ಮಂಗಳೂರು –
ಶಿಕ್ಷಕಿಯೊಬ್ಬರಿಗೆ ಗಿಪ್ಟ್ ಕೊಡುವ ನೆಪದಲ್ಲಿ ಮಂಗಳೂರಿನ ಡಯಟ್ ಗೆ ಪ್ರವೇಶ ಮಾಡಿ ಕಚೇರಿಯಲ್ಲಿನ ಮೂವರು ಸಿಬ್ಬಂದಿಗಳ ಮೇಲೆ ತಲ್ವಾರ್ ನಿಂದ ಅಟ್ಯಾಕ್ ಮಾಡಿ ಆತಂಕವನ್ನು ಸೃಷ್ಟಿ ಮಾಡಿದ್ದ ಆಗಂತುಕನನ್ನು ಕೊನೆಗೂ ಮಂಗಳೂರು ಪೊಲೀಸರು ಬಂಧನ ಮಾಡಿದ್ದಾರೆ.
ಮಧ್ಯಾಹ್ನ ಯುವನಕನೊಬ್ಬ ಡಯಟ್ ಗೆ ಪ್ರವೇಶ ಮಾಡಿ ಶಿಕ್ಷಕಿಯೊಬ್ಬರ ಮಾಹಿತಿಯನ್ನು ಕೇಳಿದ್ದಾನೆ. ಅವರು ಇಲ್ಲೇ ಇಲ್ಲ ಎಂದು ಹೇಳಿದರು ಕೂಡಾ ಕಚೇರಿಗೆ ಪ್ರವೇಶ ಮಾಡಿ ನಂತರ ಕಚೇರಿಯಲ್ಲಿ ಮತ್ತೆ ಅದನ್ನೇ ವಿಚಾರಣೆ ಮಾಡಿದ್ದಾನೆ
ಅವರು ಕೂಡಾ ಸರಿಯಾದ ಮಾಹಿತಿಯನ್ನು ನೀಡದಿದ್ದಾಗ ಕೊನೆಗೆ ಕಚೇರಿಯಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ಸಿಕ್ಕ ಸಿಕ್ಕ ಹಾಗೇ ತಲ್ವಾರ್ ನಿಂದ ಅಟ್ಯಾಕ್ ಮಾಡಿದ್ದಾನೆ.
ಈ ಒಂದು ತಲ್ವಾರ್ ದಾಳಿಯಿಂದಾಗಿ ಮೂವರು ಮಹಿಳಾ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂ ಡಿದ್ದು ಒರ್ವ ಮಹಿಳಾ ಸಿಬ್ಬಂದಿಗೆ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಹದಿನೈದರಿಂದ ಇಪ್ಪತ್ತು ಹೊಲಿಗೆ ಹಾಕಲಾಗಿದ್ದು ಇನ್ನೂಳಿದಂತೆ ಹಣೆ ಮತ್ತು ಕುತ್ತಿಗೆ ಸೇರಿದಂತೆ ಹಲವೆಡೆ ತಲ್ವಾರ್ ನಿಂದ ತೀವ್ರವಾದ ಗಾಯಗಳಾಗಿದ್ದು ಸದ್ಯ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳು ತ್ತಿದ್ದಾರೆ.
ಕರಂಗಲಪಾಡಿ ಬಳಿ ಸರ್ಕಾರಿ ಕಚೇರಿಯಲ್ಲಿ ದುಷ್ಕರ್ಮಿ ಯಿಂದ ಈ ಒಂದು ದಾಳಿ ನಡೆದಿದೆ ಮೂವರು ಮಹಿಳೆಯರ ಮೇಲೆ ತಲ್ವಾರ್ ದಿಂದ ಈ ದಾಳಿ ನಡೆಸಿದ್ದು ಮಹಿಳಾ ಸಿಬ್ಬಂದಿಗಳಾದ ನಿರ್ಮಲಾ,ರೀನಾ ರಾಯ್, ಗುಣವತಿ ಮೇಲೆ ದಾಳಿಯಾಗಿದ್ದು ಸಧ್ಯ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ತೆಯನ್ನು ಪಡೆದುಕೊಳ್ಳುತ್ತಿ ದ್ದಾರೆ.
ನಿರ್ಮಲಾ ಎಂಬವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾ ಗಿದ್ದು ಇನ್ನೂ ಯಾಕೇ ಈ ಒಂದು ದಾಳಿಯನ್ನು ಆರೋಪಿ ಮಾಡಿದ್ದಾನೆ ಕಾರಣ ಏನು ಈ ಕುರಿತಂತೆ ಸಧ್ಯ ಆರೋಪಿಯನ್ನು ವಶಕ್ಕೆ ತಗೆದುಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದು ತನಿಖೆ ಮಾಡ್ತಾ ಇದ್ದಾರೆ.