ಬೆಳಗಾವಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನೂ ಎರಡೇ ದಿನ ಬಾಕಿ ಇರುವಾಗಲೇ ಇನ್ನೂ ಕಾಡಾ ಕೈ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ.ಇನ್ನೂ ಟಿಕೇಟ್ ಯಾರಿಗೆ ಕೊಡಬೇಕು ಎಂಬ ವಿಚಾರ ಕುರಿತಂತೆ ಹುಬ್ಬಳ್ಳಿ ಧಾರವಾಡ ಬಿಟ್ಟು ಸಧ್ಯ ಬೆಳಗಾವಿಗೆ ಸಭೆ ಶಿಪ್ಟ್ ಆಗಿದೆ.ಸಧ್ಯ ಬೆಳಗಾವಿ ಯಲ್ಲಿ ಕೈ ಪಕ್ಷದ ನಾಯಕರು ಈ ಒಂದು ಟಿಕೇಟ್ ಹಂಚಿಕೆ ವಿಚಾರ ಕುರಿತಂತೆ ನಗರದ ಖಾಸಗಿ ಹೊಟೇಲ್ ನಲ್ಲಿ ಸಭೆ ಮಾಡುತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡದ ಕೈ ಪಕ್ಷದ ಮುಖಂಡರು ಕಾಂಗ್ರೇಸ್ ಪಕ್ಷದ ರಾಜ್ಯ ನಾಯಕರು ಈ ಒಂದು ಸಭೆಯಲ್ಲಿ ಪಾಲ್ಗೊಂಡಿದ್ದು 82 ವಾರ್ಡ್ ಗಳಿಗೆ ಯಾರು ಯಾರಿಗೆ ಟಿಕೇಟ್ ಕೊಡಬೇಕು ಎಂಬ ವಿಚಾರ ಕುರಿತಂತೆ ಚರ್ಚೆಯನ್ನು ಮಾಡಲಾಗುತ್ತಿದೆ. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯುತ್ತಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ಮಾಡಲಾಗುತ್ತಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 82 ವಾರ್ಡ್‌ಗಳ ಪೈಕಿ 25 ವಾರ್ಡ್‌ಗಳ ‘ಕೈ’ ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲ ಹಿನ್ನೆಲೆಯಲ್ಲಿ ಘೋಷಣೆ ವಿಳಂಬವಾಗುತ್ತಿದೆ. ಸಭೆ ಸೇರಿ ಚರ್ಚೆ ನಡೆಸುತ್ತಿ ದ್ದಾರೆ ಕಾಂಗ್ರೆಸ್ ಮುಖಂಡರು ಮಾಜಿ ಸಚಿವ ಶಿವಾನಂದ ಪಾಟೀಲ್, ಆರ್.ವಿ.ದೇಶಪಾಂಡೆ, ತನ್ವೀರ್ ಸೇಠ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ,ಧ್ರುವನಾರಾಯಣ್ ,ನಾಗರಾಜ ಛಬ್ಬಿ,ಸದಾನಂದ ಡಂಗನ್ನವರ,ವೀರಣ್ಣ ಮತ್ತಿಕಟ್ಟಿ, ಸೇರಿ ಹಲವರು ಭಾಗಿಯಾಗಿದ್ದಾರೆ.ಇದೇ ವೇಳೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪಕ್ಷದ ಚಿಹ್ನೆ ಮೇಲೆ ಸ್ಪರ್ಧಿಸುವ ಬಗ್ಗೆಯೂ ಕೂಡಾ ಮಾತುಕತೆ ಮಾಡಲಾಗುತ್ತಿದೆ.ಪಕ್ಷದ ಚಿನ್ಹೆ ಮೇಲೆ ಸ್ಪರ್ಧೆ ಬಗ್ಗೆ ಕಾಂಗ್ರೆಸ್ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