ಬೇಸಿಗೆ ರಜೆಯ ಅವಧಿ ವಿಸ್ತರಣೆ – ರಜೆಯ ನಂತರ ಶಾಲೆಗಳು ಯಾವಾಗ ಆರಂಭವಾಗಲಿವೆ ಸಂಪೂರ್ಣ ಮಾಹಿತಿ…..

Suddi Sante Desk
ಬೇಸಿಗೆ ರಜೆಯ ಅವಧಿ ವಿಸ್ತರಣೆ – ರಜೆಯ ನಂತರ ಶಾಲೆಗಳು ಯಾವಾಗ ಆರಂಭವಾಗಲಿವೆ ಸಂಪೂರ್ಣ ಮಾಹಿತಿ…..

ಬೆಂಗಳೂರು

ಬೇಸಿಗೆ ರಜೆಯ ಅವಧಿ ವಿಸ್ತರಣೆ – ಜೂನ್ ಎರಡನೇಯ ವಾರದಲ್ಲಿ ಆರಂಭವಾಗಲಿವೆ ಶಾಲೆಗಳು ಹೌದು

ಈ ಬಾರಿ ಶಾಲೆಗಳಿಗೆ ಬೇಸಿಗೆ ರಜೆಯ ಅವಧಿ ಯನ್ನು ವಿಸ್ತರಣೆ ಮಾಡುವ ಕುರಿತಂತೆ ಮಾತು ಗಳು ಚರ್ಚೆಗಳು ನಡೆಯುತ್ತಿವೆ ಜೂನ್ ಎರಡನೇ ವಾರದಲ್ಲಿ ಶಾಲೆಗಳು ಈ ಬಾರಿ ಆರಂಭ ಮಾಡುವ ಕುರಿತಂತೆ ಮಾತುಕತೆ ನಡೆದಿದೆ.ಹೌದು ಪರೀಕ್ಷೆ ವಿಳಂಬ, ಚುನಾವಣೆ,ಬಿಸಿಲಿನ ತಾಪ ಮಾನ ಹಾಗೂ ಫಲಿತಾಂಶ ಘೋಷಣೆಯು ಸೇರಿದಂತೆ ಹಲವು ಕಾರಣದಿಂದಾಗಿ ಈ ಭಾರಿ ಬೇಸಿಗೆ ರಜೆ ವಿಸ್ತರಣೆ ಆಗಲಿದ್ದು ಶಾಲಾರಂಭ ವಿಳಂಬವಾಗೋ ಸಾಧ್ಯತೆ ಇದೆ.

ರಾಜ್ಯದಲ್ಲಿ ಸದ್ಯ 5, 8 ಮತ್ತು 9 ನೇ ತರಗತಿಯ ಪರೀಕ್ಷೆ ವಿಳಂಬದ ಸಂಗತಿ ಸದ್ದು ಮಾಡುತ್ತಿದೆ. ಸದ್ಯ ಮುಂದಿನ. ಸೋಮವಾರದಿಂದ ಪರೀಕ್ಷೆ ಆರಂಭವಾಗೋ ಮುನ್ಸೂಚನೆ ಸಿಕ್ಕಿದ್ದರೂ ಸರ್ಕಾರದ ಆದೇಶಕ್ಕೆ ತಡೆ ಸಿಗೋ ಸಾಧ್ಯತೆಗಳು ದಟ್ಟವಾಗಿದೆ. ಪರೀಕ್ಷೆ ವಿಳಂಬ, ಚುನಾವಣೆ, ಬಿಸಿಲು ಹಾಗೂ ಫಲಿತಾಂಶ ಘೋಷಣೆಯು ಸೇರಿದಂತೆ ಹಲವು ಕಾರಣಕ್ಕೆ ಈ ಭಾರಿ ಬೇಸಿಗೆ ರಜೆ ವಿಸ್ತರಣೆ ಆಗಲಿದ್ದು ಶಾಲಾರಂಭ ವಿಳಂಬ ವಾಗೋ ಸಾಧ್ಯತೆ ಇದೆ.

