ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಧಾರವಾಡ ಜಿಲ್ಲಾ ಕಚೇರಿಯಲ್ಲಿ ಅದ್ದೂರಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ – ಸಂಘಟನೆಯ ಜಿಲ್ಲಾಧ್ಯಕ್ಷರು ಮುಖಂಡರು ಉಪಸ್ಥಿತಿ……

Suddi Sante Desk
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಧಾರವಾಡ ಜಿಲ್ಲಾ ಕಚೇರಿಯಲ್ಲಿ ಅದ್ದೂರಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ – ಸಂಘಟನೆಯ ಜಿಲ್ಲಾಧ್ಯಕ್ಷರು ಮುಖಂಡರು ಉಪಸ್ಥಿತಿ……

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಚೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಹೌದು ಜಿಲ್ಲಾ ಸರಕಾರಿ ನೌಕರರ ಸಂಘದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಧ್ವಜಾರೋಹಣವನ್ನು ನೆರವೇರಿಸಿದರು.

ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಎಲ್ಲ ನೌಕರರ ಭಾಂಧವರಿಗೆ ಮೊದಲಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಭ ಕಾಮನೆಗಳನ್ನು ಕೋರಿದರು.ರಾಜ್ಯಸರ್ಕಾರಿ ನೌಕರರು ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಕಾರಣದಿಂದಾಗಿ ಕರ್ನಾಟಕ ರಾಜ್ಯ, ದೇಶದಲ್ಲಿ ಯೇ ಅಭಿವೃಧಿಯಲ್ಲಿ ಮುಂಚೂಣಿಯಲ್ಲಿದೆ.

ಕರ್ನಾಟಕ ಸರಕಾರ ಸರಕಾರಿ ನೌಕರರಿಗಾಗಿ ನಗದು ರಹಿತ ಚಿಕಿತ್ಸೆ, ಗಳಿಕೆ ರಜೆ ನಗದೀಕರಣ ಸೌಲಭ್ಯ, ಕೆ.ಜಿ.ಐ.ಡಿ ಗಣಕೀಕರಣ, ನೌಕರರ ಸೇವಾಸೌಲಭ್ಯ ಆನ್‍ಲೈನ್ ವ್ಯವಸ್ಥೆ ಮುಂತಾದ ಹಲವಾರು ಸೌಲಭ್ಯಗಳನ್ನು ಒದಗಿಸಿರುತ್ತದೆ. ಇದರಿಂದಾಗಿ, ನೌಕರರೂ ಸಹ ಉತ್ಸಾಹದಿಂದ ಕೆಲಸ ಮಾಡುವಂತಾಗಿದೆ.

ಬರುವ ಸಪ್ಟೆಂಬರ್-2023 ತಿಂಗಳಿನಲ್ಲಿ ಧಾರವಾಡ ಜಿಲ್ಲೆಯ ನೂತನ ಶಾಸಕರ ಮತ್ತು ಸಚಿವರ ಅಭಿನಂಧನಾ ಕಾರ್ಯಕ್ರಮ ಹಾಗೂ ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕಗಳಿಸಿದ ರಾಜ್ಯ ಸರಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಮತ್ತು ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗುವದು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಸ್ತ ರಾಜ್ಯ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹತ ಸಂಘಟನೆಯಾಗಿದ್ದು ನೌಕರರ ಶ್ರೇಯೋಭಿವೃದ್ಧಿ ಹಾಗೂ ಸರ್ಕಾರದ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪಾರದರ್ಶಕವಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಸೌಹಾರ್ಧ ವಾತಾವರಣದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಂಪ್ರ ದಾಯದೊಂದಿಗೆ ರಾಷ್ಟ್ರ ಹಾಗೂ ರಾಜ್ಯದಲ್ಲಿಯೇ ಮಾದರಿ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ತದೆ.

ಮುಖ್ಯ ಅತಿಥಿಗಳಾಗಿ ಎ.ಆಯ್.ಪಿ,ಟಿ.ಎಫ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ನಿಕಟ ಪೂರ್ವ ಅಧ್ಯಕ್ಷ ಎಸ್.ಕೆ. ರಾಮದುರ್ಗ ನಿಕಟ ಪೂರ್ವ ಕಾರ್ಯದರ್ಶಿ ಎಸ್.ಜಿ. ಸುಬ್ಭಾಪೂರ ಮಠ ಆಗಮಿಸಿದ್ದರು.

ಗೌರವಾಧ್ಯಕ್ಷ ರಮೇಶ ಲಿಂಗದಾಳ, ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಜಿಲ್ಲಾಖಜಾಂಚಿ, ನೌಕರ ಭವನ ಕಾರ್ಯದರ್ಶಿ ಗಿರೀಶ ಚೌಡಕಿ, ಸಂಘದ ಉಪಾಧ್ಯಕ್ಷ ರಾಜೇಶ ಕೋನರಡ್ಡಿ, ಸಿದ್ದು ಐರಾಣಿ, ಸಾಂಸ್ಕøತಿಕ ಕಾರ್ಯದರ್ಶಿ ಡಾ. ಬಸವರಾಜ ಕುರಿಯವರ ಜಂಟಿ ಕಾರ್ಯದರ್ಶಿಗಳಾದ ಡಾ.ಸುರೇಶ ಹಿರೇಮಠ,

ವೃಂದ ಸಂಘಗಳ ಅಧ್ಯಕ್ಷ ಪದಾಧಿಕಾರಿ ಶಾಂತಾ ಶೀಲವಂತರ, ಚಂದ್ರಿಕಾ ದಮ್ಮಳ್ಳಿ, ವೀಣಾ ಹೊಸಮನಿ ಆರ್.ಸಿ. ದೇಸಾಯಿ ವಿವಿಧ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ನೌಕರರ ಭಾಂಧವರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಮಂಜುನಾಥ ದೊಡ್ಡಮನಿ, ದ್ವಜವಂದನೆ ಗೌರವ ಸಲ್ಲಿಸಿದರು. ಜಿಲ್ಲಾಕಾರ್ಯದರ್ಶಿ ಮಂಜುನಾಥ ಯಡಳ್ಳಿ ನಿರೂಪಿಸಿದರು. ಹಂಪಣ್ಣಾ ಹರ್ಲಾಪೂರ ವಂದಿಸಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.