IAS ಅಧಿಕಾರಿಯನ್ನು ಮದುವೆಯಾಗಲಿದ್ದಾರೆ BJP ಶಾಸಕಿ – ಡಿಸೆಂಬರ್ 22 ರಂದು ನಡೆಯಲಿದೆ ಮದುವೆ ಪಾಲ್ಗೊಳ್ಳಲಿದ್ದಾರೆ 3 ಲಕ್ಷಕ್ಕೂ ಹೆಚ್ಚು ಗಣ್ಯರು ಆಪ್ತರು ಅಭಿಮಾನಿಗಳು ಅಧಿಕಾರಿಗಳು ನೌಕರರು…..

Suddi Sante Desk
IAS ಅಧಿಕಾರಿಯನ್ನು ಮದುವೆಯಾಗಲಿದ್ದಾರೆ BJP ಶಾಸಕಿ – ಡಿಸೆಂಬರ್ 22 ರಂದು ನಡೆಯಲಿದೆ ಮದುವೆ ಪಾಲ್ಗೊಳ್ಳಲಿದ್ದಾರೆ 3 ಲಕ್ಷಕ್ಕೂ ಹೆಚ್ಚು ಗಣ್ಯರು ಆಪ್ತರು ಅಭಿಮಾನಿಗಳು ಅಧಿಕಾರಿಗಳು ನೌಕರರು…..

ರಾಜಸ್ಥಾನ

IAS ಅಧಿಕಾರಿಯನ್ನು ಮದುವೆಯಾಗಲಿದ್ದಾರೆ BJP ಶಾಸಕಿ – ಡಿಸೆಂಬರ್ 22 ರಂದು ನಡೆಯ ಲಿದೆ ಮದುವೆ ಪಾಲ್ಗೊಳ್ಳಲಿದ್ದಾರೆ 3 ಲಕ್ಷಕ್ಕೂ ಹೆಚ್ಚು ಗಣ್ಯರು ಆಪ್ತರು ಅಭಿಮಾನಿಗಳು ಅಧಿಕಾರಿಗಳು ನೌಕರರು ಹೌದು ಐಎಎಸ್ ಅಧಿಕಾರಿಯೊಬ್ಬರನ್ನು ಬಿಜೆಪಿ ಶಾಸಕಿಯೊಬ್ಬರು ಮದುವೆಯಾಗಲು ಮುಂದಾಗಿದ್ದಾರೆ.ಹೌದು ಹರಿಯಾಣದ ಆದಂಪುರ ಕ್ಷೇತ್ರದ ಬಿಜೆಪಿ ಶಾಸಕಿ ಭವ್ಯಾ ಬಿಷ್ಣೋಯ್ ಅವರು ಐಎಎಸ್ ಅಧಿ ಕಾರಿ ಪರಿ ಬಿಷ್ಣೋಯ್ ಅವರನ್ನು ಸಂಗಾತಿಯ ನ್ನಾಗಿ ಸ್ವೀಕರಿಸಲು ಮುಂದಾಗಿದ್ದಾರೆ.

ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿ ಕಾರಿ ಪರಿ ಬಿಷ್ಣೋಯ್ ಹಾಗೂ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕಿ ಭವ್ಯಾ ಬಿಷ್ಣೋ ಯ್ ಹಸೆಮಣೆಯೇರಲು ಸಜ್ಜಾಗಿದ್ದಾರೆ. ಡಿಸೆಂ ಬರ್ 22 ರಂದು ಅದ್ದೂರಿಯಾದ ಮದುವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗಳಾದ ಭವ್ಯಾ ಬಿಷ್ಣೋಯ್ ಸಧ್ಯ ಆದಂಪುರ ಕ್ಷೇತ್ರದ ಶಾಸಕಿ ಯಾಗಿದ್ದಾರೆ.ಇನ್ನೂ ಈಶಾನ್ಯ ರಾಜ್ಯ ಸಿಕ್ಕಿಂ ಕೇಡರ್‌ನ ಐಎಎಸ್ ಅಧಿಕಾರಿ ಪರಿ ವಿಷ್ಣೋಯ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಜಸ್ಥಾನದ ಸರೋವರಗಳ ನಗರಿ ಎಂದೇ ಖ್ಯಾತಿ ಪಡೆದಿರುವ ಉದಯಪುರದಲ್ಲಿ ಪರಿ ಬಿಷ್ಣೋಯ್ ಮತ್ತು ಭವ್ಯಾ ಬಿಷ್ಣೋಯ್ ಅವರ ಅದ್ಧೂರಿ ವಿವಾಹೋತ್ಸವ ನಡೆಯಲಿದೆ.ಇಲ್ಲಿನ ರೆಸಾರ್ಟ್‌ವೊಂದರಲ್ಲಿ ಡಿಸೆಂಬರ್ 22ರಂದು ಸಮಾರಂಭ ಏರ್ಪಡಿಸಲಾಗಿದೆ.