ಬಿರು ಬೇಸಿಗೆ ಕಾಲಿಟ್ಟಿದೆ. ಬೆಂಗಳೂರು ಸೇರಿ ದಂತೆ ರಾಜ್ಯದಾದ್ಯಂತ ನೀರಿನ ಕೊರತೆಯೂ ಕಾಡುತ್ತಿದೆ‌. ಇದರ ಮಧ್ಯೆ ಪರೀಕ್ಷಾ ಜ್ವರವೂ ಜೋರಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದ್ದು ಈ ಮಧ್ಯೆ ಐದು, ಎಂಟು ಹಾಗೂ ಒಂಬತ್ತನೇ ತರಗತಿಯ ಪರೀಕ್ಷೆ ವಿಚಾರ ಈ ಕೋರ್ಟ್ ಅಂಗಳದಿಂದ ಪೈನಲ್ ತೀರ್ಪು ಬಂದಿದೆ ಸದ್ಯ ಹೈಕೋರ್ಟ್ ಪರೀಕ್ಷೆಗೆ ಅನುಮತಿ ನೀಡಿದೆ. ಸರ್ಕಾರವೂ ಬೋರ್ಡ್ ಎಕ್ಸಾಂ ಗೆ ದಿನಾಂಕ ನಿಗದಿಗೊಳಿಸಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತೊಂದರೆಯಾಗ ದಂತೆ ಒಂಬತ್ತು ಹಾಗೂ ಇತರ ತರಗತಿಗಳ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗಿದೆ. ಆದರೆ ಇದೆಲ್ಲದರ ಪರಿಣಾಮ ಈ ಭಾರಿ ಬೇಸಿಗೆ ರಜೆಯ ಮೇಲಾಗಲಿದ್ದು ಕಲಿಕೆಯ ಕಾರಣಕ್ಕೆ ಬೇಸಿಗೆ ರಜೆಯನ್ನು ಮೊಟಕುಗೊಳ್ಳುತ್ತಿತ್ತು. ಆದರೆ ಈ ಭಾರಿ ಬೇಸಿಗೆ ರಜೆ ಮುಂದುವರೆಯಲಿದ್ದು ಜೂನ್ 10 ವೇಳೆಗೆ ಶಾಲೆ ಆರಂಭವಾಗಬಹುದು.

ಪ್ರತಿಭಾರಿಯೂ ಮೇ 24 ರ ವೇಳೆಗೆ ಶಾಲಾರಂಭ ಮಾಡಲಾಗುತ್ತಿತ್ತು. ರಿವಿಸನ್ ಹಾಗೂ ಶಾಲಾ ತರಗತಿಗಳಿಗೆ ಮಕ್ಕಳನ್ನು ಅಣಿಗೊಳಿಸುವ ಕಾರಣಕ್ಕೆ ಶಾಲಾ ಆರಂಭೋತ್ಸವ, ಶಾಲೆಗೆ ದಾಖಲೀಕರಣದಂತಹ ಹಲವು ಕಾರ್ಯಕ್ರಮ ಗಳನ್ನು ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿತ್ತು. ಆದರೆ ಈ ಭಾರಿ ಶಾಲಾರಂಭ ಜೂನ್ ಎರಡನೇ ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ‌ ಇದೆ.

ಪ್ರತಿಭಾರಿಯೂ ಚುನಾವಣೆ ಪ್ರಕ್ರಿಯೆ ಎರಡು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಆದರೆ ಈ ಭಾರಿ ದೇಶದಾದ್ಯಂತ ಏಳು ಹಂತದಲ್ಲಿ ಚುನಾ ವಣೆ ನಡೆಯುತ್ತಿದೆ.ವಿಧಾನಸಭೆ, ಉಪಚುನಾ ವಣೆ ಹಾಗೂ ಲೋಕಸಭಾ ಚುನಾವಣೆ ಎಲ್ಲವೂ ಸೇರಿ ಹಲವು ಹಂತದಲ್ಲಿ ದೇಶದ 500 ಕ್ಕೂ ಹೆಚ್ಚು ಸ್ಥಾನಗಳಿಗೆ ಎಲೆಕ್ಷನ್ ನಡೆಯುತ್ತಿದೆ.

