ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಕಾವು ಜೋರಾಗಿದ್ದು ಹುಬ್ಬಳ್ಳಿಯ ವಾರ್ಡ್ 81 ರಲ್ಲಿ ಹೊಸ ಕನಸು ಹೊಸ ಅಭಿವೃದ್ದಿ ಯ ಯೋಜನೆ ಹೊಸ ಉತ್ಸಾಹ ದ ನಡುವೆ ಮೊದಲ ಬಾರಿಗೆ ಶ್ರೀಮತಿ ಮಂಜುಳಾ ಶ್ಯಾಮ ಜಾಧವ ಅವರು ಸ್ಪರ್ಧೆ ಮಾಡಿದ್ದಾರೆ.
ವಾರ್ಡ್ ನಲ್ಲಿನ ಜನತೆಗೆ ಜನ ಸೇವೆ ಮಾಡಬೇಕು ಎಂಬ ಒಂದು ಉದ್ದೇಶದಿಂದ ಇವರು ಹೊಸ ಉತ್ಸಾಹ ಹೊಸ ಕನಸುಗಳೊಂದಿಗೆ ಹತ್ತು ಹಲವಾರು ಅಭಿವೃದ್ದಿ ಯೋಜನೆಗಳನ್ನು ಪ್ರಣಾಳಿಕೆ ಗಳನ್ನು ಮುಂದಿಟ್ಟುಕೊಂಡು ಅಖಾಡಕ್ಕೆ ಇಳಿದಿದ್ದಾರೆ.
ವಾರ್ಡ್ ನಲ್ಲಿ ಕಾಂಗ್ರೇಸ್ ಪಕ್ಷದ ಶಾಸಕರಿಂದ ಮತ್ತು ವಯಕ್ತಿಕವಾಗಿ ಶ್ಯಾಮ್ ಜಾಧವ ಮತ್ತು ಕುಟುಂಬ ದವರು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿದ್ದು ಇನ್ನೂ ಹೆಚ್ಚು ಜನರ ಸೇವೆ ಮಾಡಬೇಕು ಎಂಬ ಕಾರಣಕ್ಕಾಗಿ ಈ ಬಾರಿ ವಾರ್ಡ್ ನಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ವಾರ್ಡ್ ನಲ್ಲಿ ಬಿಡುವಿಲ್ಲದೇ ಪ್ರಚಾರವನ್ನು ಮಾಡುತ್ತಿದ್ದು ಇದರಿಂದ ಹೆಚ್ಚು ಮತದಾರರಿಂದ ಸ್ಪಂದನೆ ಸಿಗುತ್ತಿದ್ದು ಈ ಬಾರಿ ವಾರ್ಡ್ ನಲ್ಲಿ ನಿಮ್ಮದೆ ಗೆಲುವು ಎನ್ನುತ್ತಾ ಜೈ ಜೈ ಎನ್ನುತ್ತಿದ್ದು
ಇನ್ನೂ ಇತ್ತ ಶ್ರೀಮತಿ ಮಂಜುಳಾ ಶ್ಯಾಮ್ ಜಾಧವ ಅವರು ಕೂಡಾ ಕಾಂಗ್ರೇಸ್ ಪಕ್ಷದ ಶಾಸಕರು ಕಾರ್ಯಕರ್ತರು ಮುಖಂಡರು ವಾರ್ಡ್ ನ ಎಲ್ಲ ರೊಂದಿಗೆ ಸೇರಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಪಾದಯಾತ್ರೆ ಮೂಲಕ ಪ್ರಚಾರ ಮಾಡುತ್ತಿದ್ದಾರೆ.