ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾಗಿದೆ.
ಹೌದು ತಡರಾತ್ರಿ ಹೊರಬಿದ್ದಿದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 26 ವಾರ್ಡ್ ಗಳ ಬಿಜೆಪಿ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ.
26 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜಿಲ್ಲಾ ಅಧ್ಯಕ್ಷರಾಗಿರುವ ಅರವಿಂದ ಬೆಲ್ಲದ ಅವರು ಪೈನಲ್ ಮಾಡಿ ಬಿಡುಗಡೆ ಮಾಡಿದ್ದಾರೆ.ಹುಬ್ಬಳ್ಳಿ ಧಾರವಾಡ ದ ಒಟ್ಟು 82 ವಾರ್ಡ್ ಗಳಲ್ಲಿ 26 ವಾರ್ಡ್ ಗಳಲ್ಲಿನ ಅಭ್ಯರ್ಥಿಗಳನ್ನು ಅಂತಿಮ ಮಾಡಿ ರಿಲೀಸ್ ಮಾಡಿದ್ದಾರೆ
ಹಳೇಯ ಮುಖಗಳಾದ ಶಿವು ಹಿರೇಮಠ,,ರಾಮಣ್ಣ ಬಡಿಗೇರ,ವಿಜಯಾನಂದ ಶೆಟ್ಟಿ,ಈರಣ್ಣ ಸವಡಿ, ಶಂಕರ ಶೇಳಕೆ,ಪಾಂಡುರಂಗ ಪಾಟೀಲ, ಮಲ್ಲಿಕಾರ್ಜುನ ಹೊರಕೇರಿ,ಸತೀಶ ಹಾನಗಲ್ ಇವರಿಗೆ ಟಿಕೆಟ್ ನೀಡಿ ಮತ್ತೊಮ್ಮೆ ಅಖಾಡಕ್ಕೆ ಇಳಿಸಲಾಗಿದೆ.
ಇನ್ನೂ ಇವರೊಂದಿಗೆ ಮೊದಲ ಪಟ್ಟಿಯಲ್ಲಿ ಹೊಸಬರಿಗೂ ಅವಕಾಶವನ್ನು ನೀಡಲಾಗಿದೆ. ಮಹೇಂದ್ರ ಕೌತಾಳ, ಈರೇಶ ಅಂಚಟಗೇರಿ ಸೇರಿದಂತೆ ಹಲವರಿಗೆ ಟಿಕೆಟ್ ನೀಡಲಾಗಿದೆ
ಮೊದಲ ಪಟ್ಟಿಯಲ್ಲಿ ಕೆಲವರು ಹಳೆ ಮುಖಗಳು, ಇವರೊಂದಿಗೆ ಕೆಲ ಹೊಸ ಮುಖಗಳಿಗೂ ಅವಕಾಶ ವನ್ನು ಪಕ್ಷ ನೀಡಿದೆ.ಟಿಕೆಟ್ ನಿರೀಕ್ಷೆಯಲ್ಲಿದ್ದ ಕೆಲವರಿಗೆ ನಿರಾಶೆ ಆಗಿದ್ದು ಅಸಮಾಧಾನ ಭಿನ್ನಮತ ಸ್ಫೋಟವಾಗವ ಸಾಧ್ಯತೆ ಇದೆ ಅಸಮಾಧಾನ ಭಿನ್ನಮತ ಸ್ಫೋಟ ವಾಗವ ಸಾಧ್ಯತೆ ಹೆಚ್ಚಾಗಿದ್ದು ಪಕ್ಷೇತರರಾಗಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದು ಅದನ್ನು ಪಕ್ಷ ಯಾವ ರೀತಿಯಲ್ಲಿ ನಿಬಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು