ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ನಿನ್ನೆ ರಾತ್ರಿ ವರೆಗೂ ನಾಡಿನ ಶಿಕ್ಷಕರ ಗ್ರೂಪ್ ನಲ್ಲೂ ಇದ್ದರು.ಶಿಕ್ಷಕರ ಕೆಲವೊಂದಿಷ್ಟು ಗ್ರೂಪ್ ನಲ್ಲಿ ಇವರನ್ನು ಸೇರಿಸಲಾಗಿತ್ತು. ಶಿಕ್ಷಕರು ಅನುಭವಿಸುವ ನೋವು ಸಮಸ್ಯೆ ನರಕಯಾತನೆ ತಿಳಿಯಲಿ ಎಂಬ ವಿಚಾರ ಗೊತ್ತಾಗಲಿ ಎಂಬ ಒಂದೇ ಒಂದು ಕಾರಣ ಕ್ಕಾಗಿ ಇವರನ್ನು ಗ್ರೂಪ್ ಗೆ ಸೇರಿಸಲಾಗಿತ್ತು.
ಹೌದು ಯಡಿಯೂರಪ್ಪ ರಾಜೀನಾಮೆ ನಂತರ ಅವರೊಂದಿಗೆ ಇದ್ದ ಎಲ್ಲಾ ಸಚಿವ ಸಂಪುಟದ ಸದಸ್ಯರು ರಾಜೀನಾಮೆ ನೀಡಿದ್ದು ಸಧ್ಯ ಹೊಸದಾಗಿ ಸಚಿವರ ಪಟ್ಟಿ ಸಿದ್ದವಾಗುತ್ತಿದೆ ಇನ್ನೂ ನೂತನ ಮುಖ್ಯಮಂತ್ರಿ ಸಂಪುಟಕ್ಕೆ ಕೆಲವೊಂದಿಷ್ಟು ಹಿರಿಯ ರನ್ನು ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇದರ ನಡುವೆ ನಿನ್ನೆ ರಾತ್ರಿವರೆಗೆ ಇದ್ದ ಸುರೇಶ್ ಕುಮಾರ್ ಅವರು ಬೆಳ್ಳಂ ಬೆಳಿಗ್ಗೆ ಗ್ರೂಪ್ ನಿಂದ ಲೆಪ್ಟ್ ಆಗಿದ್ದಾರೆ
ಹೌದು ಬಹುತೇಕ ಶಿಕ್ಷಕರ ಗ್ರೂಪ್ ನಲ್ಲಿದ್ದ ಇವರು ಲೆಪ್ಟ್ ಆಗಿದ್ದು ಇದರಿಂದಾಗಿ ಹಲವು ಅನುಮಾನ ಗಳು ಹುಟ್ಟಿಕೊಂಡಿವೆ.ಈ ಕುರಿತು ಕೆಲವೊಂದಿಷ್ಟು ಮಾತುಗಳು ಕೂಡಾ ವಲಯದಲ್ಲಿ ಕೇಳಿ ಬರುತ್ತಿವೆ