ಸಾವಿನ ಸುದ್ದಿಯ ವೈರಲ್ ನಡುವೆ ನಾನು ಬದುಕಿದ್ದೇನೆಂದು ಸಂದೇಶ ನೀಡಿದ ನಟಿ ಪೂನಂ ಪಾಂಡೆ – ಸಾವಿನ ಸುದ್ದಿಯ ಹಿಂದಿನ ರಹಸ್ಯವೇನು ಎಂದು ಪ್ರಶ್ನೆ ಮಾಡಿದ ನೆಟ್ಟಿಗರು…..

Suddi Sante Desk
ಸಾವಿನ ಸುದ್ದಿಯ ವೈರಲ್ ನಡುವೆ ನಾನು ಬದುಕಿದ್ದೇನೆಂದು ಸಂದೇಶ ನೀಡಿದ ನಟಿ ಪೂನಂ ಪಾಂಡೆ – ಸಾವಿನ ಸುದ್ದಿಯ ಹಿಂದಿನ ರಹಸ್ಯವೇನು ಎಂದು ಪ್ರಶ್ನೆ ಮಾಡಿದ ನೆಟ್ಟಿಗರು…..
ಬೆಂಗಳೂರು

ಸಾವಿನ ಸುದ್ದಿಯ ವೈರಲ್ ನಡುವೆ ನಾನು ಬದುಕಿದ್ದೇನೆಂದು ಸಂದೇಶ ನೀಡಿದ ನಟಿ ಪೂನಂ ಪಾಂಡೆ – ಸಾವಿನ ಸುದ್ದಿಯ ಹಿಂದಿನ ರಹಸ್ಯ ವೇನು ಎಂದು ಪ್ರಶ್ನೆ ಮಾಡಿದ ನೆಟ್ಟಿಗರು

