ದೊಡ್ಡ ದೊಡ್ಡ ಹುದ್ದೆಗಳಿಗೆ ರಾಜ್ಯದ NPS ಸಂಘದ ರಾಜ್ಯ ನಾಯಕರು – ಬಜೆಟ್ ನಲ್ಲಿ ಸಿಗದ OPS ಭರವಸೆ OPS ಕನಸು ನುಚ್ಚುನೂರು NPS ನೌಕರರ ಹೋರಾಟ ದುರುಪಯೋಗ ಪಡಿಸಿಕೊಂಡ್ರಾ ರಾಜ್ಯ ನಾಯಕರು…..

Suddi Sante Desk
ದೊಡ್ಡ ದೊಡ್ಡ ಹುದ್ದೆಗಳಿಗೆ ರಾಜ್ಯದ NPS ಸಂಘದ ರಾಜ್ಯ ನಾಯಕರು – ಬಜೆಟ್ ನಲ್ಲಿ ಸಿಗದ OPS ಭರವಸೆ OPS ಕನಸು ನುಚ್ಚುನೂರು NPS ನೌಕರರ ಹೋರಾಟ ದುರುಪಯೋಗ ಪಡಿಸಿಕೊಂಡ್ರಾ ರಾಜ್ಯ ನಾಯಕರು…..

ಬೆಂಗಳೂರು

ಆಯಕಟ್ಟಿನ ಸ್ಥಾನಗಳಿಗೆ NPS ಸಂಘದ ರಾಜ್ಯ ನಾಯಕರು OPS ಕನಸು ನುಚ್ಚುನೂರು.NPS ನೌಕರರ ಹೋರಾಟ ದುರುಪಯೋಗ ಪಡಿಸಿಕೊಂಡ ರಾಜ್ಯ ನಾಯಕರು ಹೌದು ಇಂತಹ ದೊಂದು ದೊಡ್ಡ ಪ್ರಶ್ನೆ ಈಗ ರಾಜ್ಯದ ಸರ್ಕಾರಿ ನೌಕರರ ವಲಯದಲ್ಲಿ ಕೇಳಿ ಬರುತ್ತಿದೆ

ಇತ್ತೀಚಿನ ಬೆಳವಣಿಗೆಯಲ್ಲಿ ಕರ್ನಾಟಕ ರಾಜ್ಯ NPS ನೌಕರರ ಸಂಘದಲ್ಲಿ ರಾಜ್ಯಾಧ್ಯಕ್ಷರ ಸರ್ವಾಧಿಕಾರತ್ವ ಮತ್ತು ಸಂಘದ ಆರಂಭದ ಸಂಘಟನೆ ಬೆಳವಣಿಗೆಯಲ್ಲಿ ಕಟು ವಿರೋಧಿಗ ಳಾಗಿದ್ದಂತವರು ಇಂದು ರಾಜ್ಯ ಅಧ್ಯಕ್ಷರಿಗೆ ತುಂಬಾ ಆಪ್ತರಾಗಿ ತಾವೇ ತಮ್ಮಿಂದಲೇ NPS ರದ್ದಾಗುತ್ತದೆ ಎಂಬಂತೆ ಬಿಂಬಿಸಿಕೊಳ್ಳುತ್ತಿರು ವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

ತಳಹದಿಯಿಂದ ಶ್ರಮಪಟ್ಟು ಕಷ್ಟ ನಷ್ಟಗಳನ್ನು ಎದುರಿಸಿ ಸಂಘಟನೆಯನ್ನು ಬೆಳೆಸಿದವರಿಗೆ ಸಂಘಟನೆಯಾಗಿ ದುಡಿದವರಿಗೆ ಇಂದು ತುಂಬಾ ನೋವಾಗುತ್ತಿರುವುದು ಇಡೀ ರಾಜ್ಯದ ಎನ್ ಪಿಎಸ್ ನೌಕರರ ಸಂಘದ ರಾಜ್ಯ ಜಿಲ್ಲಾ ತಾಲೂಕು ಪದಾಧಿಕಾರಿಗಳಿಗೂ ನುಂಗಲಾರದ ತುತ್ತಾಗಿದೆ.

