ತುಮಕೂರು –
ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ನರಸಿಂಹರಾಜು ವಿರುದ್ದ ಪ್ರಕರಣ ದಾಖಲು ಮಾಡಿದ ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘ

ಜಿಲ್ಲಾ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ರವರಿಗೆ ಗೌರವಿಸಿ ಸನ್ಮಾನಿಸಿ ವೇದಿಕೆ ಯಿಂದ ಹಿಂತಿರುಗಿ ಬರುವಾಗ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಧ್ಯಕ್ಷರಾದ ಶ್ರೀಮತಿ ಅನುಸೂಯದೇವಿ ರವರನ್ನು ತಡೆದು ಅನುಚಿತವಾಗಿ ವರ್ತಿಸಿ,ಸಾರ್ವಜನಿಕವಾಗಿ ಅವಮಾನಪಡಿಸಿದ್ದಲ್ಲದೇ ಹಲ್ಲೆಗೆ ಯತ್ನಿಸಿ,ಕೊಲೆ ಬೆದರಿಕೆ ಹಾಕಿದ್ದಾರೆ.

ಜಿಲ್ಲೆಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ನರಸಿಂಹ ರಾಜು ರವರ ವಿರುದ್ದ ಜಿಲ್ಲಾ ಪೋಲೀಸ್ ವರಿಷ್ಠಾ ಧಿಕಾರಿಗಳ ಕಛೇರಿಯಲ್ಲಿ ದೂರು ದಾಖಲಾಗಿದೆ.
ಸಂವಿಧಾನಾತ್ಮಕವಾಗಿ,ಮಹಿಳಾ ಮೀಸಲಾತಿಗಾಗಿ ಹಾಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಯಲ್ಲಿ ಶೇ.33 ಮಹಿಳಾ ಮೀಸಲಾತಿ ಕಲ್ಪಿಸಿದ್ದು,ಅದೇ ರೀತಿಯಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಘದಲ್ಲೂ ಮಹಿಳಾ ಮೀಸಲಾತಿ ಕೊಡಿ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಮನವಿ ಸಲ್ಲಿಸಿ,ವೇದಿಕೆಯಿಂದ ವಾಪಸ್ ಮರಳುವಾಗ ಈ ಒಂದು ಅಮಾನವೀಯ ಘಟನೆ ನಡೆಯಿತು

ಸಾರ್ವಜನಿಕ ಸಭೆಯಲ್ಲಿ ನೌಕರರ ಅಧ್ಯಕ್ಷ ನರಸಿಂ ಹರಾಜು ಅಸಹನೆಗೊಂಡು ತಮ್ಮ ಅಧಿಕಾರ ದರ್ಪದಿಂದ ಮಹಿಳಾ ನೌಕರರ ವಿರುದ್ದ ಇಂತಹ ಅಗೌರವ ತೋರಿ ಅನುಚಿತವಾಗಿ ವರ್ತನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಜಿಲ್ಲಾಧ್ಯಕ್ಷೆ ಶ್ರೀಮತಿ ಅನುಸೂಯದೇವಿ ದೂರು ನೀಡಿದ್ದಾರೆ..