ಬೆಂಗಳೂರು –
ಕಳೆದ ಹಲವು ದಿನಗಳಿಂದ ರಾಜ್ಯದ ಶಿಕ್ಷಕರು ಕಾಯುತ್ತಿದ್ದ ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ವಿಡಿಯೋ ಕಾನ್ಪರನ್ಸ್ ಹಮ್ಮಿಕೊಳ್ಳಲಾಗಿದೆ. ಜುಲೈ 31 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ವಕುಮಾರ್ ಈ ಒಂದು ವಿಡಿಯೋ ಕಾನ್ಪರನ್ಸ್ ಕರೆದಿದ್ದಾರೆ
ಜುಲೈ 31 ರಂದು ಬೆಳಿಗ್ಗೆ 11 30 ಕ್ಕೆ ವಿಡಿಯೋ ಕಾನ್ಪರನ್ಸ್ ಕರೆದಿದ್ದಾರೆ.ಈ ಒಂದು ಕಾನ್ಪರನ್ಸ್ ನಲ್ಲಿ ವರ್ಗಾವಣೆ ಕುರಿತಾಗಿ ಚರ್ಚೆಯನ್ನು ಮಾಡಲಾಗು ತ್ತಿದೆ.ಮೂರು ಹಂತಗಳಲ್ಲಿ ನಡೆಯುವ ವರ್ಗಾವಣೆ ಮತ್ತು ಇತರೆ ವಿಷಯಗಳ ಕುರಿತು ಚರ್ಚೆಯನ್ನು ಮಾಡಲಾಗುತ್ತಿದೆ
ರಾಜ್ಯದ ಎಲ್ಲಾ ಉಪ ನಿರ್ದೇಶಕರು ,ಬಿಇಓ, ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದು ವರ್ಗಾವಣೆ ವಿಚಾರ ದಲ್ಲಿ ಏನಾದರೂ ಶಿಕ್ಷಕರು ಅಂದು ಕೊಂಡಂತೆ ಬದಲಾವಣೆಗಳಾಗುತ್ತವೆ ಏನು ಎಂಬ ವಿಚಾರ ಕುರಿತು ಕಾದು ನೋಡಬೇಕು ಇಲ್ಲವಾದರೆ ಶಿಕ್ಷಕರು ಯಾವ ನಿರ್ಧಾರವನ್ನು ತಗೆದುಕೊಳ್ಳುತ್ತಾರೆ ಮುಂದೇನು ಆಗುತ್ತದೆ ಆಗುತ್ತದೆ ಕಾದು ನೋಡಬೇಕು