7ನೇ ವೇತನ ಆಯೋಗಕ್ಕಿಂತ ಮೊದಲು NPS ಹೋಗಲಿ OPS ಬರಲಿ – ಜೋರಾಗುತ್ತಿದೆ ನೌಕರರ ಆಂದೋಲನದ ಕಿಚ್ಚು NPS ತೋಲಗಲಿ OPS ಬರಲಿ…..

Suddi Sante Desk
7ನೇ ವೇತನ ಆಯೋಗಕ್ಕಿಂತ ಮೊದಲು NPS ಹೋಗಲಿ OPS ಬರಲಿ – ಜೋರಾಗುತ್ತಿದೆ ನೌಕರರ ಆಂದೋಲನದ ಕಿಚ್ಚು NPS ತೋಲಗಲಿ OPS ಬರಲಿ…..

ಬೆಂಗಳೂರು

ನಿವೃತ್ತಿಯಾದ ನೌಕರರಿಗೆ ಸಿಗುವ ಭಿಕ್ಷೆ ಎಂಬ ಪಿಂಚಣಿಯ ಮೊತ್ತ ಮತ್ತು ಏಳನೇ ವೇತನಕ್ಕೆ ಸಿಗುವ ಮೊತ್ತ ಎರಡು ಸಮವಾಗಿದೆ ಎಂದು ನಂಬಿರುವ ಮನಸ್ಥಿತಿಗಳ ಕಂಡರೆ ಬಹಳಷ್ಟು ನಗು ಬರುತ್ತೆ..ನಮ್ಮ ನೊಂದ ನೌಕರರ ಬಳಗಕ್ಕೆ ಕೇಳುವ ಒಗ್ಗಟ್ಟು ಆ ಶಕ್ತಿ ಇದ್ದಿದ್ದರೆ ಇವತ್ತು ಸಂಘ ಗಳು ಸಹ 7ನೇ ಬೇಡಿಕೆಯಾಗಿ ನೌಕರರ ಮರಣ ಶಾಸನವನ್ನು ಇಡುತ್ತಿರಲಿಲ್ಲ.

ನಮ್ಮಲ್ಲಿಯೇ ಕೇಳುವ,ವಿರೋದಿಸುವ ಗುಣ ಇಲ್ಲ.ಏಳನೇ ವೇತನ ಆಯೋಗ ಸಿಗದಿದ್ದರೆ ನೌಕರರು ಬೀದಿಗೆ ಬರುವ ಯಾವ ಲಕ್ಷಣವೂ ಇಲ್ಲ.ಆದರೆ ಏನ್ ಪಿ ಎಸ್ ಸಿಗದೇ ಹೋದರೆ ಇದೇ ವರ್ಷ ಸರಿ ಸುಮಾರು ಐದು ಸಾವಿರದಿಂದ ಹತ್ತು ಸಾವಿರ ಕುಟುಂಬಗಳು ಮುಂದಿನ ಜೀವನ ಹೇಗೆ ಎಂಬ ಕಲ್ಪನೆಗೆ ಒಳಗಾಗಲಿವೆ ಇದನ್ನು ಸಹ ಸಮವಾಗಿ ತೂಗಿಸುವ ವಿಚಾರಗಳು ಎಂತಹ ವಿಚಾರಗಳು ನಾವೇ ವಿಚಾರಿಸಿಕೊಳ್ಳೋಣ.

ಸರಿಯಾಗಿ ಗಮನಿಸಿ ಏಳನೆಯ ವೇತನ ಆಯೋಗವೂ ಹಣಕಾಸು ಒಳಗೊಂಡಿದೆ. ಎನ್‌ಪಿಎಸ್ ಸಹ ಹಣಕಾಸಿನ ಒಳಗೊಂಡಿದೆ. ಕಣ್ಣು ಕಾಣಿಸದಿದ್ದರೆ ಕಣ್ಣು ತಿಕ್ಕಿಕೊಂಡು ನಾವು ನೋಡಿದರೆ ಉತ್ತಮ.ಒಂದೊಮ್ಮೆ ಏಳನೇ ವೇತನ ಆಯೋಗ ಬಂದದ್ದಾದರೆ ಎನ್‌ಪಿಎಸ್ ಮತ್ತೆ ನಾಲ್ಕು-ಐದು ವರ್ಷ ಐದು ವರ್ಷ ಮುಂದೆ ಹೋಗುವುದು.

ಆ ಮಧ್ಯದಲ್ಲಿ ನಮ್ಮ ನಿಯತ್ತಾಗಿ ದುಡಿಯುವ ನೌಕರರ ಕುಟುಂಬವು ಎಷ್ಟು ಅಳಲಿಗೆ ಬೀಳು ತ್ತದೆ ಎಂಬ ಕಲ್ಪನೆ ನಮಗಿರಬೇಕು.ನಮ್ಮಿಂದ ಆರಿಸಿ ಬರುವ ಸಂಘಗಳಿಗೆ ಇರಬೇಕು.ನಮಗೂ ಇಲ್ಲ, ಸಂಘಗಳಿಗೆ ಮೊದಲೇ ಇಲ್ಲ ಎಂದಾದರೆ, ಈ ಗ್ರೂಪ್ ಸುಮ್ಮನೆ ಹೆಸರಿಗೆ ಮಾತ್ರ ಎಂಬುದು ನಮ್ಮ ವಿಚಾರ..

ಈ ಗ್ರೂಪ್ ಗಳನ್ನು ಮಾಡಿರುವುದು ಒತ್ತಾಯದ ಹೋರಾಟದ ಮುಂಚೂಣಿಗಾಗಿ.ನಾವೇ ಇಲ್ಲಿ NPS ಅನ್ನು ಹಿಂದಕ್ಕೆ ಹಾಕುವ ಮಾತಿಗೆ ಮುಂದಾ ದರೆ ನಮಗಾಗಿ ಇರುವವರು ಯಾರು.

ಯಾರು ಮಾಡಲಿ ಮಾಡದಿರಲಿ ನಾನಂತೂ 7ನೇ ವೇತನ ಆಯೋಗಕ್ಕಿಂತ ಮೊದಲು ಎನ್‌ಪಿಎಸ್ ಹೋಗಬೇಕು ಎಂದು ಹೇಳುತ್ತೇನೆ.. ಏಳನೇ ಆರೋಗ್ಯಕ್ಕಿಂತ ಮೊದಲು ಎನ್ ಪಿ ಎಸ್ ಶ್ರೇಷ್ಠ ವಾದದ್ದು ಎಂದು ಒತ್ತಿ ಹೇಳುತ್ತೇನೆ.ಎನ್‌ಪಿಎಸ್‌ಗೆ ಯಾವುದೇ ಅಕ್ಕ-ಪಕ್ಕವಿಲ್ಲ ಇದೇ ಬೇಡಿಕೆ ಶ್ರೇಷ್ಠ ಬೇಡಿಕೆ ಎಂದು ಒತ್ತಿ ಹೇಳುತ್ತೇನೆ.ಇದೇ ಏಕೈಕ ಬೇಡಿಕೆ ಎಂದು ಒತ್ತಿ ಹೇಳುತ್ತೇನೆ.ವಿನಹ ಎರಡನ್ನು ಒಂದೇ ತಕ್ಕಡಿಯಲ್ಲಿ ತೂಗುವುದಿಲ್ಲ.

ನೊಂದುಕೊಂಡಿರುವ ನೌಕರರ ಮನದಾಳದ ಅನಿಸಿಕೆ ಗಳು…..

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.