DDPI NH ನಾಗೂರ ಅಮಾನತು – ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಯಿಂದ ಅಮಾನತು ಮಾಡಿ ಆದೇಶ ಎರಡನೇಯ ಬಾರಿಗೆ ಅಮಾನತು…..

Suddi Sante Desk
DDPI NH ನಾಗೂರ ಅಮಾನತು – ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಯಿಂದ ಅಮಾನತು ಮಾಡಿ ಆದೇಶ ಎರಡನೇಯ ಬಾರಿಗೆ ಅಮಾನತು…..

ವಿಜಯಪುರ

DDPI NH ನಾಗೂರ ಅಮಾನತು – ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಯಿಂದ ಅಮಾನತು ಮಾಡಿ ಆದೇಶ ಎರಡ ನೇಯ ಬಾರಿಗೆ ಅಮಾನತು ಹೌದು

ಡಿಡಿಪಿಐ ಎನ್ ಎಚ್ ನಾಗೂರ ರನ್ನು ಮತ್ತೊಮ್ಮೆ ಅಮಾನತು ಮಾಡಲಾಗಿದೆ.ಹೌದು SSLC ಪರೀಕ್ಷೆ ನಿರ್ವಹಣೆಯಲ್ಲಿ ವಿಫಲಗೊಂಡ ಹಿನ್ನಲೆ ಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತು ಮಾಡಿ ಆದೇಶವನ್ನು ಮಾಡಿದ್ದಾರೆ

.ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಗಮ ವಾಗಿ ನಿರ್ವಹಿಸುವಲ್ಲಿ ವಿಫಲರಾದ ಮತ್ತು ಕರ್ತವ್ಯ ಲೋಪ ಆರೋಪದ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌. ನಾಗೂರ ಅವರನ್ನು ಅಮಾನತುಗೊಳಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ,ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಪರೀಕ್ಷೆ ನಕಲಿಗೆ ಅವಕಾಶ ನೀಡಿದ ಆರೋಪವೂ ಕೇಳಿ ಬಂದಿದೆ ಹೊರ್ತಿಯ ರೇವಣ ಸಿದ್ದೇಶ್ವರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರ ಹಾಗೂ ಕಾರಜೋ ಳದ ರಾಣಿ ಚನ್ನಮ್ಮ ವಸತಿ ಶಾಲೆಯ ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳನ್ನು ತಪಾಸಣೆ ಮಾಡದೇ ಬಿಟ್ಟಿರುವುದು ಮತ್ತು ಪರೀಕ್ಷಾ ಕೇಂದ್ರದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವ ಜನಿಕರು ಗುಂಪುಗೂಡಿ ನಕಲು ಮಾಡಲು ಸಹಕರಿಸಿರುವುದು ವಿಚಾರಣೆ ವೇಳೆ ಸಾಬೀ ತಾಗಿದೆ

ಈ ಬಗ್ಗೆ ವಿವರಣಾತ್ಮಕ ವರದಿ ನೀಡುವಂತೆ ಸೂಚಿಸಿದರೂ ಸೂಕ್ತ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ.ಹಿರಿಯ ಅಧಿಕಾರಿಗಳು ಕರೆ ಮಾಡಿದರೂ ಸ್ವೀಕರಿಸದೇ ನಿರ್ಲಕ್ಷ್ಯ ವಹಿಸಿ ದ್ದಾರೆ.

ಈ ಎಲ್ಲದರ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಬಾಕಿ ಇರಿಸಿ, ಸೇವೆಯಿಂದ ಅಮಾನತು ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.ಇನ್ನೂ ಈ ಹಿಂದೆ ಕೂಡಾ ಇವರನ್ನು ಅಮಾನತು ಮಾಡಲಾಗಿತ್ತು ಸಧ್ಯ ಮತ್ತೆ ಎರಡನೇಯ ಬಾರಿಗೆ ಅಮಾನತು ಮಾಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ವಿಜಯಪುರ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.