ಅಳ್ನಾವರ –
ಧಾರವಾಡದ ಮಂಡಿಹಾಳ ಗ್ರಾಮದ ಶಿವಾನಂದ ಮಠದಲ್ಲಿ ಧಾರವಾಡದ ಬಿಜೆಪಿ ಪಕ್ಷದ ಯುವ ಮೋರ್ಚ ಅಳ್ನಾವರ ಕಾರ್ಯಾಕಾರಣಿ ಸಭೆ ನಡೆಯಿತು.ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಲವು ಗಣ್ಯರು ಪಕ್ಷದ ಯುವ ಮುಖಂಡರು ಭಾಗವಹಿಸಿದರು

ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಈ ಒಂದು ಸಭೆ ಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆಯನ್ನು ಮಾಡಲಾಯಿತು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕಬ್ಬಡ್ಡಿ ಪಂದ್ಯಾ ವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ, ಅಂತರರಾಷ್ಟ್ರೀಯ ಮಟ್ಟಕ್ಕೆ ಸ್ಥಾನ ಪಡೆದ

ಅಳ್ನಾವರ ಮಂಡಲದ ರಾಮಾಪುರ ಗ್ರಾಮದ ಯುವಕರಾದ,ನಾಗರಾಜ ಹಂಚಿನಮನಿ, ಮಾಲತೇಶ ಹಾಗೂ ರವಿ ಹಿತ್ತಲಮನಿ ಇವರನ್ನು ಭಾಜಪ ಯುವ ಮೋರ್ಚಾ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಯುವ ಮೋರ್ಚಾದ ಮಂಡಲ ಅಧ್ಯಕ್ಷರಾದ ಚಂದ್ರು ತಲ್ಲೂರ,ವಿಭಾಗೀಯ ಸಂಘಟನಾ ಕಾರ್ಯದರ್ಶಿಗಳಾದ ಜಯತೀರ್ಥ ಕಟ್ಟಿ,ರಾಜ್ಯ ಯುವಮೋರ್ಚಾ ಕಾರ್ಯದರ್ಶಿಯಾದ ಪ್ರಕಾಶ ಶೃಂಗೇರಿ,ಜಿಲ್ಲಾಧ್ಯಕ್ಷರಾದ ಬಸವರಾಜ ಕುಂದಗೂಳಮಠ,ಮಂಡಲ ಅಧ್ಯಕ್ಷರಾದ ಕಲ್ಮೆಶ ಬೇಲೂರು,ನಾರಾಯಣ ಮೋರೆ,ಶಂಕರ ಕೋಮಾರದೇಸಾಯಿ, ಸೇರಿದಂತೆ ಮಂಡಲದ ಪ್ರಮುಖರು ಹಾಗೂ ಯುವ ಮೋರ್ಚಾದ ಎಲ್ಲ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
