ಚರ್ಚೆಗೆ ಗ್ರಾಸವಾದ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರ ವರ್ಗಾವಣೆ – ರಾಜ್ಯಾಧ್ಯಂತ ಅಸಮಾಧಾನಗೊಂಡಿದ್ದಾರೆ ಷಡಾಕ್ಷರಿ ಯವರ ಅಭಿಮಾನಿ ಬಳಗದವರು…..

Suddi Sante Desk
ಚರ್ಚೆಗೆ ಗ್ರಾಸವಾದ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರ ವರ್ಗಾವಣೆ – ರಾಜ್ಯಾಧ್ಯಂತ ಅಸಮಾಧಾನಗೊಂಡಿದ್ದಾರೆ ಷಡಾಕ್ಷರಿ ಯವರ ಅಭಿಮಾನಿ ಬಳಗದವರು…..

ಶಿವಮೊಗ್ಗ

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಯವರನ್ನು ವರ್ಗಾವಣೆ ಮಾಡಲಾಗಿದೆ ಈ ಒಂದು ವರ್ಗಾವಣೆ ಈಗ ಚರ್ಚೆಗೆ ಗ್ರಾಸ ವಾಗಿದೆ ಹೌದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.ಷಡಾಕ್ಷರಿ ವರ್ಗಾವಣೆ ಆದೇಶ ಹೊರಬಿದ್ದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಈ ವರ್ಗಾವಣೆ ಮಾಡುವಂತೆ ಕಳೆದ ಸೆ.21 ರಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶಿವಮೊಗ್ಗದ ಅಬ್ಬಲಗೆರೆ ಗ್ರಾಮದ ಮುದ್ದಣ್ಣನ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಾಣಿಕೆಯಿಂದ ರಾಜ್ಯ ಸರ್ಕಾರಕ್ಕೆ 71 ಲಕ್ಷ ರೂ.ಗಳಿಗೂ ಹೆಚ್ಚಿನ ರಾಜಸ್ವ ನಷ್ಟವಾಗಿದ್ದು ಇದಕ್ಕೆ ಕಾರಣರಾದ ಷಡಾಕ್ಷರಿ ಅವರ ವರ್ಗಾವಣೆ ಮಾಡುವಂತೆ ಸಚಿವರು ಈ ಪತ್ರದಲ್ಲಿ ಕೋರಿದ್ದರು.ಅದರಂತೆ ಮುಖ್ಯಮಂತ್ರಿಗಳು ಷಡಾಕ್ಷರಿ ಅವರ ವರ್ಗಾವ ಣೆಗೆ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.

ಈಚೆಗೆ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆ ಯಲ್ಲಿ ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಷಡಾಕ್ಷರಿ ಅವರ ಹೆಸರು ಪ್ರಸ್ತಾಪವಾಗಿತ್ತು. ಅಬ್ಬಲಗೆರೆಯ ಮುದ್ದಣ್ಣನ ಕೆರೆಯಿಂದ ಲೇಔಟ್‌ ನಿರ್ಮಾಣಕ್ಕೆ ಅನುಮತಿಗಿಂತ ಹೆಚ್ಚು ಮಣ್ಣು ತೆಗೆದು ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ವಿಚಾರ ಪ್ರಸ್ತಾಪವಾಗಿತ್ತು.ಸಭೆ ಬೆನ್ನಲ್ಲೇ ಸಿಎಂಗೆ ಪತ್ರ ಬರೆದಿದ್ದರಂತೆ

ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದ ಷಡಾಕ್ಷರಿ ಅದರಿಂದ ಬಿಡುಗಡೆಗೊಂಡು ಎಂಟು ವರ್ಷಗಳೇ ಕಳೆದಿವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಬಿ.ವೈ.ರಾಘ ವೇಂದ್ರ ಪರ ಪರೋಕ್ಷವಾಗಿ ಕೆಲಸ ಮಾಡುವ ಸಾಧ್ಯತೆಗಳಿದ್ದು ಅದನ್ನು ತಪ್ಪಿಸುವ ಸಲುವಾಗಿ ವರ್ಗಾವಣೆ ಅಸ್ತ್ರ ಪ್ರಯೋಗಿಸಲಾಗಿದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲೇ ಕೇಳಿ ಬರುತ್ತಿದೆ

ಇನ್ನೊಂದೆಡೆ ಇದೇ ಮೊದಲ ಬಾರಿಗೆ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ವರ್ಗಾವಣೆ ಮಾಡಿರುವುದು ದ್ವೇಷ ರಾಜಕಾರಣ ಎಂಬ ಮಾತೂ ನೌಕರರ ವಲಯದಲ್ಲಿ ಕೇಳಿಬರುತ್ತಿದೆ. ಷಡಾಕ್ಷರಿ ವರ್ಗಾವಣೆ ಸರಕಾರದ ತೀರ್ಮಾನ. ನಾನೂ ಸರಕಾರದಲ್ಲಿ ಇದ್ದೇನೆ. ವರ್ಗಾವಣೆ ದೊಡ್ಡ ವಿಷಯ ಏನಲ್ಲ.ಅವರ ಮೇಲೆ ಹಗರಣ ಗಳ ಆರೋಪ ಬಂದಿತ್ತು ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತನ್ನು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಷಡಾಕ್ಷರಿ ಆಗಲಿ ಮತ್ತೊಬ್ಬರು ಆಗಲಿ ಸರಕಾರ ಬಂದಾಗ ಅಧಿಕಾರಿಗಳು ಬದಲಾಗುತ್ತಾರೆ. ಒಳ್ಳೆಯ ಅಧಿಕಾರಿಗಳಿಂದ ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು.ಈ ರೀತಿ ದ್ವೇಷದ ರಾಜ ಕಾರಣ ಮಾಡಬಾರದು ಎಂಬ ಮಾತನ್ನು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಇನ್ನೂ ಇತ್ತ ಈ ಒಂದು ವರ್ಗಾವಣೆ ಯ ವಿಚಾರ ದಿಂದಾಗಿ ರಾಜ್ಯಾದ್ಯಂತ ಷಡಾಕ್ಷರಿ ಅವರ ಅಭಿ ಮಾನಿಗಳು  ಆಪ್ತರು ಸೇರಿದಂತೆ ಹಲವರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಧ್ವನಿ ಯಾಗಿ ಕೆಲಸವನ್ನು ಮಾಡುತ್ತಿರುವ ಷಡಾಕ್ಷರಿ ಅವರ ವರ್ಗಾವಣೆ ಯನ್ನು ರದ್ದು ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.