BEO ಅಮಾನತಿಗೆ ಸಚಿವ MB ಪಾಟೀಲ ಸೂಚನೆ – ಈ ಕೂಡಲೇ ಅಮಾನತು ಮಾಡುವಂತೆ ಸಂದೇಶ…..

Suddi Sante Desk
BEO ಅಮಾನತಿಗೆ ಸಚಿವ MB ಪಾಟೀಲ ಸೂಚನೆ – ಈ ಕೂಡಲೇ ಅಮಾನತು ಮಾಡುವಂತೆ ಸಂದೇಶ…..

ವಿಜಯಪುರ

ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಅವಕಾಶ ನೀಡದ ಬಿಇಒ ಅವರನ್ನು ಕೂಡಲೇ ಅಮಾನತು ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ನಿರ್ದೇಶನ ನೀಡಿದ್ದಾರೆ.

ನಗರದಲ್ಲಿರುವ ಜಿಲ್ಲಾ.ಪಂಚಾಯತ್ ಸಭಾಂಗಣ ದಲ್ಲಿ ಜಿಲ್ಲಾ ಮಟ್ಟದ ತ್ರೈಮಾಸಿಕ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿವೃದ್ಧಿ ಕೆಲಸಕ್ಕೆ ತಮ್ಮ ತವರು ಕ್ಷೇತ್ರದ ಬಿಇಒ ವರ್ತನೆ ಬಗ್ಗೆ ಜವಳಿ ಸಚಿವ ಶಿವಾನಂದ ಪಾಟೀಲ ವಿಷಯ ಪ್ರಸ್ತಾಪಿಸಿದರು.

ಯರನಾಳ ಗ್ರಾಮದ ಸರ್ಕಾರಿ ಶಾಲೆ ಆವರಣ ದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಒಪ್ಪಿಗೆ ನೀಡುತ್ತಿಲ್ಲ.ಇದರಿಂದಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ತೊಡಕುಂಟು ಮಾಡುತ್ತಿದ್ದಾರೆ ಎಂದು ಬಸವನಬಾಗೇವಾಡಿ ಬಿಇಒ ಶೇಖರ ಬಳಬಟ್ಟಿ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಈ ವೇಳೆ ಕೆಡಿಪಿ ಸಭೆಯ ಅಧ್ಯಕ್ಕತೆ ವಹಿಸಿದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಬಸವನಬಾಗೇವಾಡಿ ಬಿಇಒ ಅವರನ್ನು ಅಮಾನತು ಮಾಡುವಂತೆ ಡಿಡಿಪಿಐ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ಸುದ್ದಿ ಸಂತೆ ನ್ಯೂಸ್ ವಿಜಯಪುರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.