ಹುಬ್ಬಳ್ಳಿ –
ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬ ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಹೌದು ಹುಬ್ಬಳ್ಳಿಯ ನವನಗರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಐಐ ಮುಲ್ಲಾನವರ ಅಮಾನತು ಗೊಂಡ ಮುಖ್ಯಶಿಕ್ಷಕರಾಗಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನವನಗರ ಇವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ವನ್ನು ಮಾಡಲಾಗಿದೆ.ಶಾಲೆಗೆ ಬಂದಾಗ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಂತೆ ಶಾಲೆಯ ಸಹೋದ್ಯೋಗಿ ಮತ್ತು ಸಿಬ್ಬಂದಿಗಳೊಂದಿಗೆ ವಿಚಿತ್ರವಾಗಿ ನಡೆದು ಕೊಳ್ಳುತ್ತಿದ್ದರು.

ಇದರಿಂದಾಗಿ ಶಾಲೆಯ ಆಡಳಿತದಲ್ಲಿ ತೊಂದರೆಯಾ ಗುತ್ತಿದ್ದು ಈ ಕುರಿತಂತೆ ಸಾಕಷ್ಟು ಪ್ರಮಾಣದಲ್ಲಿ ದೂರುಗಳು ಬಂದ ಹಿನ್ನಲೆಯಲ್ಲಿ ವರದಿಯನ್ನು ಆಧರಿಸಿ ಧಾರವಾಡ ಡಿಡಿಪಿಐ ಮೋಹನಕುಮಾರ ಹಂಚಾಟೆ ಇವರು ಮುಖ್ಯೋಪಾಧ್ಯಯರಾದ ಮುಲ್ಲಾನವರ ಇವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಿ ಆದೇಶವನ್ನು ಮಾಡಿದ್ದಾರೆ. ಕೊನೆಗೂ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದ ಕುರಿತಂತೆ ದೂರಿನ ಹಿನ್ನಲೆಯಲ್ಲಿ ಈ ಒಂದು ಕ್ರಮವನ್ನು ಡಿಡಿಪಿಐ ಕೈಗೊಂಡಿದ್ದಾರೆ.