This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ವಾರ್ಡ್ 50 ರಲ್ಲಿ ಈ ಬಾರಿ ನಿವೇ ಎನ್ನುತ್ತಿದ್ದಾರೆ ಮತದಾರರು ಶ್ರೀಮತಿ ಭಾಗಿರತಿ ಚಂದ್ರಪ್ಪ ಮುಶಪ್ಪನವರ ಅವರೇ ಈ ಬಾರಿ ನಿಶ್ಚಿತ ಮತದಾರರ ಮಾತು…..

WhatsApp Group Join Now
Telegram Group Join Now

ಹುಬ್ಬಳ್ಳಿ –

ಬದಲಾವಣೆ ಬಯಸಿ ಹೊಸ ಕನಸಿನೊಂದಿಗೆ ಏನಾದರೂ ಮಾಡಿ ವಾರ್ಡ್ ನ್ನು ಅಭಿವೃದ್ದಿ ಮಾಡಬೇಕು ಮತದಾರರ ಸೇವೆಯೆ ನನ್ನ ಗುರಿ ನನ್ನ ಉದ್ದೇಶ. ಸ್ಥಳೀಯವಾಗಿ ನಮ್ಮ ಪಕ್ಷದವರೇ ಶಾಸಕರು ಹೀಗಾಗಿ ಈ ಬಾರಿ ವಾರ್ಡ್ ನಲ್ಲಿ ನಾನು ಗೆದ್ದು ಬಂದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ದಿ ಮಾಡಬಹುದು ಜೊತೆಯಲ್ಲಿ ಪಾಲಿಕೆ ಯಲ್ಲೂ ನಾವೇ ಅಧಿಕಾರವನ್ನು ಹಿಡಿಯೊದು ಹೀಗೆ ಎಂದುಕೊಂಡು ಹುಬ್ಬಳ್ಳಿಯ ವಾರ್ಡ್ 50 ರಲ್ಲಿ ಬಿಜೆಪಿ ಪಕ್ಷದಿಂದ ಶ್ರೀಮತಿ ಭಾಗಿರತಿ ಚಂದ್ರಪ್ಪ ಮುಶಪ್ಪನವರ ಸ್ಪರ್ಧೆ ಮಾಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ದ್ದುಕೊಂಡು ಸಾಕಷ್ಚು ಪ್ರಮಾಣದಲ್ಲಿ ಸಂಘಟನೆ ಮಾಡುತ್ತಾ ಪಕ್ಷ ವಹಿಸಿಕೊಟ್ಟ ಸೂಚನೆ ನೀಡಿದ ಯಾವುದಾದರೂ ಕೆಲಸ ಕಾರ್ಯಗಳನ್ನು ಚಾಚು ತಪ್ಪದೇ ಮಾಡುತ್ತಾ ವಾರ್ಡ್ ನಲ್ಲಿ ಈಗಾಗಲೇ ಜನಪ್ರೀಯವಾಗಿದ್ದಾರೆ ಶ್ರೀಮತಿ ಭಾಗಿರತಿ ಚಂದ್ರಪ್ಪ ಮುಶಪ್ಪನವರ.

ಇನ್ನೂ ಪಕ್ಷದಿಂದ ಟಿಕೇಟ್ ಘೋಷಣೆಯಾಗು ತ್ತಿದ್ದಂತೆ ಚುನಾವಣಾ ಅಖಾಡಕ್ಕೆ ಇಳಿದಿರುವ ಇವರು ಈಗಾಗಲೇ ಪಕ್ಷದಲ್ಲಿದ್ದುಕೊಂಡು ಜನಪ್ರೀ ಯ ಶಾಸಕರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಂದಿಗೆ ಕೈ ಜೊಡಿಸಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ವಾರ್ಡ್ ಗೆ ಹಾಕಿ ವಾರ್ಡ್ ನಲ್ಲಿ ಪ್ರಮುಖ ರಸ್ತೆ,ಚರಂಡಿ ಸಮುದಾಯ ಭವನ,ಸಾರ್ಜಜನಿಕರಿಗೆ ಅನುಕೂಲ ಆಗಲೆಂಬ ಕಾರಣಕ್ಕಾಗಿ ಹುಬ್ಬಳ್ಳಿ ಧಾರವಾಡದಲ್ಲಿ ಮಾದರಿ ಯಾಗಿ ವಾರ್ಡ್ ಅಭಿವೃದ್ಧಿ ಮಾಡಿದ್ದಾರೆ

