ಕೋಲಾರ –
ಕಡತ ವಿಲೇವಾರಿ ವೇಗ ಹೆಚ್ಚಿಸಿ ಶಿಕ್ಷಕರು ಕಚೇರಿಗೆ ಬಂದಾಗ ಕೂರಿಸಿ ಕೆಲಸ ಮಾಡಿಕೊಡಿ ಇದರೊಂ ದಿಗೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲೆಯ ಗೌರವ ಉಳಿಸಿ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೇಳಿದರು. ಕೋಲಾರದಲ್ಲಿ ಸಭೆ ಮಾಡಿದ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಸಿಬ್ಬಂದಿಗೆ ತಾಕೀತು ಮಾಡಿದರು.ಡಿಡಿಪಿಐ ಕಚೇರಿಗೆ ಭೇಟಿ ನೀಡಿ ಕಡತ ಗಳ ವಿಲೇವಾರಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ನಂತರ ಸಭೆ ನಡೆಸಿದ ಅವರು ಸಾಕಷ್ಟು ಸಿಬ್ಬಂದಿ ಅನುಕಂಪದ ಆಧಾರದಲ್ಲಿ ನೇಮಕಗೊಂ ಡಿರುವ ಶಿಕ್ಷಕರ ಮಕ್ಕಳಾಗಿದ್ದೀರಿ.ನಿಮ್ಮ ಪೋಷಕ ರನ್ನು ಸ್ಮರಿಸಿಕೊಳ್ಳಿ ಶಿಕ್ಷಕರ ಕೆಲಸದಲ್ಲಿ ವಿಳಂಬ ಬೇಡ.ಕಚೇರಿಗೆ ಬರುವ ಶಿಕ್ಷಕರಿಗಾಗಿ ಕುರ್ಚಿ ಮೀಸ ಲಿರಬೇಕೆಂದು ಹೇಳಿ ತಾಕೀತು ಮಾಡಿದರು
ಈ ಒಂದು ಸಮಯದಲ್ಲಿ ಶಿಕ್ಷಣಾಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್,ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಾಸಪ್ಪ,ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ ಹಾಜರಿದ್ದರು.