ಕೋಲಾರ –
ಒಂದೇ ನಂಬರ್ ನಲ್ಲಿ ಮೂರು ಬಸ್ ಗಳು ಓಡಾಡುತ್ತಿದ್ದು ಈ ಕುರಿತಂತೆ ಖಚಿತವಾದ ಮಾಹಿತಿಯನ್ನು ಪಡೆದುಕೊಂಡ RTO ಅಧಿಕಾರಿ ಗಳು ಕಾರ್ಯಾಚರಣೆ ಮಾಡಿ ಮೂರು ಬಸ್ ಗಳನ್ನು ವಶಕ್ಕೆ ತಗೆದುಕೊಂಡಿದ್ದಾರೆ.ಒಂದೇ ನಂಬರ್ ನಲ್ಲಿ ಓಡುತ್ತಿದ್ದ ಮೂರು ಖಾಸಗಿ ಬಸ್ ಗಳನ್ನು ವಶಕ್ಕೆ ತಗೆದುಕೊಳ್ಳಲಾಗಿದೆ.ಲಕ್ಷಾಂತರ ರೂಪಾಯಿ ತೆರಿಗೆ ವಂಚಸಿ ಓಡಾಡುತ್ತಿದ್ದ ಮೂರು ಖಾಸಗಿ ಬಸ್ ಗಳನ್ನು ವಶಕ್ಕೆ ತಗೆದುಕೊಳ್ಳಲಾಗಿದೆ.

ಕೋಲಾರ ಜಿಲ್ಲೆ ಮುಳಬಾಗಲು ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಬಳಿ ವಶಕ್ಕೆ ತಗೆದುಕೊಳ್ಳ ಲಾಗಿದೆ.ಮುಳಬಾಗಲು, ಬೇತಮಂಗಲ, ಮೂಲಕ ಆಂಧ್ರದ ಕಡೆ ಓಡಾಡುತ್ತಿದ್ದವು ಈ ಮೂರು ಬಸ್ ಗಳು.ಒಂದೇ ನಂಬರ್ ನಲ್ಲಿ ಗ್ರಾಮೀಣ ಭಾಗದಲ್ಲಿ ಓಡಾಟ ಮಾಡುತ್ತಿದ್ದನ್ನು ಮಾಹಿತಿ ಪಡೆದುಕೊಂಡು ಕಾರ್ಯಾಚರಣೆ ಮಾಡಲಾಗಿದೆ.

ಅಪರ ಸಾರಿಗೆ ಆಯುಕ್ತ ನರೇಂದ್ರ ಓಲೇಕಾರ, ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ,ನೇತೃತ್ವದಲ್ಲಿ ಕಾರ್ಯಾ ಚರಣೆ ಮಾಡಲಾಗಿದೆ.ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
			

 
		 
			



















