ಬೆಂಗಳೂರು –
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಂಡ ದಿನ ಘೋಷಣೆ ಮಾಡಿದ ಯೋಜನೆ ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಆದೇಶದೊಂದಿಗೆ ಜಾರಿ ಮಾಡಿದ್ದಾರೆ. ಹೌದು ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರದ ಬಳಿಕ ಘೋಷಿಸಿದ ಮೊದಲ ಯೋಜನೆಯನ್ವಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು.
ಇನ್ನೂ ಪ್ರಮುಖವಾಗಿ ಈ ಒಂದು ಯೋಜನೆ ಯಲ್ಲಿ ಪಿಯುಸಿ,ಡಿಪ್ಲೊಮಾ,ಐಟಿಐ ವಿದ್ಯಾರ್ಥಿಗಳಿಗೆ 2,500 ರೂ.ವಿದ್ಯಾರ್ಥಿನಿಯರಿಗೆ 3,000 ರೂ. ನೀಡಲಾಗುವುದು.ಪದವಿಯ ಬಿಎ, ಬಿಎಸ್ಸಿ, ಬಿಕಾಂ ವಿದ್ಯಾರ್ಥಿಗಳಿಗೆ 5000 ರೂಪಾಯಿ ಮತ್ತು ವಿದ್ಯಾರ್ಥಿನಿಯರಿಗೆ 5500 ರೂ.ನೀಡಲಾಗುವುದು
ಎಲ್.ಎಲ್.ಬಿ.ಪ್ಯಾರಾಮೆಡಿಕಲ್,ಬಿ ಫಾರ್ಮಾ, ನರ್ಸಿಂಗ್ ವಿದ್ಯಾರ್ಥಿಗಳಿಗೆ 7,500 ರೂಪಾಯಿ, ವಿದ್ಯಾರ್ಥಿನಿಯರಿಗೆ 8000 ರೂ.ನೀಡಲಾಗುವುದು. ಎಂಬಿಬಿಎಸ್, ಬಿಇ, ಬಿಟೆಕ್, ಪಿಜಿ ವಿದ್ಯಾರ್ಥಿಗಳಿಗೆ 10,000 ರೂ., ವಿದ್ಯಾರ್ಥಿನಿಯರಿಗೆ 11,000 ರೂಪಾಯಿ ನೀಡಲಾಗುತ್ತದೆ.ಕೃಷಿ ಜಮೀನು ಹೊಂದಿರುವ ರೈತರ ಮಕ್ಕಳಿಗೆ ಶಿಷ್ಯವೇತನ ನೀಡಲಾಗುತ್ತಿದ್ದು ಸರ್ಕಾರ ಈ ಒಂದು ಯೋಜನೆ ಕುರಿತು ಆದೇಶವನ್ನು ಅಧಿಕೃತವಾಗಿ ಹೊರಡಿಸಿದೆ