ಯಾದಗಿರಿ –
ಅತಿಥಿ ಶಿಕ್ಷಕರಿಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.ಹೌದು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಇಂಗ್ಲಿಷ್ ಹಾಗೂ ಗಣಿತ ವಿಷಯಗಳ ಅತಿಥಿ ಶಿಕ್ಷಕರ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು


ಯಾದಗಿರಿ ಯಲ್ಲಿ ಮಾತನಾಡಿದ ಅವರು ಯಾದಗಿರಿ ಮತ್ತಿತರ ಜಿಲ್ಲೆಗಳಲ್ಲಿ ಈ ಬಗ್ಗೆ ಹೆಚ್ಚಿನ ಮಹತ್ವ ವಹಿಸಲಾಗುವುದು.ಅತಿಥಿ ಶಿಕ್ಷಕರ ಸಂಭಾವನೆ ಸೇರಿದಂತೆ ಒಂದಿಷ್ಟು ಬೇಡಿಕೆಗಳ ಬಗ್ಗೆಯೂ ಗಮನ ಹರಿಸಲಾಗುವುದು ಎಂದರು.

ಇನ್ನೂ ಸಿಇಟಿ ಹಾಗೂ ಟಿಇಟಿ ಪರೀಕ್ಷೆಗಳಲ್ಲಿನ ಮಾನದಂಡಗಳಲ್ಲಿ ಏರಿಕೆಯಿದ್ದರಿಂದ ಈ ಭಾಗದಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ.ಬೇರೆ ಜಿಲ್ಲೆಯಿಂದ ನೇಮಕಾತಿಗೊಂಡವರು ಇಲ್ಲಿಗೆ ಬಂದು ವರ್ಗಾವಣೆ ಗೊಳ್ಳುವುದು ಶಿಕ್ಷಣ ಇಲಾಖೆಯಲ್ಲಷ್ಟೇ ಅಲ್ಲ ಆರೋಗ್ಯ ಸೇರಿದಂತೆ ಕೆಲವೊಂದು ಇಲಾಖೆಗಳನ್ನೂ ಇದೆ.ಈಗ ಈ ಭಾಗದ ಕೊರತೆ ನೀಗಿಸಲು ಇಲ್ಲಿಗೆ ಅನುಗುಣವಾಗಿ ಶಿಕ್ಷಕರ ನೇಮಕಕ್ಕೆ ಸಿಇಟಿ, ಟಿಇಟಿ ನಡೆಸಲಾಗುತ್ತದೆ ಎಂದರು.






















