ಹುಬ್ಬಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ASI – ಕರ್ತವ್ಯ ಮುಗಿಸಿಕೊಂಡು ಸಾವಿಗೆ ಶರಣಾದ 1994ನೇ ಬ್ಯಾಚ್ ನ ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಕಾರಣ ಅದೇನಾ…..

Suddi Sante Desk
ಹುಬ್ಬಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ASI – ಕರ್ತವ್ಯ ಮುಗಿಸಿಕೊಂಡು ಸಾವಿಗೆ ಶರಣಾದ 1994ನೇ ಬ್ಯಾಚ್ ನ ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಕಾರಣ ಅದೇನಾ…..

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ASI – ಕರ್ತವ್ಯ ಮುಗಿಸಿಕೊಂಡು ಸಾವಿಗೆ ಶರಣಾದ 1994ನೇ ಬ್ಯಾಚ್ ನ ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಕಾರಣ ಅದೇನಾ…..

ವಿಷ ಸೇವಿಸಿ ಎಎಸ್ ಐ ರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿನ ಕುಂದಗೋಳ ತಾಲ್ಲೂಕಿನ ಗುಡಿಗೇರಿಯ ಪೊಲೀಸ್‌ ಠಾಣೆಯ ಎಎಸ್‌ಐ ಬಸವರಾಜ ಶಾಂತವೀರಪ್ಪ ಪಾಯಣ್ಣವರ (54)ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿಯಾಗಿದ್ದಾರೆ.

ರಾತ್ರಿ ಕರ್ತವ್ಯವನ್ನು ಮುಗಿಸಿಕೊಂಡು ವಸತಿ ಗೃಹದ ಆವರಣದ ಬಳಿ ದೇಗುಲ ಭಾಗದಲ್ಲಿ ಮಲಗಿದ್ಧಾರೆ.ಇವರನ್ನು ನೋಡಿದ ಸಿಬ್ಬಂದಿಗಳು ತಡರಾತ್ರಿ ಅವರನ್ನು ಲಕ್ಷ್ಮೇಶ್ವರ ಆಸ್ಪತ್ರೆ ಒಯ್ಯಲಾ ಯಿತು ಚಿಕಿತ್ಸೆ ಫಲಿಸದೇ ಇವರು ಮೃತಪಟ್ಟಿ ದ್ದಾರೆ.

ಇನ್ನೂ ಎಎಸ್‌ಐ ಬಸವರಾಜ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ಕಾರಣವನ್ನು ಹುಡುಕಾಡುತ್ತಿದ್ದಾರೆ.

ಈ ಬಗ್ಗೆ ಪರಿಶೀಲನೆಯನ್ನು ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಕಾಲುನೋವಿನಿಂದ ಬಳಲು ತ್ತಿದ್ದರು ಎಂಬ ಮಾಹಿತಿ ಸಿಕ್ಕಿದ್ದು ಆದರೆ ಆತ್ಮಹ ತ್ಯೆಗೆ ನಿಖರವಾದ ಕಾರಣ ತಿಳಿದು ಬರಬೇಕಾ ಗಿದ್ದು ಬಸವರಾಜ ಅವರು ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಶಾಂತಗಿರಿ ಗ್ರಾಮದ ವರಾಗಿದ್ದು

1994ನೇ ಬ್ಯಾಚ್ ನವರಾಗಿದ್ದಾರೆ. ಪತ್ನಿ. ಮೂವರು ಮಕ್ಕಳು ಇದ್ಧು ನಿಧನಕ್ಕೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇಲಾಖೆಯ ಸಿಬ್ದಂದಿಗಳು ಆಪ್ತರು ಸಂತಾಪ ವನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.