ಹೀಗಾಗಿ ಮತದಾನದ ಬಳಿಕ ಮತ ಎಣಿಕೆಗೆ ಬರೋಬ್ಬರಿ 1 ತಿಂಗಳವರೆಗಿನ ಕಾಲಾವಲಾಶ ವಿದೆ. ಜೂನ್ 4. ಕ್ಕೆ ಮತ ಎಣಿಕೆ ನಡೆಯೋದ ರಿಂದ ಶಾಲೆಗಳು ಚುನಾವಣಾ ಆಯೋಗದ ಹಿಡಿತದಲ್ಲೇ ಇರುತ್ತವೆ. ಬಹುತೇಕ ಶಾಲೆಗಳಲ್ಲೇ ಚುನಾವಣಾ ಪ್ರಕ್ರಿಯೆ ನಡೆಯೋದು. ಚುನಾವಣೆ ಬಳಿಕ ಶಾಲೆಗಳನ್ನು ಸ್ಟ್ರಾಂಗ್ ರೂಂ ಆಗಿ ಪರಿವ ರ್ತಿಸೋದರಿಂದ ಶಾಲೆಗಳನ್ನು ಆರಂಭಿಸುವುದು ಕಷ್ಟ.

ಹೀಗಾಗಿ ಸರ್ಕಾರ ಸಾಮೂಹಿಕ ಶಾಲಾರಂಭ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಡ್ಡಿಯಾ ಗುತ್ತದೆ. ಇದೇ ಕಾರಣಕ್ಕೆ ಈ ಭಾರಿ ಶಾಲೆಗಳು ಜೂನ್ 10 ರ ವೇಳೆಗೆ ಆರಂಭವಾಗೋ ಸಾಧ್ಯತೆ ಇದೆ. ಇನ್ನೊಂದೆಡೆ ದೇಶವೂ ಸೇರಿದಂತೆ ರಾಜ್ಯದ ಎಲ್ಲೆಡೆ ಬಿಸಿಲಿನ ತಾಪ ಎಲ್ಲೇ ಮೀರಿದೆ. ಹೀಗಾಗಿ ಮಕ್ಕಳು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.‌

ನೀರಿನ ಕೊರತೆಯೂ ಶಾಲೆಗಳನ್ನು ಬಾಧಿಸುತ್ತಿದೆ. ಈ ಭಾರಿ ಮಳೆಯೂ ಕೂಡ ವಿಳಂಬವಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡುತ್ತಿ ದ್ದಾರೆ.ಈ ಎಲ್ಲಾ ಕಾರಣಕ್ಕಾಗಿ ಬೇಸಿಗೆ ರಜೆಯನ್ನು ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದರಿಂದ ಮಕ್ಕಳು ತುಂಬ ಅವಧಿಯ ವರೆಗೆ ಶೈಕ್ಷಣಿಕ ಚಟುವಟಿಕೆಯಿಂದ ಹೊರಗುಳಿ ದಂತಾಗಲಿದ್ದು

ಇದು ಮಕ್ಕಳ ಕಲಿಕೆ ಹಾಗೂ ಶಾಲಾ ದಾಖಲಾತಿ  ಯ ಮೇಲೆ ಪರಿಣಾಮ ಬೀರುತ್ತದೆ ಎಂದು ಶೈಕ್ಷಣಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆ,ಬಿಸಿಲು ಹಾಗೂ ಪರೀಕ್ಷಾ ವಿಳಂಬ ಶಾಲಾರಂಭದ ಅವಧಿ ವಿಸ್ತರಣೆಗೆ ಕಾರಣವಾಗ್ತಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.