ಶಿವಮೊಗ್ಗ –
ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ತಡೆಯಾಜ್ಞೆಯನ್ನು ತರಲಾಗಿದ್ದು ತೆರವಾಗದಿದ್ದರೆ ಉಳಿದ ವರ್ಗಾವಣೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ವರ್ಗಾವಣೆಯ ವಿಚಾರದಲ್ಲಿ ತಡೆಯಾಜ್ಞೆಯನ್ನು ತರುವ ಕುರಿತಂತೆ ಬೇಸರವನ್ನು ವ್ಯಕ್ತಪಡಿಸಿ ಈ ಕುರಿತಂತೆ ಅಸಮಧಾನವನ್ನು ವ್ಯಕ್ತಪಡಿಸಿದರು.
ಅಧ್ಯಾಪಕರು ಏಕೆ ಈ ರೀತಿ ವರ್ಗಾವಣೆ ತಡೆಯಾಜ್ಞೆ ಮಾಡ್ತಿದ್ದಾರೆ ಗೊತ್ತಿಲ್ಲ. ಕಳೆದ ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆ ನೆನೆಗುದಿಗೆ ಬಿದ್ದಿದೆ.ಮೂರು ವರ್ಷದಿಂದ ಸತತವಾಗಿ ಕೋರ್ಟ್ ಗೆ ಹೋಗಿ ಸ್ಟೇ ತರುತ್ತಿದ್ದಾರೆ. ಹೀಗಾಗಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗುತ್ತಿದೆ.
ಸರ್ಕಾರದಿಂದ ಅಪೀಲ್ ಹೋಗುತ್ತೇವೆ.ಸ್ಟೇ ತೆರವು ಗೊಳಿಸುವ ಪ್ರಯತ್ನ ಮಾಡುತ್ತೇವೆ ಸ್ಟೇ ತೆರವಾಗ ದಿದ್ದರೆ ಉಳಿದ ವರ್ಗಕ್ಕೆ ವರ್ಗಾವಣೆ ಪ್ರಕ್ರಿಯೆ ಮಾಡುತ್ತೇವೆ ಎಂದರು.ಇದರೊಂದಿಗೆ ವರ್ಗಾವಣೆಗೆ ಯಾವುದೇ ರೀತಿಯಲ್ಲೂ ನಿಲ್ಲಿಸುವ ಮಾತೇ ಇಲ್ಲ ಮಾಡೇ ಮಾಡುತ್ತೇವೆ ಎಂದರು.