ÇC Tv ಭದ್ರತೆಯಲ್ಲಿ ಟೊಮ್ಯಾಟೋ ವ್ಯಾಪಾರ – ರಸ್ತೆ ಬದಿಯಲ್ಲಿ ಕುಳಿತುಕೊಂಡು ಸಿಸಿ ಟಿವಿ ಯ ಭದ್ರತೆಯಲ್ಲಿ ವ್ಯಾಪಾರ…..

Suddi Sante Desk
ÇC Tv ಭದ್ರತೆಯಲ್ಲಿ ಟೊಮ್ಯಾಟೋ ವ್ಯಾಪಾರ – ರಸ್ತೆ ಬದಿಯಲ್ಲಿ ಕುಳಿತುಕೊಂಡು ಸಿಸಿ ಟಿವಿ ಯ ಭದ್ರತೆಯಲ್ಲಿ ವ್ಯಾಪಾರ…..

ಹಾವೇರಿ

ದಿನದಿಂದ ದಿನಕ್ಕೆ ತರಕಾರಿಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ ಈ ಒಂದು ಹಿನ್ನಲೆಯಲ್ಲಿ ವ್ಯಾಪಾರಸ್ಥ ಫುಲ್ ಅಲರ್ಟ್ ಆಗಿದ್ದಾರೆ ಇನ್ನೂ ಟೊಮ್ಯಾಟೋಗೆ ಸಾಕಷ್ಟು ಪ್ರಮಾಣದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು ಬಂದಿದೆ

ಇನ್ನೂ ಟೊಮ್ಯಾಟೊ ಕಳ್ಳತನ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ ವ್ಯಾಪಾರಸ್ಥರು.ಸಿಸಿ ಟಿವಿ ಕಣ್ಗಾವಲಿನಲ್ಲಿ ಜೋರಾಗಿ ನಡೆಯುತ್ತಿದೆ ಟೊಮ್ಯಾಟೊ ವ್ಯಾಪಾರ.1 ಕೆ.ಜಿ ಟೊಮ್ಯಾಟೊಗೆ 150 ರೂಪಾಯಿ ಬೆಲೆ ಏರಿಕೆಯಾದ ಹಿನ್ನಲೆ ಯಲ್ಲಿ ಈ ಒಂದು ಕಾರ್ಯಕ್ಕೆ ವ್ಯಾಪಾರಸ್ಥರು ಮುಂದಾಗಿದ್ದಾರೆ.

ಖರೀದಿ ನೆಪದಲ್ಲಿ ಜನ ಟೊಮ್ಯಾಟೋ ಒಂದೊಂದು ಹೆಚ್ಚಿಗೆ ಹಾಕಿಕೊಳ್ಳುತ್ತಾರೆ.

ಹೀಗಾಗಿ ಟೊಮ್ಯಾಟೊ ಕಳ್ಳತನ ಆಗದಂತೆ ಸಿ.ಸಿ ಕ್ಯಾಮರಾ ಅಳವಡಿಸಿದ್ದಾರೆ ವ್ಯಾಪಾರಸ್ಥರು. ಹಾನಗಲ್ ತಾ.ಅಕ್ಕಿಆಲೂರು ಗ್ರಾಮದಲ್ಲಿ ಟೊಮ್ಯಾಟೊ ವ್ಯಾಪಾರಸ್ಥ ಸಿಸಿ ಕ್ಯಾಮರಾ ಅಳವಡಿಕೆಯನ್ನು ಮಾಡಿದ್ದು ಗಮನ ಸೆಳೆದಿದೆ

1-2 ಟೊಮ್ಯಾಟೋCC  ಕದ್ದರೂ ನಷ್ಟ ಎಂದು ವ್ಯಾಪಾರಸ್ಥ ಕೃಷ್ಣಪ್ಪ ಸಿಸಿ ಕ್ಯಾಮರಾ ಅಳವಡಿಕೆ ಯನ್ನು ಮಾಡಲಾಗಿದೆ

 

 

ಹೀಗಾಗಿ ಸಿ.ಸಿ ಟಿವಿ ಇಟ್ಟಿದಿನಿ ಎನ್ನುತ್ತಾ ವ್ಯಾಪಾರಸ್ಥ ಕೃಷ್ಣಪ್ಪ ರಸ್ತೆ ಬದಿಯಲ್ಲಿ ನಿಂತು ಕೊಂಡು ವ್ಯಾಪಾರ ವಹಿವಾಟು ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.