ಜೇವರ್ಗಿ –
ಹೌದು ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನರಿಬೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾಸ್ ಚಂದ್ರ ಮುತ್ತಂಗಿ ಇವರು ಇದೇ ಶಾಲೆಯ ಮಹಿಳಾ ಶಿಕ್ಷಕಿ ಯೊಬ್ವರ ಮೇಲೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರಂತೆ.
ಈ ಕುರಿತಂತೆ ಈಗಾಗಲೇ ಶಿಕ್ಷಕಿಯವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ.ಸಧ್ಯ ಈ ಒಂದು ದೂರನ್ನು ಸ್ವೀಕಾರ ಮಾಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಗ್ರವಾದ ವರದಿಯನ್ನು ನೀಡುವಂತೆ ನರಿಬೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗೆ ನೊಟೀಸ್ ನೀಡಿ ಸೂಚನೆ ನೀಡಿದ್ದಾರೆ.
ಇನ್ನೂ ಇದೊಂದು ಒಂದೇ ಶಾಲೆಯಲ್ಲಿ ಇಬ್ಬರು ಶಿಕ್ಷಕರ ಮಧ್ಯ ಕೇಳಿ ಬಂದ ಆರೋಪವಾಗಿದ್ದು ಹೀಗಾಗಿ ಇಲಾಖೆಯ ಅಧಿಕಾರಿಗಳು ಈ ಕುರಿತಂತೆ ತನಿಖೆಯನ್ನು ಮಾಡುತ್ತಿದ್ದು ಇವೆಲ್ಲದರ ನಡುವೆ ಈ ಕುರಿತಂತೆ ಮರಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ವನ್ನು ಬರೆದುಕೊಟ್ಟ ಈ ಇಬ್ಬರು ಶಿಕ್ಷಕರು ಸಧ್ಯ ಕಾಗುಣಿತವನ್ನು ತಪ್ಪು ತಪ್ಪಾಗಿ ಬರೆದುಕೊಟ್ಟ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡ ಬೇಕು