಇರಲಿದೆ ಹೇಗೆ ಸ್ಪಂದನೆ ಸಿಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.