7ನೇ ವೇತನ ಆಯೋಗದ ವಿಚಾರದಲ್ಲಿ ಕಣ್ತೇರೆದು ನೋಡದ ರಾಜ್ಯ ಸರ್ಕಾರ – ತೆರೆ ಮರೆಯಲ್ಲಿ ಮತ್ತೊಂದು ಹೋರಾಟಕ್ಕೆ ಸಿದ್ದವಾಗುತ್ತಿದ್ದಾರೆ ರಾಜ್ಯ ಸರ್ಕಾರಿ ನೌಕರರು…..

Suddi Sante Desk
7ನೇ ವೇತನ ಆಯೋಗದ ವಿಚಾರದಲ್ಲಿ ಕಣ್ತೇರೆದು ನೋಡದ ರಾಜ್ಯ ಸರ್ಕಾರ – ತೆರೆ ಮರೆಯಲ್ಲಿ ಮತ್ತೊಂದು ಹೋರಾಟಕ್ಕೆ ಸಿದ್ದವಾಗುತ್ತಿದ್ದಾರೆ ರಾಜ್ಯ ಸರ್ಕಾರಿ ನೌಕರರು…..

ಬೆಂಗಳೂರು

7ನೇ ವೇತನ ಆಯೋಗದ ವಿಚಾರದಲ್ಲಿ ಕಣ್ತೇರೆದು ನೋಡದ ರಾಜ್ಯ ಸರ್ಕಾರ – ತೆರೆ ಮರೆಯಲ್ಲಿ ಮತ್ತೊಂದು ಹೋರಾಟಕ್ಕೆ ಸಿದ್ದವಾಗುತ್ತಿದ್ದಾರೆ ರಾಜ್ಯ ಸರ್ಕಾರಿ ನೌಕರರು

ಅದ್ಯಾಕೋ ಏನೋ ಗೊತ್ತಿಲ್ಲ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ನೇಮಕಗೊಂ ಡಿರುವ 7ನೇ ವೇತನ ಆಯೋಗದಿಂದ ವರದಿ ಸಿದ್ದಗೊಂಡಿದೆ.ಸಧ್ಯ ಈ ಒಂದು ವರದಿಯನ್ನು ರಾಜ್ಯ ಸರ್ಕಾರ ಸ್ವೀಕಾರ ಮಾಡಿದರೆ ಅನುಷ್ಠಾ ನಗೊಳಿಸಬೇಕು.ಹೀಗಿರುವಾಗ ಈ ಒಂದು ವರದಿಯನ್ನು ಸ್ವೀಕಾರ ಮಾಡುವ ಬದಲಿಗೆ ಮತ್ತೆ ಈ ಒಂದು ಆಯೋಗದ ಅವಧಿಯನ್ನು ಎರಡ ನೇಯ ಬಾರಿಗೆ ಮತ್ತೆ 6 ತಿಂಗಳು ಕಾಲ ವಿಸ್ತರಣೆ ಯನ್ನು ಮಾಡಿದೆ.

ಸಧ್ಯ ಇದು ಈವರೆಗೆ ಅಪ್ಡೇಟ್ ಆಗಿರುವ ವಿಚಾರ ಇನ್ನೂ ಪ್ರಮುಖವಾಗಿ ಈ ಒಂದು 7ನೇ ವೇತನ ಆಯೋಗದಿಂದ ವರದಿಯನ್ನು ಸ್ವೀಕಾರ ಮಾಡಲು ಯಾಕೇ ಮಿನಾಮೇಷ ಮತ್ತೊಂದೆಡೆ ಈ ಒಂದು ವಿಚಾರದಲ್ಲಿ ರಾಜ್ಯ ಸರ್ಕಾರ ಯಾಕೋ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತುಗಳು ಸರ್ಕಾರದ ನಡೆಯಿಂದ ಕಂಡು ಬರುತ್ತಿದೆ.

ಈಗಷ್ಟೇ ಬೆಳಗಾವಿಯಲ್ಲಿ ನಡೆದ ಚಳಿಗಾಗಲ ಅಧಿವೇಶನದಲ್ಲಿ ಇದನ್ನು ಜಾರಿಗೆ ತರುವ ಕುರಿ ತಂತೆ ಪ್ರತಿಪಕ್ಷದವರು ಹೋರಾಟಕ್ಕೆ ಇಳಿದ ಕೂಡಲೇ ಶೀಘ್ರದಲ್ಲೇ ನಾವು 7ನೇ ವೇತನ ಆಯೋಗದ ಕುರಿತಂತೆ ಚರ್ಚೆಯನ್ನು ಮಾಡೊ ದಾಗಿ ಹೇಳಿ ಜಾರಿಕೊಂಡಿದ್ದಾರೆ.

ಇದನ್ನೇಲ್ಲವನ್ನು ನೋಡಿದರೆ ಅದ್ಯಾಕೋ ಏನೋ 7ನೇ ಆಯೋಗದ ವಿಚಾರದಲ್ಲಿ ರಾಜ್ಯ ಸರ್ಕಾರ ವಿನಾಕಾರಣ ವಿಳಂಬ ಧೋರಣೆಯನ್ನು ತೋರು  ತ್ತಿರುವುದು ಕಂಡು ಬರುತ್ತಿದೆ.ಇನ್ನೂ ಇತ್ತ ಈ ಒಂದು ವಿಚಾರದಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕಾದು ಕಾದು ಬೇಸತ್ತಿದ್ದು

ಮತ್ತೊಂದು ಹೋರಾಟ ಅನಿವಾರ್ಯ ಎನ್ನು ತ್ತಿದ್ದು ರಾಜ್ಯ ಸಂಘಟನೆಯ ನಾಯಕರು ಕೂಡಾ ಹೋರಾಟದ ಮಾತುಗಳನ್ನು ಹೇಳುತ್ತಿದ್ದು ಏನೇ ನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.