ನವದೆಹಲಿ –
ಕೇಂದ್ರ ಸರ್ಕಾರದ ಸಚಿವ ಸಂಪುಟದ ಸಭೆ ಇಂದು ನಡೆಯಿತು.ಮಹತ್ವದ ಸಚಿವ ಸಂಪುಟ ಸಭೆಯು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆ ಯಿತು.ಇನ್ನೂ ಈ ಒಂದು ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಪ್ರಮುಖವಾಗಿ ಮಕ್ಕಳ ಆರೋಗ್ಯ ಕಾಪಾಡಿಕೊ ಳ್ಳಲು ಪ್ರಧಾನ ಮಂತ್ರಿ ಪೌಷ್ಟಿಕಾಂಶ ಯೋಜನೆ ಯನ್ನು ಆರಂಭಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದರು.
ಪ್ರಧಾನ ಮಂತ್ರಿ ಪೌಷ್ಟಿಕಾಂಶ ಯೋಜನೆಯನ್ನು ಆರಂಭಿಸಲು ಸಚಿವ ಸಂಪುಟ ನಿರ್ಧರಿಸಿದ್ದು ಇನ್ನೂ ಈ ಒಂದು ಯೋಜನೆಯಡಿಯಲ್ಲಿ 11.2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮಕ್ಕಳು ದಿನದ ಉಚಿತ ಊಟ ಪಡೆಯುತ್ತಾರೆ.
ಈ ಯೋಜನೆಯನ್ನು 5 ವರ್ಷಗಳವರೆಗೆ ನಡೆಸಲಾ ಗುವುದು.ಇದಕ್ಕಾಗಿ ಸರ್ಕಾರವು 1.31 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ನಿರ್ಧರಿಸಿದೆ. ಈ ಯೋಜನೆಯು ಪ್ರಸ್ತುತ ಮಧ್ಯಾಹ್ನದ ಊಟ ಯೋಜನೆಯನ್ನು ಬದಲಿಸುತ್ತದೆ.ರಾಜ್ಯ ಸರ್ಕಾರ ಗಳ ನೆರವಿನಿಂದ ಕೇಂದ್ರ ಸರ್ಕಾರ ಈ ಯೋಜನೆ ಯನ್ನು ನಡೆಸುತ್ತದೆ.ಆದರೆ ಮುಖ್ಯವಾಗಿ ಎಲ್ಲಾ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿರುತ್ತದೆ ಎಂದರು.
ಕೇಂದ್ರ ಸರ್ಕಾರ ಪಿಎಂ-ಪೋಶನ್ ಯೋಜನೆ ಯನ್ನು ಆರಂಭಿಸಿದೆ.ಇದು ದೇಶಾದ್ಯಂತ 11.2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮಕ್ಕಳಿಗೆ ಅನುಕೂಲವಾಗಲಿದೆ.ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಯೋಜನೆ 5 ವರ್ಷಗಳವರೆಗೆ ನಡೆಯುತ್ತದೆ ಮತ್ತು ಇದರಲ್ಲಿ 1.31 ಲಕ್ಷ ಕೋಟಿ ರೂ.ಇದಲ್ಲದೇ, ಕೇಂದ್ರ ಕ್ಯಾಬಿನೆಟ್ ರಾಷ್ಟ್ರೀಯ ರಫ್ತು ವಿಮಾ ಖಾತೆ (NEIA) ಯೋಜನೆ ಮುಂದುವರಿಸಲು ಮತ್ತು 5 ವರ್ಷಗಳಲ್ಲಿ 1650 ಕೋಟಿ ರೂ. ಸಹಾಯಧನಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದರು.