ಜಗದೀಶ್ ಶೆಟ್ಟರ್ ಗೆ ಶಕ್ತಿ ತುಂಬಿದ ಪ್ರಹ್ಲಾದ್ ಜೋಶಿ – ಗಡಿ ನಾಡಿನಲ್ಲಿ ಮೊಳಗಿದ ಬಿಜೆಪಿ ಮತ್ತೊಮ್ಮೆ ಜೈಕಾರ…..

Suddi Sante Desk
ಜಗದೀಶ್ ಶೆಟ್ಟರ್ ಗೆ ಶಕ್ತಿ ತುಂಬಿದ ಪ್ರಹ್ಲಾದ್ ಜೋಶಿ – ಗಡಿ ನಾಡಿನಲ್ಲಿ ಮೊಳಗಿದ ಬಿಜೆಪಿ ಮತ್ತೊಮ್ಮೆ ಜೈಕಾರ…..

ಬೆಳಗಾವಿ

ಗಡಿ ನಾಡಿನಲ್ಲಿ ಮೊಳಗಿದ ಬಿಜೆಪಿ ಮತ್ತೊಮ್ಮೆ ಜೈಕಾರ ಜಗದೀಶ್ ಶೆಟ್ಟರ್ ಗೆ ಶಕ್ತಿ ತುಂಬಿದ ಪ್ರಹ್ಲಾದ್ ಜೋಶಿ ಹೌದು ಬೆಳಗಾವಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಬೆಳಗಾವಿ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಿದರು

ಮಹಿಳಾ ಸಬಲೀಕರಣ ಮೋದಿ ಸರ್ಕಾರದ ಬಹುದೊಡ್ಡ ಕನಸು.ಈ ದೇಶದ ಸ್ತ್ರೀ ಕುಲಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲಾ ಸ್ತ್ರೀಯರನ್ನು ಸಮಾನವಾಗಿ ಗೌರವಿ ಸುತ್ತಾ ಬಂದಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಕೂಡ ಜಾರಿಗೆ ತಂದಿದ್ದು ನಮ್ಮ ಬಿಜೆಪಿ ಸರ್ಕಾರವೇ

ಹಾಗಾಗಿ ನಮ್ಮ ದೇಶದ ಅಭಿವೃದ್ಧಿಗೆ ಇನ್ನು ಮುಂದೆ ದೇಶದ ಮಹಿಳೆಯರ ಕೊಡುಗೆ ವೃದ್ಧಿಸುತ್ತದೆ. ದೇಶದಲ್ಲಿ ಆಗಿರುವ ದೊಡ್ಡ ದೊಡ್ಡ ಬದಲಾವಣೆಗಳಿಗೆ ಮೋದಿಯವರ ಸಮರ್ಥ ನಾಯಕತ್ವವೇ ಕಾರಣ. ಹೀಗಾಗಿ Narendra Modi ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸಬೇಕು ಎಂದು  ನೆರೆದಿದ್ದ ಎಲ್ಲಾ ತಾಯಂದಿರು, ಸಹೋದರಿಯರ ಬಳಿ ಮನವಿ ಮಾಡಿದರು

ಈ ಸಂದರ್ಭದಲ್ಲಿ ಸಂಸದರಾದ ಶ್ರೀಮತಿ Mangal Suresh Angadi, ಶಾಸಕರಾದ Abhay Patil ,ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ, ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬೆನಕೆ, ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ, ಮಂಡಲಾಧ್ಯಕ್ಷರಾದ ಪ್ರಶಾಂತ್ ಕಂಗ್ರಾಲ್ಕರ್ ಹಾಗೂ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಳಗಾವಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.