ಧಾರವಾಡ ದಲ್ಲಿ ಎಲೆಕ್ಟ್ರಿಕ್ ಬಿಲ್ ಕಲೆಕ್ಟರ್ ನ ಬರ್ಬರ ಹತ್ಯೆ – ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ ಪೊಲೀಸರು…..

Suddi Sante Desk
ಧಾರವಾಡ ದಲ್ಲಿ ಎಲೆಕ್ಟ್ರಿಕ್ ಬಿಲ್ ಕಲೆಕ್ಟರ್ ನ ಬರ್ಬರ ಹತ್ಯೆ – ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ ಪೊಲೀಸರು…..

ಧಾರವಾಡ

ಧಾರವಾಡ ದಲ್ಲಿ ಎಲೆಕ್ಟ್ರಿಕ್ ಬಿಲ್ ಕಲೆಕ್ಟರ್ ನ ಬರ್ಬರ ಹತ್ಯೆ – ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ ಪೊಲೀಸರು.ಹೌದು ಎಲೆಕ್ಟ್ರಿಕ್ ಬಿಲ್ ಕಲೆಕ್ಟರ್ ರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ದಲ್ಲಿ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ ದುಷ್ಕರ್ಮಿಗಳು.

ಇನ್ನೂ ಆರೋಪಿಗಳ ಬಂಧನಕ್ಕೆ ಜಾಲವನ್ನು ಬೀಸಿದ್ದಾರೆ ಪೊಲೀಸರು.ಧಾರವಾಡ ಹೊರ ವಲಯದ ಹಳಿಯಾಳ್ ಬೈಪಾಸ್ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಯನ್ನು ಮಾಡಿದ್ದಾರೆ ದುಷ್ಕರ್ಮಿ ಗಳು.ರಜಾಕ್ ಕವಲಗೇರಿ ಎಂಬ ಬಿಲ್ ಕಲೆಕ್ಟರ್ ಹತ್ಯೆಯಾದ ವ್ಯಕ್ತಿಯಾಗಿದ್ದಾನೆ.ಹಳಿಯಾಳ್ ಸೇತುವೆ ಬಳಿ ಬೈಕ್ ಮೇಲೆ ಬಂದಿದ್ದ ಯುವಕರು.

ಈ ವೇಳೆ ರಜಾಕ್ ನನ್ನ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ದುಷ್ಕರ್ಮಿಗಳು.ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೊಲೆಗೆ ಕಾರಣ‌‌ ವನ್ನು ಪೊಲೀಸರು ಹುಡುಕಾಡುತ್ತಿ ದ್ದಾರೆ ಉಪ ನಗರ ಠಾಣಾ‌‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.