ಧಾರವಾಡದಲ್ಲಿ ಸರ್ಕಾರಿ ನೌಕರರ ಪ್ರತಿಭಟನೆ – ಸರ್ಕಾರಿ ನೌಕರರಿಗೆ ಕಿರುಕುಳ ನೀಡುತ್ತಿರುವವರಿಗೆ ಕಡಿವಾಣ ಹಾಕಿ ನೌಕರರಿಗೆ ಭದ್ರತೆ ನೀಡಿ DC ಯವರ ಮೂಲಕ CM ಗೆ ಮನವಿ ಸಲ್ಲಿಸಿದ ನೌಕರರು…..

Suddi Sante Desk
ಧಾರವಾಡದಲ್ಲಿ ಸರ್ಕಾರಿ ನೌಕರರ ಪ್ರತಿಭಟನೆ – ಸರ್ಕಾರಿ ನೌಕರರಿಗೆ ಕಿರುಕುಳ ನೀಡುತ್ತಿರುವವರಿಗೆ ಕಡಿವಾಣ ಹಾಕಿ ನೌಕರರಿಗೆ ಭದ್ರತೆ ನೀಡಿ DC ಯವರ ಮೂಲಕ CM ಗೆ ಮನವಿ ಸಲ್ಲಿಸಿದ ನೌಕರರು…..

ಧಾರವಾಡ

ಧಾರವಾಡದಲ್ಲಿ ಸರ್ಕಾರಿ ನೌಕರರ ಪ್ರತಿಭಟನೆ – ಸರ್ಕಾರಿ ನೌಕರರಿಗೆ ಕಿರುಕುಳ ನೀಡುತ್ತಿರುವವ ರಿಗೆ ಕಡಿವಾಣ ಹಾಕಿ ನೌಕರರಿಗೆ ಭದ್ರತೆ ನೀಡಿ DC ಯವರ ಮೂಲಕ CM ಗೆ ಮನವಿ ಸಲ್ಲಿಸಿದ ನೌಕರರು ಹೌದು ಆರ್ ಟಿಐ ಕಾರ್ಯಕರ್ತರೊ ಬ್ಬರು ಕಿರುಕುಳದಿಂದ ಬೇಸತ್ತು ಧಾರವಾಡದಲ್ಲಿ ಪಿಡಿಒ ರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸಧ್ಯ ಆಸ್ಪತ್ರೆಯಲ್ಲಿ ಪಿಡಿಒ ನಾಗರಾಜ್ ಗಿಣಿವಾ ಲದ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಇನ್ನೂ ಈ ಒಂದು ಘಟನೆಯನ್ನು ಖಂಡಿಸಿ ನಗರದಲ್ಲಿ ಸರ್ಕಾರಿ ನೌಕರರು ಪ್ರತಿಭಟನೆಯನ್ನು ಮಾಡಿ ದರು.ಹೌದು ಗ್ರಾಪಂ ಪಿಡಿಒ ಆತ್ಮಹತ್ಯೆ ಯತ್ನ ಪ್ರಕರಣ ಕುರಿತಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆಯನ್ನು ಮಾಡಲಾ ಯಿತು.

.ಪ್ರಕರಣ ಖಂಡಿಸಿ ಧಾರವಾಡದಲ್ಲಿ ಸರ್ಕಾರಿ ನೌಕರರು ನಗರದಲ್ಲಿ ಪ್ರತಿಭಟನೆಯನ್ನು ಮಾಡಿ ದರು.ಆರ್‌ಟಿಐ ಕಾರ್ಯಕರ್ತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದು ಈ ಒಂದು ಘಟನೆಗೆ ಸರ್ಕಾರಿ ನೌಕರರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಕಳೆದ ವಾರ ಈ ಒಂದು ಘಟನೆ ನಡೆದಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ ಪಿಡಿಒ ನಾಗರಾಜ್.

ಘಟನೆಗೆ ಕಾರಣವಾದವರ ಮೇಲೆ‌ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಕರ್ತವ್ಯವನ್ನು ಮಾಡುತ್ತಿರುವ ನೌಕರರಿಗೆ ಸೂಕ್ತವಾದ ಭದ್ರತೆ ರಕ್ಷಣೆಯನ್ನು ನೀಡುವಂತೆ ಆಗ್ರಹಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಈ ಒಂದು ಪ್ರತಿಭಟನೆ ನಡೆಯಿತು. ಗಿಣಿವಾಲದ್ ರೀತಿಯಲ್ಲಿ ಅನೇಕರಿಗೆ ಕಿರುಕುಳ ಆಗುತ್ತಿದ್ದು ಸರ್ಕಾರಿ ನೌಕರರಿಗೆ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ.

ನೌಕರರಿಗೆ ಕೆಲಸದಲ್ಲಿ ಭದ್ರತೆ ಇಲ್ಲದಂತಾಗಿದೆ ಎಂದು ಪ್ರತಿಭಟನಾ ನಿರತ ನೌಕರರು ಆರೋಪ ವನ್ನು ಮಾಡಿದರು.ಇನ್ನು ಅನೇಕ ಕಡೆ ನೌಕರರು ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ರಕ್ತದೋತ್ತಡಗಳಿಗೆ ಸಿಲುಕಿ ಸಾವನ್ನಪ್ಪಿ ದ್ದಾರೆ.ಹೀಗಾಗಿ ಸರ್ಕಾರಿ ಸಿಬ್ಬಂದಿಗೆ ಮಾನಸಿಕ ಕಿರುಕುಳ ಆಗದಂತೆ ಕ್ರಮವನ್ನು ವಹಿಸುವಂತೆ ಆಗ್ರಹವನ್ನು ಮಾಡಿದರು.

ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ರವಾನೆ ಮಾಡಿದರು.ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ,ಉಪಾಧ್ಯಕ್ಷ ರಾಜೇಶ್ ಕೋನರಡ್ಡಿ,ದೇವಿದಾಸ ಶಾಂತಿಕರ,ಮಂಜುನಾಥ ಯಡಳ್ಳಿ,ರಾಜಶೇಖರ ಬಾಣದ,ಗಿರೀಶ ಚೌಡಕಿ, ಶ್ರೀಧರ,ರಮೇಶ ಹೊಲ್ತಿಕೋಟಿ,ಪ್ರಹ್ಲಾದ್ ಗೆಜ್ಜಿ, ಸೇರಿದಂತೆ ಪಿಡಿಒ ಅಧಿಕಾರಿಗಳು ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಈ ಒಂದು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.