ಸರ್ಕಾರಿ ನೌಕರಿಯಲ್ಲಿ ಹೊಸದೊಂದು ಇತಿಹಾಸ ಬರೆದ ತಡಕೋಡ ಗ್ರಾಮದ ನಾಗರಾಜ್ – ಭಾರತೀಯ ಸೈನಿಕನಾಗಿ ಸರ್ಕಾರಿ ನೌಕರಿ ಪಡೆದ ಮೊದಲ ಯುವಕ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದ್ರು ಗ್ರಾಮಸ್ಥರು…..

Suddi Sante Desk
ಸರ್ಕಾರಿ ನೌಕರಿಯಲ್ಲಿ ಹೊಸದೊಂದು ಇತಿಹಾಸ ಬರೆದ ತಡಕೋಡ ಗ್ರಾಮದ ನಾಗರಾಜ್ – ಭಾರತೀಯ ಸೈನಿಕನಾಗಿ ಸರ್ಕಾರಿ ನೌಕರಿ ಪಡೆದ ಮೊದಲ ಯುವಕ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದ್ರು ಗ್ರಾಮಸ್ಥರು…..

ಗರಗ

ಸರ್ಕಾರಿ ನೌಕರಿಯಲ್ಲಿ ಹೊಸದೊಂದು ಇತಿಹಾಸ ಬರೆದ ತಡಕೋಡ ಗ್ರಾಮದ ನಾಗರಾಜ್ – ಭಾರತೀಯ ಸೈನಿಕನಾಗಿ ಸರ್ಕಾರಿ ನೌಕರಿ ಪಡೆದ ಮೊದಲ ಯುವಕ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದ್ರು ಗ್ರಾಮಸ್ಥರು…..

ಧಾರವಾಡದ ತಡಕೋಡ ಗ್ರಾಮ ಹೊಸದೊಂದು ಇತಿಹಾಸವನ್ನು ಬರೆದಿದೆ.ಹೌದು ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಈವರೆಗೆ ಯಾರೊಬ್ಬರು ಸರ್ಕಾರಿ ನೌಕರರಿಯನ್ನು ಪಡೆದುಕೊಂಡಿರಲಿಲ್ಲ ಹೀಗಿರುವಾಗ ಈ ಒಂದು ಕಾಲೋನಿಯ ಯುವಕನೊರ್ವ ಈಗ ಸರ್ಕಾರಿ ನೌಕರಿ ಪಡೆದು ಕೊಂಡು ಹೊಸದೊಂದು ದಾಖಲೆಯನ್ನು ಬರೆದಿ ದ್ದಾನೆ.

ಹೌದು ಬಡಾವಣೆಯ ನಾಗರಾಜ್ ಎಂಬ ಯುವಕ ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದು ಸಧ್ಯ ಪಿಯುಸಿ ಕೂಡಾ ಅಧ್ಯಯನ ಮಾಡುತ್ತಿದ್ದು ಹೀಗಿರುವಾಗ ಭಾರತೀಯ ಸೈನಿಕ ಹುದ್ದೆಗೆ ಆಯ್ಕೆಯಾಗಿದ್ದಾನೆ.ಗ್ರಾಮದಲ್ಲಿ ಸದಾ ಒಂದಿಲ್ಲೊಂದು ಸಮಾಜಮುಖಿಯಾದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಗ್ರಾಮ ಪಂಚಾಯತ ಉಪಾಧ್ಯಕ್ಷ ಈರಣ್ಣ ಬಾರಕೇರ ಈ ಒಂದು ಯುವಕನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿ ಇತರರಿಗೆ ಪ್ರೇರಣೆ ಯ ಕಾರ್ಯಕ್ರಮವನ್ನು ಮಾಡಿದ್ದಾರೆ.

ಹೌದು ಉಪಾಧ್ಯಕ್ಷ ಈರಣ್ಣ ಬಾರಕೇರ,ಮತ್ತು ಗರಗ ಪೊಲೀಸ್ ಠಾಣೆಯ ಪಿಎಸ್ಐ ಎಫ್ ಎಮ್ ಮಂಟೂರ ಮತ್ತು ಗ್ರಾಮಸ್ಥರು ಸೇರಿ ಕೊಂಡು ಸರ್ಕಾರಿ ನೌಕರಿಯನ್ನು ಪಡೆದುಕೊಂಡ ನಾಗರಾಜ್ ನಿಗೆ ಸನ್ಮಾನಿಸಿ ಗೌರವಿಸಿದ್ದಾರೆ. ತಡಕೋಡ ಗ್ರಾಮದ ಎಸ್ಸಿ ಕಾಲೋನಿಯ ಅಂಬೇಡ್ಕರ್ ನಗರದಲ್ಲಿ ಇಷ್ಟು ದಿನಗಳಿಂದ ಯಾರು ಒಬ್ರು ಕೂಡಾ ಸರ್ಕಾರಿ ನೌಕರಿಗೆ ಹೋಗಿರಲಿಲ್ಲ

