ಧಾರವಾಡ –
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಯ್ಕೆಯಾಗಿ ಅದೇ ಸಂತೋಷ ದಲ್ಲಿ ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳದೇ ಬೆಳ್ಳಂ ಬೆಳಿಗ್ಗೆ ಜನರ ಸೇವೆಗೆ ಮುಂದಾಗಿದ್ದಾರೆ.ಹೌದು ಧಾರವಾಡದ ವಾರ್ಡ್ 3 ರ ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ ಬೆಳ್ಳಂ ಬೆಳಿಗ್ಗೆ ಪಿಲ್ಡಿಗಿಳಿದಿ ದ್ದಾರೆ.
ಹೌದು ನನ್ನನ್ನು ಆಯ್ಕೆ ಮಾಡಿದ ಮತದಾರರ ಸೇವೆಯನ್ನು ತೀರಿಸಲು ಈರೇಶ ಅಂಚಟಗೇರಿ ಮುಂದಾಗಿದ್ದಾರೆ. ಮುಂಜಾನೆಯೇ ವಾರ್ಡ್ ನ ಹಲವೆಡೆ ತೆರಳಿ ಸ್ವಚ್ಚತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದರು
ಇದೇ ವೇಳೆ ಸ್ವಚ್ಚತಾ ಸಿಬ್ಬಂದಿಗೆ ಮತ್ತು ಅಧಿಕಾರಿ ಗಳಿಗೆ ಸಾರ್ವಜನಿಕರೊಂದಿಗೆ ಸಹಕರಿಸಿ ಕಾರ್ಯ ನಿರ್ವಹಿಸಲು ಸೂಚಿಸುವ ಮೂಲಕ ಸೇವಾ ಕಾರ್ಯ ಪ್ರಾರಂಭ ಮಾಡಿದರು
ಇದರೊಂದಿಗೆ ಈರೇಶ ಅಂಚಟಗೇರಿ ಅವರು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆ ಮೊದಲ ದಿನವೇ ಸೇವೆಯ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಋಣವನ್ನು ತೀರಿಸಲು ಮುಂದಾಗಿದ್ದು ಮುಚ್ಚುವಂತಹ ಕಾರ್ಯವಾಗಿದೆ