ಇದರೊಂದಿಗೆ ಸಾಲದಂತೆ ಶಾಸಕರಿಂದ ಸಾಕಷ್ಟು ಜನರ ಸೇವೆಯನ್ನು ಅಧಿಕಾರ ಬರುವ ಮುನ್ನವೇ ಮಾಡಿ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿ ರುವ ಇವರ ಸ್ಪರ್ಧೆಯಿಂದ ವಾರ್ಡ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತಿದೆ. ಹೊಸ ಕನಸು ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿದಿರುವ ಇವರಿಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು ಪ್ರಚಾರಕ್ಕೆ ಹೋದ ಲ್ಲೆಲ್ಲ ಒಳ್ಳೇಯ ಭರವಸೆಯ ಮಾತುಗಳು ಉತ್ಸಾಹದ ಗೆಲುವಿನ ಆಸೆಯ ಮಾತುಗಳನ್ನು ವಾರ್ಡ್ ನ ಜನರು ಹೇಳುತ್ತಿದ್ದಾರೆ.

ಪ್ರಚಾರಕ್ಕೆ ಹೋದಲೆಲ್ಲ ನಮಗೂ ನಿಮ್ಮಂಥವರೇ ಬೇಕಾಗಿದೆ ಬದಲಾವಣೆ ಬೇಕಾಗಿದೆ ನಮಗೆ ನೀವು ಬಂದಿದ್ದು ತುಂಬಾ ತುಂಬಾ ಅನುಕೂಲ ಯಾವುದೇ ಕಾರಣಕ್ಕೂ ನಿಮ್ಮೊಂದಿಗೆ ನಾವಿದ್ದೇವೆ ನೀವು ಬಂದರೆ ನಮಗೂ ಅನುಕೂಲ ನಿಮ್ಮಂಥ ಸರಳ ಸಜ್ಜನಿಕೆಯ ನಾಯಕರೇ ನಮ್ಮ ವಾರ್ಡ್ ಗೆ ಬೇಕು ಎನ್ನುತ್ತಿದ್ದಾರೆ.

ಇದೇ ಉತ್ಸಾಹದಲ್ಲಿ ಶ್ರೀಮತಿ ಭಾಗಿರತಿ ಚಂದ್ರಪ್ಪ ಮುಶಪ್ಪನವರ ಅವರು ಪ್ರಚಾರವನ್ನು ಮಾಡುತ್ತಿ ದ್ದಾರೆ.ಇಂದು ಕೂಡಾ ವಾರ್ಡ್ ನ ಹಲವೆಡೆ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರವನ್ನು ಮಾಡಿದರು

ಹಲವೆಡೆ ಅಬ್ಬರದ ಪ್ರಚಾರವನ್ನು ಮಾಡಿ ಮತ ಯಾಚನೆ ಮಾಡಿದರು.ಪಾದಯಾತ್ರೆಯ ಮೂಲಕ ತೆರಳಿ ಪ್ರಚಾರ ಮಾಡುತ್ತಾ ಮತಯಾಚನೆ ಮಾಡಿ ಇದೊಂದು ಬಾರಿ ಅವಕಾಶವನ್ನು ನೀಡುವಂತೆ ಮತದಾರರಲ್ಲಿ ಕೇಳಿಕೊಂಡರು.

ಬಿಜೆಪಿ ಅಭ್ಯರ್ಥಿ ಶ್ರೀಮತಿ ಭಾಗಿರತಿ ಚಂದ್ರಪ್ಪ ಮುಶಪ್ಪನವರ ಇವರೊಂದಿಗೆ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಆಪ್ತರು ಅಭಿಮಾ ನಿಗಳು ಸೇರಿದಂತೆ ಹಲವರು ಪಾಲ್ಗೊಂಡು ಮನೆ ಮನೆಗೆ ತೆರಳಿ ಮತಯಾಚನೆಯನ್ನು ಮಾಡಿದರು.


Google News

 

 

WhatsApp Group Join Now
Telegram Group Join Now
Suddi Sante Desk