ಬೈಕ್ ಅಪಘಾತ ಹೆಡ್ ಕಾನಸ್ಟೆಬಲ್ ಸಾವು ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡ ವೆಂಕಟೇಶ್…..

Suddi Sante Desk
ಬೈಕ್ ಅಪಘಾತ ಹೆಡ್ ಕಾನಸ್ಟೆಬಲ್ ಸಾವು ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡ ವೆಂಕಟೇಶ್…..

ಕೊಣನೂರು

ಬೈಕ್ ಅಪಘಾತ ಹೆಡ್ ಕಾನಸ್ಟೆಬಲ್ ಸಾವು ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡ ವೆಂಕಟೇಶ್ ಹೌದು ಇಂತಹ ದೊಂದು ಅಪಘಾತದಲ್ಲಿ ಕೆ.ಆರ್‌. ವೆಂಕಟೇಶ್‌ (53) ಮೃತಪಟ್ಟಿದ್ದಾರೆ.

ಸಮನ್ಸ್ ಮತ್ತು ವಾರಂಟ್ ಜಾರಿ ಮಾಡಲು ತೆರಳಿದ್ದ ವೆಂಕಟೇಶ್‌ ಅರಕಲಗೂಡು-ಹೊಳೆ ನರಸೀಪುರ ರಸ್ತೆಯ ಜೋಡಿಗುಬ್ಬಿ ಕ್ರಾಸ್‌ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದರು.ಈ ಸಂದರ್ಭದಲ್ಲಿ ನಾಯಿ ಅಡ್ಡಬಂದಿದ್ದು,

ಅದನ್ನು ತಪ್ಪಿಸಲು ಬೈಕ್‌ ಅನ್ನು ವೇಗವಾಗಿ ಓಡಿಸಿದ್ದಾರೆ.ಇದರಿಂದ ಬೈಕ್‌ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ವೆಂಕಟೇಶ್‌ ಅವರ ತಲೆ ಹಾಗೂ ದೇಹಕ್ಕೆ ಗಾಯವಾಗಿತ್ತು. ಕೂಡಲೇ ಅವರನ್ನು ಹೊಳೆನರಸೀಪುರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಹಾಸನ ತಾಲ್ಲೂಕಿನ ಕಸಬಾ ಹೋಬಳಿಯ ಮುದ್ದನಹಳ್ಳಿಯವರಾದ ವೆಂಕಟೇಶ್‌ ಅವರಿಗೆ, ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಮೃತರ ಅಂತ್ಯಸಂಸ್ಕಾರ ಮುದ್ದನಹಳ್ಳಿಯಲ್ಲಿ ನೆರವೇರಿತು.

ಸುದ್ದಿ ಸಂತೆ ನ್ಯೂಸ್ ಹಾಸನ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.