ಇಬ್ಬರು ಸರ್ಕಾರಿ ನೌಕರರು ಅಮಾನತು – ಇಬ್ಬರನ್ನು ಅಮಾನತು ಮಾಡಿ ಆದೇಶ ಮಾಡಿದ “DC”

Suddi Sante Desk
ಇಬ್ಬರು ಸರ್ಕಾರಿ ನೌಕರರು ಅಮಾನತು – ಇಬ್ಬರನ್ನು ಅಮಾನತು ಮಾಡಿ ಆದೇಶ ಮಾಡಿದ “DC”

ದಾವಣಗೆರೆ

ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಇಬ್ಬರು ಸರ್ಕಾರಿ ನೌಕರರನ್ನು ಅಮಾನತು ಮಾಡಿದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ ಹೌದು  ಅಧಿಕಾರಿ ಮತ್ತು ನೌಕರನನ್ನು ಅಮಾನತು ಮಾಡಲಾಗಿದೆ.

ಹೊನ್ನಾಳಿ ವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನೀ ಯರ್ ಕಣವಪ್ಪ ಮತ್ತು ನ್ಯಾಮತಿ ತಾಲೂಕು ಯರಗನಾಳ್ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಲೋಕೇಶ್ ನಾಯ್ಕ ಅಮಾನತು ಆದವ ರಾಗಿದ್ದಾರೆ.

ದಾವಣಗೆರೆ, ಶಿವಮೊಗ್ಗದ ಅಂತರ್ ಜಿಲ್ಲಾ ಚೆಕ್‌ ಪೋಸ್ಟ್ ಆದ ಜೀನಹಳ್ಳಿ ಚೆಕ್‌ಪೋಸ್ಟ್‌ಗೆ ಈ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡ ಲಾಗಿತ್ತು. ದಾವಣಗೆರೆ ಕ್ಷೇತ್ರಕ್ಕೆ ಆಯೋಗದಿಂದ ನೇಮಕವಾಗಿರುವ ವಿಶೇಷ ವೆಚ್ಚ ವೀಕ್ಷಕಿ ಪ್ರತಿಭಾಸಿಂಗ್ ಮತ್ತು ಹೊನ್ನಾಳಿ ಉಪವಿಭಾ ಗಾಧಿಕಾರಿ ಹಾಗೂ ಸಹಾಯಕ ಚುನಾವಣಾ ಧಿಕಾರಿ ಅಭಿಷೇಕ್ ಅವರು ಅನಿರೀಕ್ಷಿತವಾಗಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದಾಗ ಚೆಕ್‌ ಪೋಸ್ಟ್‌ ನಲ್ಲಿ ಕರ್ತವ್ಯದಲ್ಲಿ ಯಾರೂ ಇರಲಿಲ್ಲ. ಈ ಬಗ್ಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.

ಚುನಾವಣಾ ಕರ್ತವ್ಯ ನಿರ್ಲಕ್ಷ್ಯ ತೋರಿದ ನೌಕರರ ಮೇಲೆ ಪ್ರಜಾ ಪ್ರಾತಿನಿಧ್ಯಕಾಯ್ದೆ 1951 ರ 134 ನಿಯಮದನ್ವಯ ಹಾಗೂ ಸಿಸಿಎ ನಿಯಮ 1957 ರ ನಿಯಮ 10(1)(ಡಿ) ರನ್ವಯ ಅಮಾನತು ಮಾಡಿ ಜಿಲ್ಲಾ ಚುನಾವಣಾಧಿಕಾರಿ ಆದೇಶಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ದಾವಣಗೆರೆ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.