ಪೊಲೀಸ್ ಕಾನ್ಸ್ ಟೇಬಲ್ ನನ್ನು ಬಂಧನ ಮಾಡಿದ ಪೊಲೀಸರು – ಬಂಧನದ ಕಾರಣ ಕೇಳಿದ್ರೆ ಶಾಕ್ ಆಗತೀರಾ…..

Suddi Sante Desk
ಪೊಲೀಸ್ ಕಾನ್ಸ್ ಟೇಬಲ್ ನನ್ನು ಬಂಧನ ಮಾಡಿದ ಪೊಲೀಸರು – ಬಂಧನದ ಕಾರಣ ಕೇಳಿದ್ರೆ ಶಾಕ್ ಆಗತೀರಾ…..

ಮಂಡ್ಯ

ಪೊಲೀಸ್ ಕಾನ್ಸ್ ಟೇಬಲ್ ನನ್ನು ಬಂಧನ ಮಾಡಿದ ಪೊಲೀಸರು – ಬಂಧನದ ಕಾರಣ ಕೇಳಿದ್ರೆ ಶಾಕ್ ಆಗತೀರಾ ಹೌದು

ಪೊಲೀಸ್ ಕಾನ್ಸ್ ಟೇಬಲ್ ರೊಬ್ಬರನ್ನು ಪೊಲೀಸರೇ ಬಂಧನ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.ಹೌದು ಮನೆ ಕಳ್ಳರಿಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಪೊಲೀಸ್​ ಕಾನ್ಸ್​ಟೇಬಲ್ ರೊಬ್ಬರನ್ನು ಸಧ್ಯ ಅರೆಸ್ಟ್ ಮಾಡಲಾಗಿದೆ.ಕೆಂಡಗಣ್ಣಯ್ಯ ಬಂಧಿತ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.

ಡಾಲಿ,ಭವನ್,ಸಾದನ್,ಅಯೂಬ್, ಮುನ್ನಾ, ಪ್ರಸಾದ್,ಫಯಾಜ್ ರನ್ನು ಸಧ್ಯ ಪೊಲೀಸರು ಅರೆಸ್ಟ್​ ಮಾಡಿದ್ದು ಇವರಿಗೆ ಪೊಲೀಸ್ ಪೇದೆ ಡೆಂಗಣ್ಣಯ್ಯ ಕಳ್ಳತನ ಮಾಡಲು ಸಹಾಯ ಮಾಡುತ್ತಿದ್ದನಂತೆ ಈ ಕುರಿತಂತೆ ದೂರುಗಳು ಸಾಕ್ಷಿಗಳು ಕಂಡು ಬಂದ ಹಿನ್ನಲೆಯಲ್ಲಿ ಬಂಧನ ವನ್ನು ಮಾಡಲಾಗಿದೆ.ಬಂಧಿತರಿಂದ 1 ಕೆಜಿ 486 ಗ್ರಾಂ ಚಿನ್ನಾಭರಣ,1.70 ಲಕ್ಷ ರೂ ಗಳನ್ನು ವಶ ಪಡಿಸಿಕೊಳ್ಳಲಾಗಿದೆ.ನಗದು ಜಪ್ತಿ ಮಾಡಲಾಗಿದೆ.

ಮನೆಗಳ್ಳತನ ಆರೋಪಿಗಳಿಗೆ ಪಿಸಿ ಕೆಂಡಗಣ್ಣ ಯ್ಯ ಸಹಾಯ ಮಾಡುತ್ತಿದ್ದರು.ಕಳೆದ ತಿಂಗಳು ಮದ್ದೂರಿನಲ್ಲಿ ವೈದ್ಯ ಚಂದ್ರು ಮನೆಯಲ್ಲಿ ಕಳ್ಳತನ ನಡೆದಿದ್ದು ಆರೋಪಿಗಳು 1 ಕೆಜಿ ಚಿನ್ನಾಭರಣ ಹಾಗೂ 8 ಲಕ್ಷ ರೂ ನಗದು ದೊಚಿ ದ್ದರು.ಬಂಧಿತ 8 ಆರೋಪಿಗಳಿಂದ 5 ಮನೆಗಳ್ಳ ತನ ಪ್ರಕರಣಗಳು ಬಯಲಾಗಿದೆ.

ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಾಥ್ ನೀಡುತ್ತಿದ್ದರು ಆರೋಪಿ ಗಳು ಕದ್ದ ಚಿನ್ನಾಭರಣವನ್ನು ಕೆಂಡಗಣ್ಣಯ್ಯ ಅಡವಿಟ್ಟುಕೊಡುತ್ತಿದ್ದರು.ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು.

ಸುದ್ದಿ ಸಂತೆ ನ್ಯೂಸ್ ಮಂಡ್ಯ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.