ಸಂಘದ ಆರಂಭದಿಂದ ತಳಮಟ್ಟದಲ್ಲಿ ಹಳ್ಳಿಗ ಳಿಗೆ ಹೋಬಳಿ ತಾಲೂಕ ಕಚೇರಿ- ಕಚೇರಿಗಳಿಗೆ ತೆರಳಿ ಸಂಘಟನೆಯ ವಿಚಾರವನ್ನು ತಿಳಿಸಿ ಬಲಿಷ್ಠ ಸಂಘಟನೆನ್ನಾಗಿ ಮಾಡಿದವರು ತಾಲೂಕ ಮತ್ತು ಜಿಲ್ಲಾಧ್ಯಕ್ಷರುಗಳು,ಕೆಲವು ರಾಜ್ಯಘಟಕದವರು,
ಆದರೆ ದುರಂತವೆಂದರೆ ಸಂಘಟನೆ

ಆರಂಭದಿಂದಲೂ ಆಗಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಬಲ ನೀಡದಿರುವರನ್ನು ಜೊತೆಯಾಗಿರಿಸಿ ಇಂದಿನವರು ಪಟಾಲಂ ತಂಡ ವನ್ನು ಕಟ್ಟಿಕೊಂಡು ಹೋರಾಟ ವ್ಯರ್ಥಮಾಡು ತ್ತಿರುವದನ್ನು ನೋಡಿ NPS ನೌಕರರು ರಾಜ್ಯ ಘಟಕಕ್ಕೆ ಹಿಡಿಶಾಪ ಹಾಕುತ್ತಿರುವರು.

ಮತ್ತು ಇವತ್ತಿನ ಎನ್‌ಪಿಎಸ್ ನೌಕರರ ಸಂಘಟ ನೆಗೆ ವಿರೋಧವಾಗಿ ವರ್ತಿಸಿದ ಜೊತೆಯಾಗಿರಿಸಿ ಕೊಂಡು ಸಂಘವನ್ನು ದುರುಪಯೋಗ ಮಾಡಿ ಕೊಳ್ಳುತ್ತಿರುವದು ದುರಂತ

ಆದರೆ ಇಂದು ಪ್ರಾಮಾಣಿಕವಾಗಿ ಸಂಘಟಿಸಿದ ಸಂಘಟಕರಿಗೆ ಯಾವುದೇ ಮಾಹಿತಿಯನ್ನು ನೀಡದೆ ಸಂಘವನ್ನು ವೈಯಕ್ತಿಕ ಲಾಭದ ಉದ್ದೇಶ ದಿಂದ ಏಕಾಏಕಿಯಾಗಿ ರಾಜ್ಯ ಘಟಕದಿಂದ ಉಸ್ತುವಾರಿಯನ್ನಾಗಿ ನೇಮಿಸಿ ತಮಗೆ ತಿಳಿದ ವರನ್ನು ಈಡನ್ ಅಜೆಂಡಾದಡಿ ಕೇವಲ ಬೆರಳಿಗೆ ಎಷ್ಟು ತಮಗೆ ಬೇಕಾದವರನ್ನು ಸೇರಿಸಿ ಸಂಘ ಟನೆಯ ಪುನರಚನೆ ಬರದಡಿ ಒಂದು ಸಮು ದಾಯಕ್ಕೆ ಸೀಮಿತಗೊಳಿಸಿ ಪ್ರಾಮಾಣಿಕವಾಗಿ ದೊಡ್ಡವರನ್ನ ಬದಿಗೊತ್ತಿ ಮಾಹಿತಿ ನೀಡದೆ

ಸಂಘಟನೆನಾಪೂರ್ವ ರಚನೆ ಮಾಡಿಕೊಳ್ಳುತ್ತಿ ರುವುದು ನೌಕರರ ಒಳಗೆ ಅಸಮಾಧಾನ ಬುಗಿ ಲೇದ್ದಿರುವುದು ಜಗಜ್ಜಾಹೀರವಾಗಿದೆ.