ಈ ಮದುವೆಗೆ ಮೂರು ಲಕ್ಷಕ್ಕೂ ಹೆಚ್ಚು ಅತಿಥಿ ಗಳನ್ನು ಆಹ್ವಾನಿಸಲಾಗಿದೆ.ಭವ್ಯಾ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಕುಲದೀಪ್ ಬಿಷ್ಣೋಯ್ ಮತ್ತು ರೇಣುಕಾ ಬಿಷ್ಣೋಯ್ ಅವರ ಪುತ್ರಿಯಾಗಿರುವ ಇವರು ತಮ್ಮ ಅಜ್ಜ ಭಜನ್ ಲಾಲ್ ಅವರ ರಾಜಕೀಯ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ

ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಮೂರು ಕಡೆ ಇವರ ಮದುವೆಯ ಆರತಕ್ಷತೆ ನಡೆಯಲಿದೆ. ಡಿ.24ರಂದು ಪುಷ್ಕರ್‌, ಡಿ.26ರಂದು ಹರಿಯಾ ಣದ ಹಿಸಾರ್ ಜಿಲ್ಲೆಯ ಆದಂಪುರ ಮತ್ತು ಡಿ.27ರಂದು ನವದೆಹಲಿಯಲ್ಲಿ ಮೂರನೇ ಆರತಕ್ಷತೆ ಸಮಾರಂಭ ಏರ್ಪಡಿಸಲಾಗಿದೆ.

ದೆಹಲಿಯಲ್ಲಿ ನಡೆಯುವ ಆರತಕ್ಷತೆಯಲ್ಲಿ ಹಲವು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.ವಿವಾಹ ಸಮಾರಂಭಗಳಿಗೆ ಹೆಸರಾಗಿರುವ ನೆಚ್ಚಿನ ತಾಣ ಉದಯಪುರದಲ್ಲಿ ಆಕರ್ಷಕ ಸ್ಥಳಗಳನ್ನು ಹೊಂದಿರುವ ಉದಯಪುರ ಅದ್ಧೂರಿ ವಿವಾಹ ಸಮಾರಂಭಗಳಿಗೆ ನೆಚ್ಚಿನ ತಾಣವೂ ಹೌದು.

ದೊಡ್ಡ ದೊಡ್ಡ ಮನೆತನದವರು ರಾಜಮನೆತನ ದವರು ಹಾಗೂ ರಾಜಕಾರಣಿಗಳ ಕುಟುಂಬಸ್ಥರು ಹಾಗೂ ಖ್ಯಾತ ನಟ-ನಟಿಯರು,ಉದ್ಯಮಿಗಳು ಹಾಗೂ ಗಣ್ಯರು ತಮ್ಮ ಮದುವೆ ಕಾರ್ಯಕ್ರಮ ಗಳನ್ನು ಉದಯಪುರದಲ್ಲಿ ಆಯೋಜಿಸಲು ಹೆಚ್ಚು ಒಲವು ತೋರುತ್ತಾರೆ ಹೀಗಾಗಿ ಇಲ್ಲಿಯೇ ವಿವಾಹ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ರಾಜಸ್ಥಾನ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.