ಬುದ್ಧ, ಬಸವ,ಅಂಬೇಡ್ಕರ್ ಇವರ ಆಶೀರ್ವಾದ ದಿಂದ ಮತ್ತು ನಿರಂತರ ಶ್ರಮದಿಂದ ಮತ್ತು ಅವರ ತಂದೆ ತಾಯಿಗಳ ಆಶೀರ್ವಾದದಿಂದ ನಾಗರಾಜ್ ಸಧ್ಯ ಭಾರತೀಯ ಸೈನಿಕನಾಗಿ ಆಯ್ಕೆಯಾಗಿ ದ್ದಾನೆ ತಡಕೋಡ ಗ್ರಾಮದ ಎಸ್ ಸಿ ಕಾಲೋನಿ ಯಲ್ಲಿ ಪ್ರಥಮವಾಗಿ ಸರ್ಕಾರಿ ನೌಕರಿಗೆ ಹೋಗ್ತಾ ಇರುವ ಈ ಒಂದು ಯುವಕನಿಗೆ ಎಸ್ ಸಿ ಕಾಲೋ ನಿಯಲ್ಲಿ ಇತಿಹಾಸ ಯಾಕಂದ್ರೆ ಇಲ್ಲಿ ಇಷ್ಟು ವರ್ಷ ಗಳಾದರೂ ಯಾರು ಕೂಡ ಸರ್ಕಾರಿ ನೌಕರಿ ಪಡೆದುಕೊಂಡಿರಲಿಲ್ಲ

ಹೀಗಿರುವಾಗ ನಾಗರಾಜ್ ಸಧ್ಯ ಹೊಸದೊಂದು ಇತಿಹಾಸವನ್ನು ಬರೆದಿದ್ದಾನೆ.ಭಾರತೀಯ ಸೇನೆಗೆ ಸೈನಿಕನಾಗಿ ಹೋಗುತ್ತಿರುವ ಯುವಕನಿಗೆ ಪ್ರೀತಿ ಯಿಂದ ಸನ್ಮಾನ ಮಾಡಿ ಗೌರವಿಸಲಾಗಿಯುತು. ಈ ಯುವಕನನ್ನು ನೋಡಿ ಈ ಕಾಲೋನಿಯಲ್ಲಿ ಮತ್ತೆ ಬೇರೆ ಬೇರೆ ಯುವಕರು ಸರ್ಕಾರಿ ನೌಕರಿಗ ಳಿಗೆ ಹೋಗಲಿ ಎಂಬ ಪ್ರೋತ್ಸಾಹದ ಸಂದೇಶ ವನ್ನು ನೀಡುವ ಉದ್ದೇಶಕ್ಕೆ ನಿರಂತರವಾಗಿ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ಈರಣ್ಣಾ ಬಾರಕೇರ ಮಾಡಿಕೊಂಡು ಬರುತ್ತಿರು ವುದು ನಿಜಕ್ಕೂ ಸಂತೋಷದ ವಿಚಾರವಾಗಿದ್ದು

ಇನ್ನೂ ಇತ್ತ ನಾಗರಾಜ್ ನಿಗೆ ಸುದ್ದಿ ಸಂತೆ ಟೀಮ್ ಪರವಾಗಿ ಅಭಿನಂದನೆಗಳು ಆಲ್ ದಿ ಬೆಸ್ಟ್ ನಾಗರಾಜನ ಪ್ರೇರಣೆ ಕಾಲೋನಿಯ ಇತರರಿಗೂ ಪ್ರೇರಣೆಯಾಗಲಿ ಈರಣ್ಣ ಬಾರಕೇರ ಕಾರ್ಯ ಇನ್ನಷ್ಟು ಮುಂದುವರಿಯಲಿ.

ಅನಿಲಕುಮಾರ ಉಳವನ್ನವರ ಸುದ್ದಿ ಸಂತೆ ವರದಿಗಾರರು ಗರಗ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.