ಬೆಂಗಳೂರು –
ಹೌದು ಇಂತಹ ದೊಂದು ಆತಂಕದಲ್ಲಿ ನಾಡಿನ ವಿವಿಧ ಭಾಷೆಗಳ ಶಿಕ್ಷಕರಿಗೆ ಎದುರಾಗಲಿದೆ ಇತ್ತೀಚೆಗೆ ರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ ಶಿಕ್ಷಣ ನೀತಿಯಿಂದಾಗಿ ಈ ಪರಿಸ್ಥಿತಿ ಎದುರಾಗುವ ಸ್ಥಿತಿ ಕಂಡು ಬರುತ್ತಿದೆ. ಸಂಸ್ಕೃತ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಗೆ ಹೊಡೆತ ಬೀಳಲಿದೆ.ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಭಾಷೆಗಳು ಮೌಲ್ಯ ಕಳೆದು ಕೊಳ್ಳುವ ಅಪಾಯ ಎದುರಾಗಲಿದೆ.
ಇದು ಒಂದೆಡೆಯಾದರೆ ಇನ್ನೂ ಇದರಿಂದಾಗಿ ನೂರಾರು ಪ್ರಾಧ್ಯಾಪಕರು ಮುಂದೆ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಲಿದೆ ಎಂಬ ಅನುಮಾನ ಈಗಲೇ ಕಂಡು ಬರುತ್ತಿದ್ದು ಇದರ ಜೊತೆಗೆ ಸಂಶೋಧನೆ,ಅನುವಾದ ಕ್ಷೇತ್ರಕ್ಕೆ ಸಮಸ್ಯೆಯಾಗಲಿದೆ.ಈ ಕುರಿತು ಸಂಸ್ಕೃತ ಪ್ರಾಧ್ಯಾಪಕರ ರಾಜ್ಯ ಸಂಘದ ಅಧ್ಯಕ್ಷರಾದ ಡಾ ಸಿ. ಶಿವಕುಮಾರಸ್ವಾಮಿ ಮಾತನಾಡಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