ಪಡ್ದೆ ಹುಡುಗರ ಹಾಟ್ ಫೇವರೆಟ್ ನಟಿ ಪೂನಂ ಪಾಂಡೆ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.ಈ ಒಂದು ಸುದ್ದಿಯ ನಡುವೆ ನಟಿ ಪೂನಂ ಪಾಂಡೆ ದಿಢೀರ್ ಪ್ರತ್ಯಕ್ಷವಾಗಿ ನಾನು ಇನ್ನೂ ಬದುಕಿದ್ದೇನೆ ಎಂಬ ವಿಡಿಯೋ ಮೂಲಕ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ಹೌದು ಬಾಲಿವುಡ್ ನಟಿ ಪೂನಂ ಪಾಂಡೆ ಗರ್ಭ ಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ವೈರಲ್ ಆಗಿತ್ತು ಅನೇಕ ಸೆಲೆಬ್ರಿಟಿಗಳು ಕೂಡಾ ಪೂನಂ ಪಾಂಡೆ ಸಾವಿಗೆ ಸಂತಾಪವನ್ನೂ ಕೂಡಾ ಸೂಚಿಸಿದ್ದರು.ಇದೇಲ್ಲದರ ನಡುವೆ ಸಧ್ಯ ಪೂನಂ ಪಾಂಡೆ ಪ್ರತ್ಯಕ್ಷವಾಗಿದ್ದಾರೆ.ನಾನು ಬದುಕಿದ್ದೇನೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ
ಇವರು ನಿಧನರಾಗಿರುವ ಬಗ್ಗೆ ಸುದ್ದಿ ಕೂಡಾ ಇವರ ಇನ್‌ಸ್ಟಾಗ್ರಾಮ್‌ನಲ್ಲಿಯೇ ಹಂಚಿಕೊಳ್ಳ ಲಾಗಿತ್ತು. ಆದರೆ ಪೂನಂ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ಪೂನಂ ಪಾಂಡೆ ಸತ್ತಿಲ್ಲ ನಾನು ಬದುಕಿದ್ದೇನೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ಸಾವಿನ ಸುದ್ದಿಯ ನಡುವೆ ದಿಢೀರ್‌ ಅಂತ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತ್ಯಕ್ಷವಾದ ಪೂನಂ ಪಾಂಡೆ ನಾನು ಇಲ್ಲೇ ಇದ್ದೇನೆ ಬದುಕಿದ್ದೇನೆ. ನಾನು ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನ ಪ್ಪಿಲ್ಲ.ಆದರೆ ನೂರಾರು ಮಹಿಳೆಯರು ಈ ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದ ನಿಧನ ರಾಗುತ್ತಿದ್ದಾರೆ.ಅವರಿಂದ ಏನೂ ಮಾಡಲು ಸಾಧ್ಯವಾಗದೇ ಈ ರೀತಿ ಆಗುತ್ತಿಲ್ಲ.
ಅವರಿಗೆ ಆ ಬಗ್ಗೆ ಏನು ಮಾಡಬೇಕು ಎಂಬ ಅರಿವು ಇಲ್ಲದೆಯೇ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.ನನ್ನ ಸಾವಿನ ಸುದ್ದಿಯ ಬಗ್ಗೆ ಹೆಮ್ಮೆ ಇದೆ ನಾನು ಯಾರಿಗಾದ ರೂ ನೋವು ನೀಡಿದ್ದರೆ ಕ್ಷಮೆ ಇರಲಿ. ಗರ್ಭಕಂ ಠದ ಕ್ಯಾನ್ಸರ್‌ ಬಗ್ಗೆ ನಾವು ಹೆಚ್ಚು ಮಾತನಾಡು ತ್ತಿಲ್ಲ.
https://youtube.com/shorts/m5c7iSJS18Q?si=_xMifbes_8aivoob
ಅದರ ಬಗ್ಗೆ ಎಚ್ಚರಿಸುವುದು ನನ್ನ ಉದ್ದೇಶವಾ ಗಿತ್ತು.ನಾನು ಸಾವಿನ ಕುರಿತ ಸುಳ್ಳು ಸುದ್ದಿಯನ್ನು ಹಬ್ಬಿಸಿದೆ ಇದು ವಿಪರೀತ ಅಂತ ನನಗೂ ಗೊತ್ತಿದೆ ಆದರೆ ನೀವೆಲ್ಲ ದಿಢೀರ್ ಅಂತ ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ಮಾತನಾಡಲು ಆರಂಭಿ ಸಿದ್ದೀರಿ.ಈ ಕಾಯಿಲೆ ನಿಮ್ಮನ್ನು ಸದ್ದಿಲ್ಲದೇ ಬಲಿ ಪಡೆಯುತ್ತದೆ.
ಈ ರೋಗದ ಮೇಲೆ ಆದಷ್ಟು ಬೇಗ ಬೆಳಕು ಚೆಲ್ಲಬೇಕಾಗಿದೆ ನನ್ನ ಸಾವಿನ ಸುದ್ದಿಯಿಂದ ಈ ರೋಗದ ಬಗ್ಗೆ ಚರ್ಚೆ ಶುರು ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ನಟಿ ಪೂನಂ ಪಾಂಡೆ ಹೇಳಿಕೊಂಡಿದ್ದಾರೆ.ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಳ್ಳಲಾ ಗಿತ್ತು.
ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ ಎಂದು ತಿಳಿಸಲು ತುಂಬಾ ದುಃಖವಾಗುತ್ತಿದೆ. ಅವರನ್ನು ಭೇಟಿಯಾದ ಪ್ರತಿಯೊಂದು ಜೀವವು ಕೂಡ ಶುದ್ಧ ಪ್ರೀತಿ ಮತ್ತು ದಯೆಯನ್ನು ಪಡೆದುಕೊಂ ಡಿವೆ ಈ ದುಃಖದ ಸಮಯದಲ್ಲಿ ಅವರ ಖಾಸಗಿ ತನಕ್ಕೆ ಗೌರವ ನೀಡಿ ಎಂದು ವಿನಂತಿಸಿಕೊಳ್ಳು ತ್ತೇವೆ ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿತ್ತು
ಇದನ್ನು ಕಂಡು ಪೂನಂ ನಿಧನಕ್ಕೆ ಎಲ್ಲರೂ ಸಂತಾಪವನ್ನು ಕೂಡಾ ಸೂಚಿಸಿದ್ದರು.ಇನ್ನು ನಟಿ ಪೂನಂ ಸಾವಿನ ಸುದ್ದಿ ಹರಿದಾಡುತ್ತಿದ್ದಂತೆಯೇ ಸಾಕಷ್ಟು ಅನುಮಾನಗಳು ಮೂಡಿದ್ದವು ಪೂನಂ ಸತ್ತಿಲ್ಲ.ಎಂದೇ ಅನೇಕರು ವಾದಿಸಿದ್ದರು ಮೂರ್ನಾಲ್ಕು ದಿನಗಳ ಹಿಂದೆ ಪೂನಂ ಪಾಂಡೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಅಲ್ಲದೆ, ಅವರಲ್ಲಿ ಯಾವುದೇ ರೋಗ ಲಕ್ಷಣ ಗಳು ಕಾಣಿಸಿಕೊಂಡಿರಲಿಲ್ಲ. ಆಗ ಸಂದರ್ಶನ ನೀಡಿದ್ದ ಅವರು ಕೆಲವೇ ದಿನಗಳಲ್ಲಿ ಬಿಗ್ ಸರ್ಪ್ರೈಸ್ ನೀಡಲಿದ್ದೇನೆ ಎಂದಿದ್ದರು ಇನ್ನು ಕ್ಯಾನ್ಸರ್ ರೋಗಿಗಳು ದಿಢೀರ್ ಅಂತ ಸಾಯು ವುದಿಲ್ಲ ಪೂನಂ ಸಾವಿನ ಕೇಳಿಬಂದಿತ್ತಾದರೂ ಅವರ ಮೃತದೇಹವನ್ನು ಯಾರೂ ನೋಡಿರಲಿಲ್ಲ ಇವೆಲ್ಲಾ ಅಂಶಗಳಿಂದ ಪೂನಂ ಬದುಕಿದ್ದಾರೆ ಎಂಬ ಅನುಮಾನ ಬಲವಾಗಿ ಕಾಡಿತ್ತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.