ಯಾದಗಿರಿ –
ಅನುಮತಿ ಇಲ್ಲದೆ ಇದ್ರು ಅನಧಿಕೃತವಾಗಿ ಸರ್ಕಾರಿ ಶಾಲೆ ಆರಂಭಿಸಿದ ಶಿಕ್ಷಕರು..!ಸರ್ಕಾರದ ನಿಮಯ ಮೀರಿ ಸರ್ಕಾರಿ ಶಾಲೆ ಆರಂಭ..!ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಅಂತ ಎನ್ನುತ್ತಿರುವ ತಜ್ಞರು.ಯಾದಗಿರಿ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ನಡೆದ ಅವಾಂತರ
ಕರೋನಾ ಮೊದಲನೇ ಅಲೆ ಹಾಗೂ ಎರಡನೇಯ ಅಲೆ ಮೂಗಿದು ಇದೀಗ ಮೂರನೆ ಅಲೆಯ ಆತಂಕ ದಲ್ಲಿ ದೇಶಕ್ಕೆ ಎದುರಾಗಿದೆ.ಇದರ ಮಧ್ಯ ನಮ್ಮ ರಾಜ್ಯ ಸರ್ಕಾರ 6 ನೇ ತರಗತಿಯಿಂದ ಪದವಿ ಕಾಲೇಜುಗಳು ಆರಂಭಿಸುವಂತೆ ಅದುಸೂಚನೆ ನೀಡಿದೆ.ಜೊತೆಗೆ ಈ ಇರೋನಾ ಮೂರನೇ ಅಲೆ ಬರೀ ಮಕ್ಕಳಿಗೆ ಮಾತ್ರ ಟಾರ್ಗೆಟ್ ಮಾಡುತ್ತೆ ಅಂತ ತಜ್ಞರು ತಿಳಿಸಿದ್ದಾರೆ.ಇದರಿಂದಾಗಿ ಸರ್ಕಾರ ಒಂದ ರಿಂದ ಐದನೆಯ ತರಗತಿವರೆಗೆ ಶಾಲೆ ಆರಂಭಿಸಿಲ್ಲ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಅಧಿಕೃತವಾಗಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದೆ.
ಹೌ್ಉ ಒಂದು ಕಡೆ ಸರ್ಕಾರದ ಆದೇಶ ಮೀರಿ ಅಧಿಕೃತ ವಾಗಿ ತೆರೆದ ಶಾಲೆ,ಇನ್ನೊಂದು ಕಡೆ ಸಣ್ಣ ಮಕ್ಕಳನ್ನು ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಇಲ್ಲದೇ ಗುಂಪು ಗುಂಪಾಗಿ ತರಗತಿ ಕೊಠಡಿಯಲ್ಲಿ ಕೂಡಿಸಿದ ಶಿಕ್ಷಕರು.
ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಯಡ್ಡಳ್ಳಿ ಎಂಬ ಗ್ರಾಮದಲ್ಲಿ.ಸರ್ಕಾರದ ಅನುಮತಿ ಇಲ್ಲದೇ ಇದ್ರೂ ಕೂಡ ಈ ಶಾಲೆಯ ಶಿಕ್ಷಕರು ಅಧಿಕೃತವಾಗಿ ಶಾಲೆ ತೆಗಿದಿದ್ದಲ್ಲದೇ ಪೋಷಕ ರಿಗೂ ಒಂದು ಮಾತು ತಿಳಿಸದಂತೆ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂಡಿ ಹಾಕಿ ಬೋಧನೆ ಮಾಡುತಿದ್ದಾರೆ.1 ರಿಂದ 5 ನೇ ತರಗತಿ ಆರಂಭ ಮಾಡಿ ಮಕ್ಕಳ ಜೀವದ ಜೊತೆ ಆಟ ಆಡುತ್ತಿರೋದು ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು, ಈ ಕರೋನಾ ಮೂರನೇ ಅಲೇ ಸಣ್ಣ ಮಕ್ಕಳನ್ನೇ ಟಾರ್ಗೇಟ್ ಮಾಡುತ್ತೆ ಅಂತ ತಜ್ಞರು ಸಾರಿ ಸಾರಿ ಹೇಳುತಿದ್ದಾರೆ.ಜೊತೆಗೆ ಮಕ್ಕಳಿಗೆ ನೆಗೆಟಿವ್ ರಿಪೋಟ್೯ ಜೊತೆಗೆ ಪೋಷಕರ ಅನು ಮತಿ ಪಡೆದು ಕರೋನಾ ನಿಯಮಗಳನ್ವಯ ಶಾಲೆ ಆರಂಭಿಸಬೇಕು.
ಅಷ್ಟೇ ಅಲ್ಲದೇ ಶಿಕ್ಷಣ ಸಚಿವರು ಕೂಡ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆ ಆರಂಭಿಸಬೇಕೋ ಇಲ್ಲವೋ ಅಂತ ತಜ್ಞರ ಜೊತೆ ಮಾಹಿತಿ ಪಡೆದು ಮಕ್ಕಳಿಗೆ ಸೂಕ್ತ ಭದ್ರತೆಯೊಂದಿಗೆ ಶಾಲೆ ಆರಂಭಿ ಸುವ ಚಿಂತನೆಯಲ್ಲಿದ್ದಾರೆ.ಆದ್ರೆ ಇಲ್ಲಿ ಮಾತ್ರ ಇದ್ಯಾವವುದನ್ನು ಲೆಕ್ಕಿಸದೇ ರಾಜಾರೋಷವಾಗಿ ಶಾಲೆ ಆರಂಭಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.
ಒಟ್ಟಾರೆಯಾಗಿ ಯಡ್ಡಳ್ಳಿ ಗ್ರಾಮದಲ್ಲಿ ಮಾತ್ರ ಶಿಕ್ಷಕ ರು ಸರ್ಕಾರದ ರೂಲ್ಸ್ ಬ್ರೇಕ್ ಮಾಡಿ ಪೇಚುಗೆ ಸಿಲುಕಿದ್ದಾರೆ.ಅಷ್ಟೇ ಅಲ್ಲದೇ ಮಕ್ಕಳಿಗೆ ಮಾಸ್ಕ್ ನಿಡದೇ ಸಾಮಾಜಿಕ ಅಂತರ ಕೂಡ ಕಾಪಾಡದೆ ಇಂದೊಂದು ಬೆಂಚಿಗೆ 8 ರಿಂದ 10 ಮಕ್ಕಳನ್ನು ಕೂಡಿಸಿ ಪಾಠ ಬೋಧನೆ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
ಇನ್ನಾದ್ರೂ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆ ಎಚ್ಚೇತ್ತುಕೊಂಡು ಇನ್ನೊಮ್ಮೆ ಹೀಗೆ ಆಗಲಾರದಂತೆ ಸೂಕ್ತವಾದ ಮುಂಜಾಗೃತ ಕ್ರಮ ಕೈಗೊಂಡು ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡ್ತಾರಾ ಅನ್ನೋದು ಕಾದು ನೋಡಬೇಕಿದೆ.