ದೆಹಲಿ –
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಮಹತ್ವದ ತಿರ್ಮಾನವೊಂದನ್ನು ತಗೆದುಕೊಂಡಿದೆ. ಹೌದು ಅಖಿಲ ಭಾರತೀಯ ಕೋಟಾದಡಿಯಲ್ಲಿ ಒಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಮೀಸಲಾತಿ ನೀಡೋದಾಗಿ ಘೋಷಣೆ ಮಾಡಿದೆ
ಇದರೊಂದಿಗೆ ದೇಶದಲ್ಲಿ ಆರ್ಥಿಕವಾಗಿ ಹಿಂದೂಳಿದ ಬಡವರ ನಿರ್ಗತಿಕರ ನೆರವಿಗೆ ಕೇಂದ್ರ ಸರ್ಕಾರ ನಿಂತುಕೊಂಡಿದೆ. ಇನ್ನೂ ಇ ಒಂದು ಘೋಷಣೆಯ ಬಳಿಕ ಒಬಿಸಿ ವಿದ್ಯಾರ್ಥಿಗಳಿಗೆ 27 ಪ್ರತಿಶತ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 10 ಪ್ರತಿಶತ ಮೀಸಲಾತಿ ಸಿಗಲಿದೆ.ಬಿಡಿಎಸ್, ಎಂಡಿ ಎಸ್,ಎಂಬಿಬಿಎಸ್,ಎಂಡಿ, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೇರಿದಂತೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಪದವಿ ಕೋರ್ಸ್ ಗಳ 2021-22ನೇ ಸಾಲಿನ ಪ್ರವೇಶಾತಿಯಲ್ಲಿ ಈ ಮೀಸಲಾತಿ ಸಿಗಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಪ್ರತಿವರ್ಷ ಎಂಬಿಬಿಎಸ್ ಮಾಡುವ ಸರಿ ಸುಮಾರು 1500 ಒಬಿಸಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋ ತ್ತರ ಪದವಿ ಪೂರೈಸಬಯಸುವ 2500 ವಿದ್ಯಾರ್ಥಿ ಗಳಿಗೆ ಈ ಒಂದು ಕೇಂದ್ರ ಸರ್ಕಾರದ ನೂತನ ಯೋಜನೆಯಿಂದಾಗಿ ಮೀಸಲಾತಿಯ ಲಾಭ ನೆರವಾಗಲಿದೆ.ಅದೇ ರೀತಿ ಎಂಬಿಬಿಎಸ್ ವಿಭಾಗದ 550 ಹಾಗೂ ಸ್ನಾತಕೋತ್ತರ ವಿಭಾಗದ 1000 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.
ಪ್ರಧಾನಿ ಮೋದಿ ಸೂಚನೆಯಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ಈ ಮಹತ್ವದ ಆದೇಶವನ್ನು ನೀಡಿದೆ. 1986ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಖಿಲ ಭಾರತೀಯ ಕೋಟಾವನ್ನು ಜಾರಿಗೆ ತರಲಾಗಿತ್ತು. ಈ ಯೋಜನೆಯ ಮೂಲಕ ವಿದ್ಯಾರ್ಥಿಯು ಬೇರೆ ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಅರ್ಹತೆ ಪಡೆಯಬಹುದಾಗಿದ್ದು ಇದನ್ನು ದೇಶದ ಶಿಕ್ಷಣ ತಜ್ಞರು ಪ್ರಜ್ಞಾವಂತ ನಾಗರೀಕರು ಸ್ವಾಗತಿಸಿದ್ದು ಇದರಿಂದಾಗಿ ದೇಶದ ಲ್ಲಿನ ಮತ್ತಷ್ಟು ಬಡವ ಬಲ್ಲಿದವರಿಗೆ ಉನ್ನತ ಶಿಕ್ಷಣದ ಕನಸು ನನಸಾಗಲಿದೆ ಎಂದಿದ್ದಾರೆ.