ರಾಜ್ಯ ಘಟಕದವರು NPS ಸಂಘದಿಂದ ಬೆಳೆದು ಇಂದು ಈ ಸರ್ಕಾರದಲ್ಲಿ ಸಚಿವಾಲಯದ ಹಾಗೂ ಸರ್ಕಾರದ ಆಯಕಟ್ಟಿನ ಸ್ಥಾನಗಳನ್ನು ಪಡೆದು NPS ಹೋರಾಟ ಕೈಬಿಡುವ ಹಂತದಲ್ಲಿರುವದು ಗುಟ್ಟಾಗಿ ಉಳಿದಿಲ್ಲ

ಇದನ್ನು ಗಮನಿಸಿರುವ ರಾಜ್ಯ ಸರ್ಕಾರ ಎನ್‌ಪಿಎಸ್ ನೌಕರರ ಸಂಘಟನೆ ಇತ್ತೀಚಿಗೆ ಒಡೆದ ಮನೆ ಅಂತಾಗಿದ್ದು ಅವರಲ್ಲಿ ಒಗ್ಗಟ್ಟಿಲ್ಲ ಎಂಬ ಸಂದೇಶವನ್ನು ಅರಿತುಕೊಂಡು ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ನೌಕರರ ಸಂಘಟನೆಯ ಕಳೆದ ಮಾರ್ಚ್ ಹೋರಾಟದ ವಿಷಯವನ್ನು ಉಲ್ಲೇಖಿಸಿ ಸಮಿತಿಯ

ವರದಿಯನ್ನು ಬಂದ ನಂತರ ಸಮಿತಿಯ ವರದಿ ಬಂದ ನಂತರ ಎನ್ಪಿಎಸ್ ರದ್ದತಿಯನ್ನು ಮಾಡು ವುದಾಗಿ ತಿಳಿಸಿರುವುದಲ್ಲವೇ ಉಪಮುಖ್ಯ ಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಕಷ್ಟಕರ ಆದರೆ ಸತ್ಯ ನಮ್ಮ ಐದು ಗ್ಯಾರಂಟಿಗಳ ಕಡೆ ನಮ್ಮ ಗಮನವಿದೆ ಮುಂದೆ ಅದರ ಬಗ್ಗೆ ಆಲೋಚನೆ ಮಾಡುತ್ತೇವೆ ಎಂಬುದನ್ನು ಹೊರತುಪಡಿಸಿದರೆ ಇಲ್ಲ ಯಾವುದೇ ಬದಲಾವಣೆ ಕಾಣುತ್ತಿಲ್ಲ.

ಲೋಕಸಭಾ ಚುನಾವಣೆಯ ಸನ್ನಿಹದಲ್ಲಿ ಮತ್ತೊಮ್ಮೆ ಫಾರ್ ಒಪಿಎಸ್ ಎಂಬ ಅಧ್ಯಯನ ವನ್ನು ಮಾಡಿಸಿಕೊಂಡು ಕಾಂಗ್ರೆಸ್ ಸರ್ಕಾರ ತಮ್ಮ ಪಕ್ಷದ ಲೋಕಸಭಾ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ಮತ್ತೊಮ್ಮೆ ಇವರನ್ನು ಬಳಸಿಕೊಳ್ಳುವುದು ಅಷ್ಟೇ ಎಂದು ನೌಕರರು ಮಾತನಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ

(ವಾಟ್ಸ್ ಆಪ್ ನಲ್ಲಿ ವೈರಲ್ ಆಗಿರುವ ಸಂದೇಶದ ಪ್ರತಿ)

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.