ಬೆಂಗಳೂರು –
ಕೊರೊನಾ ಹಿನ್ನಲೆಯಲ್ಲಿ ಈವರೆಗೆ ಇನ್ನೂ ಶಾಲೆ ಗಳು ಆರಂಭವಾಗಿಲ್ಲ.ಇನ್ನೇನು ಕೋವಿಡ್ ಕಡಿಮೆ ಯಾಯಿತು ಎನ್ನುವಷ್ಟರಲ್ಲಿ ಮತ್ತೆ ಮೂರನೇಯ ಅಲೆ ಆರಂಭವಾಗುವ ಲಕ್ಷಣಗಳು ಕಾಣುತ್ತಿದ್ದು ಎಲ್ಲೆಡೆ ಅದರದ್ದೇ ಮಾತು ಚರ್ಚೆ ಮುಂಜಾಗ್ರತಾ ಕ್ರಮಗಳು ಮಾತುಗಳು.ಇದು ಒಂದು ವಿಚಾರವಾ ದರೆ ಇತ್ತ ಇದೆಲ್ಲದರ ನಡುವೆ ಶಾಲೆಗಳು ಈ ವರುಷ ವೂ ಕೂಡಾ ಆರಂಭವಾಗುತ್ತವೆ ಇಲ್ಲ ಆತಂಕ ಮನೆ ಮಾಡಿದೆ
ಹೌದು ಕೊವಿಡ್ ಕಾರಣದಿಂದಾಗಿ ಇನ್ನೂ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ ಈ ಮಧ್ಯೆ ಕಳೆದ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 10 ನೇ ತರಗತಿಯ ಪಠ್ಯ ಕ್ರಮ ದಲ್ಲಿ ಶೇಕಡ 30 ರಷ್ಟು ಕಡಿತಗೊಳಿಸ ಲಾಗಿತ್ತು.5 ರಿಂದ 10 ನೇ ತರಗತಿಯ ಮಕ್ಕಳಿಗೆ ಆನ್ ಲೈನ್ ಶಿಕ್ಷಣದೊಂದಿಗೆ ವಿದ್ಯಾಗಮ ಮತ್ತು ಚಂದನ ವಾಹಿನಿಯ ಮೂಲಕ ಪಾಠ ಬೋಧನೆ ಮಾಡಲಾಗಿತ್ತು.
ಹೌದು ಕರೊನಾ ಹಿನ್ನಲೆಯಲ್ಲಿ ಈ ವರ್ಷ ಇನ್ನೂ ಶಾಲೆಗಳು ಆರಂಭವಾಗದ ಕಾರಣ ಎಲ್ಲಾ ವಿಷಯ ಗಳ ಪಠ್ಯಗಳನ್ನು ದೂರದರ್ಶನ ಚಂದನ ವಾಹಿನಿ ಯ ಮೂಲಕ ಬೋಧಿಸಲಾಗುತ್ತಿದೆ.ಈ ಸಾಲಿನಲ್ಲಿ ಕೂಡ ಶಾಲೆಗಳು ಇನ್ನೂ ಆರಂಭವಾಗದಿರುವು ದರಿಂದ ಪಠ್ಯ ಕಡಿತಗೊಳಿಸಲಾಗುತ್ತದೆ ಎಂಬ ಚರ್ಚೆಗಳು ಇಲಾಖೆಯಲ್ಲಿ
ಪ್ರತಿ ವರ್ಷದಂತೆ ಇರದೇ ಕಳೆದ ಬಾರಿ ಹಾಗೇ ಈ ವರುಷವೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರು ಪೇರು ಉಂಟಾಗಿದೆ ಹೀಗಾಗಿ ಬೋಧನೆ ದೊಡ್ಡ ಸಮಸ್ಯೆ ಯಾಗಿದ್ದು ಏನು ಮಾಡಬೇಕು ಹೇಗೆ ಎಂಬ ದೊಡ್ಡ ಪ್ರಮಾಣದ ಚಿಂತೆ ಇಲಾಖೆಗೆ ಕಾಡುತ್ತಿದ್ದು ಇದರ ನಡುವೆ ಈಗ ಪಠ್ಯದಲ್ಲಿ ಕಡಿತ ಮಾಡುವ ಬಗ್ಗೆ ಇಲಾಖೆಯ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ
ಈ ಒಂದು ಕುರಿತು ಅಧಿಕಾರಿಗಳು ತೀರ್ಮಾನವನ್ನು ತಗೆದುಕೊಂಡಿದ್ದು ಶೀಘ್ರದಲ್ಲೇ ಸಭೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.ಸಧ್ಯ ಇಲಾಖೆಯ ಉನ್ನತ ಮಾಹಿತಿ ಪ್ರಕಾರ ಇಂಥಹ ದೊಂದು ನಿರ್ಧಾರವನ್ನು ಮಕ್ಕಳ ಮತ್ತು ಶಿಕ್ಷಕರ ಹಿತದೃಷ್ಟಿಯಿಂದ ಮಾಡಲಾಗಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.