ಬೆಂಗಳೂರು –
ಸಚಿವ ಸಂಪುಟದ ವಿಸ್ತರಣೆ ಬೆನ್ನಲ್ಲೇ ಶಾಸಕರಿಂದ ಅಪಸ್ವರ ಕೇಳಿ ಬಂದಿದೆ.ಹೌದು ಒಂದು ಕಡೆಗೆ ಶಾಸಕರಿಂದ ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ರಚನೆ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಈ ನಡುವೆಯೇ ಸಚಿವ ಸ್ಥಾನ ಆಕಾಂಕ್ಷಿಗಳ ಒತ್ತಡವೂ ಹೆಚ್ಚಾಗಿದ್ದು, ಬಿಜೆಪಿ ಶಾಸಕ ಆನಂದ ಮಾಮನಿ ಅವರು ವಿಧಾನಸಭೆ ಉಪ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಘೋಷಣೆ ಮಾಡಿದ್ದಾರೆ.

ಹೌದು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಆನಂದ ಮಾಮನಿ ಅವರು ನನಗೆ ಸಚಿವ ಸ್ಥಾನ ನೀಡುವ ಭರವಸೆ ಇದೆ ನೀಡದಿದ್ದರೆ ಇಂದೇ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸ್ಪಷ್ಟಪಡಿಸಿದ್ದಾರೆ.ಸಚಿವ ಸ್ಥಾನ ಸಿಕ್ಕದಿದ್ದರೆ ಆನಂದ ಮಾಮನಿ ರಾಜೀನಾಮೆ ನೀಡುವ ಕುರಿತು ಮೊದಲು ಸಹ ಹೇಳಿದ್ದರು. ಈಗ ಕ್ಯಾಬಿನೆಟ್ ರಚನೆ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದರೂ ಇನ್ನೂ ಫೋನ್ ಕರೆ ಬಾರದ ಹಿನ್ನೆಲೆ ಯಲ್ಲಿ ರಾಜೀನಾಮೆ ಘೋಷಣೆ ಮಾಡೋದಾಗಿ ಮಾಮನಿ ಹೇಳಿದ್ದಾರೆ.ಇನ್ನೂ ಸಚಿವರ ಪಟ್ಟಿಗೆ ಅಂಕಿತ ಪಡೆಯಲು ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಪ್ರದಕ್ಷಿಣೆ ಹಾಕುತ್ತಿದ್ದ ಬೊಮ್ಮಾಯಿ ಅವರು ಇಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ದಾರೆ. ಸದ್ಯ ಮಂತ್ರಿಗಿರಿ ಪಟ್ಟಿಗೆ ಬಿಜೆಪಿ ಹೈಕಮಾಂಡ್ ನಾಯಕರ ಮುದ್ರೆ ಬಿದ್ದಿದೆ ಎನ್ನಲಾಗ್ತಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು