ಐತಿಹಾಸಿಕ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ – ಪೂಜ್ಯರ ಪುತ್ಥಳಿಗಳನ್ನು ಭಕ್ತರೊಂದಿಗೆ ತಲೆಯ ಮೇಲೆ ಇಟ್ಟುಕೊಂಡು ಸಾವಿರಾರು ತಾಯಂದಿರೊಂದಿಗೆ ಮಠದ ಶಾಲಾ ಆವರಣದವರೆಗೆ ಮೆರವಣಿಗೆ ಮೂಲಕ ನಡೆದುಕೊಂಡು ಬಂದ ಜನಸೇವಕ…..

Suddi Sante Desk
ಐತಿಹಾಸಿಕ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ – ಪೂಜ್ಯರ ಪುತ್ಥಳಿಗಳನ್ನು ಭಕ್ತರೊಂದಿಗೆ ತಲೆಯ ಮೇಲೆ ಇಟ್ಟುಕೊಂಡು  ಸಾವಿರಾರು ತಾಯಂದಿರೊಂದಿಗೆ  ಮಠದ ಶಾಲಾ ಆವರಣದವರೆಗೆ ಮೆರವಣಿಗೆ ಮೂಲಕ ನಡೆದುಕೊಂಡು ಬಂದ ಜನಸೇವಕ…..

ನವಲಗುಂದ

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನವಲಗುಂದ ವಿಧಾನಸಭಾ ಮತಕ್ಷೇತ್ರದ ಅಣ್ಣಿಗೇರಿ ತಾಲೂಕ ಶ್ರೀಕ್ಷೇತ್ರ ಮಣಕವಾಡ ಗ್ರಾಮದ ಶ್ರೀ ಗುರು ಅನ್ನದಾನೀಶ್ವರ ದೇವ. ಮಂದಿರ ಮಹಾಮಠದ ಮಹಾತಪಸ್ವಿಗಳಾದ ನಿರಂಜನಜ್ಯೋತಿ ಲಿಂ. ಮೃತ್ಯುಂಜಯ ಅಜ್ಜನ ಸಂಭ್ರಮ 2024ರ ಉದ್ಘಾಟನಾ ಅನ್ನದಾನೀಶ್ವರ ದೇವಮಂದಿರ ಮಹಾಮಠ ಮನಕವಾಡ ಪೂಜ್ಯ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳ ಸಮಾರಂಭದಲ್ಲಿ ಭಾಗವಹಿಸಿ ಪೂಜ್ಯರ ಆಶೀರ್ವಾದ ವನ್ನು ಶಾಸಕ ಎನ್ ಹೆಚ್ ಕೋನರೆಡ್ಡಿ ರವರು ಪಡೆದುಕೊಂಡರು

ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳು  ಸಿದ್ಧರಾಮಯ್ಯ ಅವರು  ಬಸವಣ್ಣವರವನ್ನು ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿ ಸಿದ ಪ್ರಯುಕ್ತವಾಗಿ ಈ ಬಾರಿ ಜಾತ್ರಾ ವಿಶೇಷ ಕಾರ್ಯಕ್ರಮವನ್ನು ಮಠದ ಶ್ರೀಗಳು ಮಠದ ಆವರಣದಿಂದ ಸಾಗಿತು

ಭಕ್ತರ ತಲೆಯ ಮೇಲೆ ಪೂಜ್ಯರ ಪುತ್ಥಳಿಗಳನ್ನು ಇರಿಸಿ ಹಾಗೂ ಸಾವಿರಾರು ತಾಯಂದಿರಿಂದ ಅವರ ತಲೆ ಮೇಲೆ ವಚನದ ಪುಸ್ತಕವನ್ನು ಇರಿಸಿ  ಕೊಂಡು ಮಠದ ಶಾಲಾ ಆವರಣದವರೆಗೆ ಮೆರವಣಿಗೆ ಮೂಲಕ ನಡೆದುಕೊಂಡು ಹೋಗಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು

ನವಲಗುಂದ ವಿಧಾನಸಭಾ ಮತಕ್ಷೇತ್ರ-69 ರಲ್ಲಿ ನ ಈ ಒಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ವಿಶೇಷವಾಗಿ ಕಂಡು ಬಂದಿತು…..

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.