ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆ ಆಲಿಸಿದ ಶರಣು ಅಂಗಡಿ – ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿಯಾಗಿ ನಡೆದಿದೆ ಶರಣು ಅಂಗಡಿ ಚುನಾವಣೆಯ ಸಿದ್ದತೆ…..

Suddi Sante Desk
ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆ ಆಲಿಸಿದ ಶರಣು ಅಂಗಡಿ – ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿಯಾಗಿ ನಡೆದಿದೆ ಶರಣು ಅಂಗಡಿ ಚುನಾವಣೆಯ ಸಿದ್ದತೆ…..

ಹಾವೇರಿ ಗದಗ

ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆ ಆಲಿಸಿದ ಶರಣು ಅಂಗಡಿ – ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿಯಾಗಿ ನಡೆದಿದೆ ಶರಣು ಅಂಗಡಿ ಚುನಾವಣೆಯ ಸಿದ್ದತೆ

ಲೋಕಸಭಾ ಕ್ಷೇತ್ರದ ಚುನಾವಣೆಗೆ ಇನ್ನೇನು ಕೆಲವೇ ಕೆಲ ದಿನಗಳು ಬಾಕಿ ಇರುವಾಗಲೇ ಇತ್ತ ಎಲ್ಲರೂ ಈ ಒಂದು ಚುನಾವಣೆಗೆ ಭರ್ಜರಿ ಯಾದ ಸಿದ್ದತೆಯನ್ನು ಮಾಡುತ್ತಿದ್ದಾರೆ.ಇನ್ನೂ ಇತ್ತ ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಯುವ ನ್ಯಾಯವಾದಿ ಬಿಜೆಪಿ ಪಕ್ಷಕ್ಕಾಗಿ ಹಗಲು ರಾತ್ರಿ ಎನ್ನದೇ ಸಂಘಟನೆ ಮಾಡುತ್ತಾ ದುಡಿಯುತ್ತಿ ರುವ ಶರಣು ಅಂಗಡಿ ಭರ್ಜರಿಯಾದ ಸಿದ್ದತೆ ಯನ್ನು ಮಾಡುತ್ತಿದ್ದಾರೆ.

ಹೌದು ಈಗಾಗಲೇ ಕಳೆದ ಕೆಲ ವರ್ಷಗಳಿಂದ ಬಿಜೆಪಿ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟನೆ ಮಾಡಿಕೊಂಡು ಬರುತ್ತಿರುವ ಇವರು ಈಗ ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.

ಈ ಒಂದು ನಿಟ್ಟಿನಲ್ಲಿ ಹಾವೇರಿ ಮತ್ತು ಗದಗ ಲೋಕಸಭಾ ಕ್ಷೇತ್ರದಲ್ಲಿ ಸಿದ್ದತೆ ಮಾಡುತ್ತಾ ಹತ್ತು ಹಲವಾರು ಕೆಲಸ ಕಾರ್ಯಗಳಲ್ಲಿ ತೋಡಗಿದ್ದಾರೆ. ಒಂದು ಕಡೆಗೆ ಪಕ್ಷದ ಸಂಘಟನೆ ಮತ್ತೊಂದು ಕಡೆ ವೃತ್ತಿ ಮಾಡುತ್ತಾ ಸಧ್ಯ ಹಾವೇರಿ ಮತ್ತು ಗದಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಯನ್ನು ಮಾಡುವು ದನ್ನು ಮುಂದಿಟ್ಟುಕೊಂಡು ಸಿದ್ದತೆಯನ್ನು ಆರಂಭ ಮಾಡಿದ್ದಾರೆ.

ಹೌದು ಈಗಾಗಲೇ ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ಠಿಕಾಣೆಯನ್ನು ಹೂಡಿರುವ ಇವರು ಸಧ್ಯ ಇಲ್ಲಿನ ಜನತೆಯನ್ನು ಭೇಟಿಯಾಗುತ್ತಾ ಅವರೊಂದಿಗೆ ಸಭೆಯನ್ನು ಮಾಡುತ್ತಾ ಸಮಸ್ಯೆ ಆಲಿಸುತ್ತಿದ್ದಾರೆ ಇದರೊಂದಿಗೆ ಯುವ ನಾಯಕ ಶರಣು ಅಂಗಡಿ ಅಖಾಡಕ್ಕಿಳಿದಿದ್ದಾರೆ.

ಜಿಲ್ಲೆಯಲ್ಲಿನ ಕೆಲ ಯುವ ಪಡೆಯನ್ನು ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನು ಬೆನ್ನಿಗೆ ಕಟ್ಟಿಕೊಂಡು ಬಿಡುವಿಲ್ಲದೇ ಸುತ್ತಾಟವನ್ನು ಮಾಡುತ್ತಿದ್ದಾರೆ.ಇವೆಲ್ಲದರ ನಡುವೆ ಜಿಲ್ಲೆಯ ಹಾವೇರಿ ತಾಲ್ಲೂಕಿನ ಯಲವಿಗೆ ಗ್ರಾಮದಲ್ಲಿ ಗ್ರಾಮ ಸಭೆ ಮಾಡಿದರು.

ಇದರೊಂದಿಗೆ ಹೂವಿನ ಶಿಗ್ಲಿ ಯಲ್ಲೂ ಕೂಡಾ ಸಭೆಯನ್ನು ಮಾಡಿದರು ಗ್ರಾಮದಲ್ಲಿನ ಸಮಸ್ಯೆಯನ್ನು ಆಲಿಸಿ ಬರುವ ದಿನಗಳಲ್ಲಿ ಈ ಒಂದು ಕುರಿತಂತೆ ಇತ್ಯರ್ಥ ಮಾಡುವ ಭರವಸೆ ಯನ್ನು ನೀಡಿದರು.ಸಭೆಯಲ್ಲಿ ಗ್ರಾಮದ ಮುಖಂ ಡರು ಗ್ರಾಮಸ್ಥರು ಪಕ್ಷದ ಮುಖಂಡರು ಕಾರ್ಯ ಕರ್ತರು ಸೇರಿದಂತೆ ಹಲವರು ಶರಣು ಅಂಗಡಿ ಯವರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಸಾಥ್ ನೀಡಿ ಬರುವ ದಿನಗಳಲ್ಲಿ ನಿಮ್ಮೊಂದಿಗೆ ನಾವು ಎಂಬ ಭರವಸೆಯನ್ನು ನೀಡಿದರು.

ಸುದ್ದಿ ಸಂತೆ ನ್ಯೂಸ್ ಹಾವೇರಿ ಗದಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.