ಬೆಂಗಳೂರು –
ಈ ಹಿಂದೆ CM BSY ನೇಮಿಸಿದ್ದ ಮತ್ತಷ್ಟು ಅಧಿಕಾ ರಿಗಳನ್ನು ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗುತ್ತಿದ್ದಂತೆಯೇ ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸೇರಿ 10 ಹುದ್ದೆಗಳನ್ನು ರದ್ದುಪಡಿಸ ಲಾಗಿದೆ.

ಸಿಎಂ ಕಾನೂನು ಸಲಹೆಗಾರರು ಸಿಎಂ ರಾಜಕೀಯ ಕಾರ್ಯದರ್ಶಿ ಆಡಳಿತ ಸಲಹೆಗಾರರು ಮತ್ತು ನೀತಿ ನಿರೂಪಣೆ ಸಲಹೆಗಾರರನ್ನು ಸಹ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.CM ಗೆ 4ನೇ ರಾಜಕೀಯ ಕಾರ್ಯದರ್ಶಿ ನೇಮಕ ಮಾಡಲಾಗಿದ್ದು ಪಿಎ ಆಗಿದ್ದ ವರಿಗೆ ಈಗ ಸಂಪುದ ದರ್ಜೆ ಸ್ಥಾನಮಾನ ಸಿಕ್ಕಂತಾ ಗಿದೆ

ಇನ್ನೂ ಪ್ರಮುಖವಾಗಿ ಯಡಿಯೂರಪ್ಪ ರಾಜಕೀ ಯ ಕಾರ್ಯದರ್ಶಿಗಳಾಗಿದ್ದ ಎಂಪಿ ರೇಣುಕಾ ಚಾರ್ಯ,ಡಿ ಎನ್ ಜೀವರಾಜ್ ಹಾಗೂ ಎನ್ ಆರ್ ಸಂತೋಷ್ ಅವರನ್ನ ಬೊಮ್ಮಾಯಿ ಸರ್ಕಾರ ಸೇವೆ ಯಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಲಾ ಗಿದೆ

ಇನ್ನೂ ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ. ಆರ್.ದೊರೆಸ್ವಾಮಿ,ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಯಡಿಯೂರಪ್ಪ ಕಾನೂನು ಸಲಹೆಗಾರರಾಗಿದ್ದ ಮೋಹನ್ ಲಿಂಬಿ ಕಾಯಿ,ಮಾಧ್ಯಮ ಸಲಹೆಗಾರ ಎನ್.ಭೃಂಗೇಶ್ ಸಿಎಂ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ್, ಮಾಧ್ಯಮ ಸಂಯೋಜಕ ಜಿ.ಎಸ್. ಸುನೀಲ್, ಸಿಎಂ ನೀತಿ ನಿರೂಪಣೆ ಕಾರ್ಯತಂತ್ರ ಸಲಹೆಗಾರ ಪ್ರಶಾಂತ್ ಅವರ ಹುದ್ದೆಗಳನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಮೊನ್ನೇ ಅಷ್ಟೇ ಕೆಲ ಐಎಎಸ್ ಅಧಿಕಾರಿಗಳನ್ನ ಬದಲಾವಣೆ ಮಾಡಲಾಗಿತ್ತು ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಈ ನಡೆ ಬಗ್ಗೆ ಬಿಜೆಪಿಯೊಳಗೆ ಗಂಭೀರ ಚರ್ಚೆ ಶುರುವಾಗಿದ್ದು ಇನ್ನೂ ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು