ಭಜನೆ ಮಾಡುತ್ತಾ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಎನ್ ಹೆಚ್ ಕೋನರೆಡ್ಡಿ – ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಹಿರಿಯರೊಂದಿಗೆ ಭಜನೆ ಮಾಡಿ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಶಾಸಕರು…..

Suddi Sante Desk
ಭಜನೆ ಮಾಡುತ್ತಾ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಎನ್ ಹೆಚ್ ಕೋನರೆಡ್ಡಿ – ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಹಿರಿಯರೊಂದಿಗೆ ಭಜನೆ ಮಾಡಿ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಶಾಸಕರು…..

ನವಲಗುಂದ

ಭಜನೆ ಮಾಡುತ್ತಾ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಎನ್ ಹೆಚ್ ಕೋನರೆಡ್ಡಿ – ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಹಿರಿಯರೊಂ ದಿಗೆ ಭಜನೆ ಮಾಡಿ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡ ಶಾಸಕರು

ಸಾಮಾನ್ಯವಾಗಿ ಜನಪ್ರತಿನಿಧಿಗಳು ಅಂದರೆ ಪ್ರತಿ ದಿನ ಬಿಡುವಿಲ್ಲದ ಕೆಲಸ ಕಾರ್ಯಗಳು ಒಂದಾದ ಮೇಲೊಂದರಂತೆ ಒತ್ತಡ ಆ ಸಭೆ ಈ ಸಭೆ ಆ ಕಾರ್ಯಕ್ರಮ ಎನ್ನುತ್ತಾ ದಿನದ 24 ಗಂಟೆಯೂ ಬ್ಯೂಜಿಯಾಗಿರುತ್ತಾರೆ ಇಂತಹ ಒತ್ತಡದ ನಡುವೆ ಯೂ ಕೂಡಾ ನವಲಗುಂದ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಬಿಡುವು ಮಾಡಿ ಕೊಂಡು ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮವೊಂ ದರಲ್ಲಿ ಭಾಗಿಯಾಗಿದ್ದಾರೆ.

ಹೌದು ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು.ಇದೇ ವೇಳೆ ಗ್ರಾಮ ವಾಸ್ತವ್ಯದ ನಿಮಿತ್ತವಾಗಿ ಕಲ್ಲೇಶ್ವರ ದೇವಸ್ಥಾನದಲ್ಲಿ ಹಿರಿಯರೊಡನೆ ಕೆಲ ಸಮಯ ವನ್ನು ಕಳೆದ ಶಾಸಕರು ಗ್ರಾಮದಲ್ಲಿನ ಸಮಸ್ಯೆ ಗಳನ್ನು ಆಲಿಸಿದರು ನಂತರ ಅವರೊಂದಿಗೆ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ಮಾಡಿದರು.

ಕೆಲ ಸಮಯ ಗ್ರಾಮದ ಹಿರಿಯರೊಂದಿಗೆ ಸಾಮಾನ್ಯರಂತೆ ಕುಳಿತುಕೊಂಡ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿರಿಯರೊಂ ದಿಗೆ ಭಾಗವಹಿಸುತ್ತಾ ಬಿಡುವಿಲ್ಲದ ಒತ್ತಡದ ನಡುವೆಯೂ ಅತ್ಯಂತ ಸಂತೋಷ ಗೊಂಡಿದ್ದು ಕಂಡು ಬಂದಿತು ಈ ಮೂಲಕ ಶಾಸಕರು ತಮ್ಮ ಬಾಲ್ಯದ ದಿನಗಳನ್ನ ನೆನಪಿಸಿಕೊಂಡರು.

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.