ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ -7ನೇ ವೇತನ ಆಯೋಗದ ವರದಿ ಸಲ್ಲಿಕೆಯ ಬೆನ್ನಲ್ಲೇ ಮತ್ತೊಂದು ಮಹತ್ವದ ಬೇಡಿಕೆ ಈಡೇರಿಸಲಿದೆ ರಾಜ್ಯ ಸರ್ಕಾರ…..

Suddi Sante Desk
ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ -7ನೇ ವೇತನ ಆಯೋಗದ ವರದಿ ಸಲ್ಲಿಕೆಯ ಬೆನ್ನಲ್ಲೇ ಮತ್ತೊಂದು ಮಹತ್ವದ ಬೇಡಿಕೆ ಈಡೇರಿಸಲಿದೆ ರಾಜ್ಯ ಸರ್ಕಾರ…..

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ -7ನೇ ವೇತನ ಆಯೋಗದ ವರದಿ ಸಲ್ಲಿಕೆಯ ಬೆನ್ನಲ್ಲೇ ಮತ್ತೊಂದು ಮಹತ್ವದ ಬೇಡಿಕೆ ಈಡೇರಿಸಲಿದೆ ರಾಜ್ಯ ಸರ್ಕಾರ ಹೌದು

ರಾಜ್ಯದ ಸರಕಾರಿ ನೌಕರರಿಗೆ 7ನೇ ವೇತನ ಆಯೋಗವು ವೇತನ ಪರಿಷ್ಕರಣೆ ಜೊತೆಗೆ ಇದೀಗ ಮತ್ತೊಂದು ಸಿಹಿಸುದ್ದಿ ನೀಡಿದ್ದು ನೌಕರರ ಬಹುದಿನಗಳ ಬೇಡಿಕೆಯಾದ ವಾರದಲ್ಲಿ ಕೇವಲ 5 ದಿನ ಕೆಲಸ 2 ದಿನ ರಜೆಗೆ ಇದೀಗ ಆಯೋಗವು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ರಾಜ್ಯ ಸರಕಾರಿ ನೌಕರರ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಕೆಲಸದ ಕಾರ್ಯದಕ್ಷತೆ ಹೆಚ್ವಿ  ಸಲು ವಾರದಲ್ಲಿ ಸೋಮವಾರದಿಂದ ಶುಕ್ರವಾರ ದವರೆಗೆ ಮಾತ್ರ ಕೆಲಸ ವೀಕ್ ಎಂಡ್​ ನಲ್ಲಿ ಶನಿವಾರ ಮತ್ತು ಭಾನುವಾರ ರಜೆ ನೀಡುವಂತೆ ಮನವಿ ಸಲ್ಲಿಸಿ ಆಗ್ರಹಿಸಿದ್ದವು.

ಸರಕಾರಿ ನೌಕರರ ಈ ಬೇಡಿಕೆಗೆ 7ನೇ ವೇತನ ಆಯೋಗ ಸ್ಪಂದಿಸಿದ್ದು ವಾರದಲ್ಲಿ 5 ದಿನ ಕೆಲಸದ ಪದ್ಧತಿ ಅನುಷ್ಟಾನಗೊಳಿಸಲು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.ರಾಜ್ಯ ಸರಕಾರಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ವಾರದಲ್ಲಿ 5 ದಿನ ಕೆಲಸ ಮಾಡುವ ಪದ್ಧತಿ ಜಾರಿಗೆ ತರಬೇಕು ಎಂದು 7 ನೇ ವೇತನ ಆಯೋಗವು ತನ್ನ ವರದಿ ಯಲ್ಲಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

ಐಟಿ ಬಿಟಿ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ವಾರದಲ್ಲಿ 5 ದಿನ ಕೆಲಸ 2 ದಿನ ರಜೆ ಇರುವಂತೆ ರಾಜ್ಯ ಸರಕಾರಿ ನೌಕರರು ನಮಗೂ ವಾರದಲ್ಲಿ 5 ದಿನವಷ್ಟೇ ಕೆಲಸ ಮಾಡುವ ಪದ್ಧತಿ ಜಾರಿಗೆ ತರಬೇಕು ಎಂದು ಹಲವಾರು ವರ್ಷಗಳಿಂದ ಸರಕಾರದ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದರು.

ಸದ್ಯ ಸರಕಾರಿ ನೌಕರರು ವಾರದಲ್ಲಿ 6 ದಿನ ಕೆಲಸ ಮಾಡುವ ಪದ್ಧತಿ ಜಾರಿಯಲ್ಲಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಸರಕಾರಿ ರಜೆ ನೀಡಲಾಗುತ್ತಿದೆ. ಅಂದರೆ ಒಂದು ತಿಂಗಳಲ್ಲಿ ಎರಡು ವಾರ( ತಿಂಗಳ ಎರಡನೇ ವಾರ ಮತ್ತು ನಾಲ್ಕನೇ ವಾರ)

5 ದಿನ ಕೆಲಸವಿದೆ. ಹಾಗೆಯೇ ತಿಂಗಳ ಮೊದಲ ವಾರ ಮತ್ತು ಮೂರನೇ ವಾರ 6 ದಿನಗಳ ಕೆಲಸ ಮಾಡುವ ಪದ್ಧತಿ ಜಾರಿಯಲ್ಲಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿದ್ದು ಯಾವಾಗ ಜಾರಿಗೆ ಬರಲಿದೆ ಎಂಬೊಂದನ್ನು ಕಾದು ನೋಡಬೇಕಿದೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.