ಬೆಂಗಳೂರು –
ಮಹಾಮಾರಿ ಕರೋನ ನಡುವೆ ಎರಡು ಹಂತಗಳಲ್ಲಿ ಶಾಲೆಗಳನ್ನು ಆರಂಭ ಮಾಡಿರುವ ರಾಜ್ಯ ಸರ್ಕಾರ ಈಗ ಮತ್ತೊಂದು ಹಂತದಲ್ಲಿ ಪ್ರಾಥಮಿಕ ಶಾಲೆ ಆರಂಭದೊಂದಿಗೆ ಬಿಸಿ ಊಟ ಯೋಜನೆ ಯನ್ನು ಆರಂಭ ಮಾಡಲು ಮುಂದಾಗಿದೆ.ಹೌದು ಒಂದ ರಿಂದ ಐದನೇ ಇಯತ್ತೆ ಭೌತಿಕ ತರಗತಿ ಜೊತೆಗೆ ಬಿಸಿಯೂಟವನ್ನು ಕೂಡ ಆರಂಭಿಸಲು ಸರ್ಕಾರ ಆಲೋಚಿಸಿದೆ.ಸದ್ಯ ಶಿಕ್ಷಣ ಇಲಾಖೆಯು ಆ.23 ರಂದು 6ರಿಂದ 12ನೇ ಹಾಗೂ ಸೆ.6ರಂದು 6-8ನೇ ಇಯತ್ತೆಯ ಭೌತಿಕ ತರಗತಿ ಆರಂಭಿಸಿದೆ.ಹೀಗಾಗಿ ಶಾಲೆಗೆ ಹಾಜರಾಗುತ್ತಿರುವ ಪ್ರಮಾಣ ಸರಾಸರಿ ಶೇ.60 ಇದೆ.ಇನ್ನೂ ಮುಂದುವರಿದು ಯೋಚನೆ ಮಾಡಿರುವ ಶಿಕ್ಷಣ ಇಲಾಖೆ ದಸರಾ ರಜೆ ನಂತರ 1ರಿಂದ 5ನೇ ಇಯತ್ತೆ ಭೌತಿಕ ತರಗತಿಯ ಜತೆ ಜತೆಗೆ ಮಧ್ಯಾಹ್ನದ ಬಿಸಿಯೂಟ ಸಹ ಪ್ರಾರಂಭಿಸುವುದು ಉತ್ತಮ ಎಂಬ ಅಭಿಪ್ರಾಯ ಪಟ್ಟಿದ್ದಾರೆ
ಮಕ್ಕಳಿಗೆ ಪೌಷ್ಠಿಕಾಂಶ ನೀಡುವುದಕ್ಕಾಗಿ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಸರ್ಕಾರ ನೀಡುತ್ತಾ ಬರುತ್ತಿದೆ. ಕರೊನಾ ಸೋಂಕಿನ ಪ್ರಕರಣ ಹೆಚ್ಚಾದ ಮೇಲೆ ಭೌತಿಕ ತರಗತಿಗಳು ಮುಚ್ಚಿದವು.ಈ ಹಿನ್ನೆಲೆ ಯಲ್ಲಿ ಬಿಸಿಯೂಟ ಬದಲಾಗಿ ಆಹಾರ ಧಾನ್ಯಗ ಳನ್ನು ನೇರವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಆದರೆ ಇದು ಬಿಸಿಯೂಟದಷ್ಟು ಪರಿಣಾಮಕಾರಿ ಯಲ್ಲ ಎಂಬ ಮಾತು ಕೇಳಿ ಬರುತ್ತಿದ್ದು ಮರಳಿ ಬಿಸಿಯೂಟ ಆರಂಭಿಸುವಂತೆ ಶಿಕ್ಷಣ ತಜ್ಞರು ಹಾಗೂ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮರಳಿ ಬಿಸಿ ಯೂಟ ಯೋಜನೆ ಆರಂಭಿಸುವುದಕ್ಕೆ ಆಲೋಚನೆ ನಡೆಸಿದೆ.ಹೀಗಾಗಿ ಸದ್ಯದಲ್ಲೇ 1ರಿಂದ 5ನೇ ಇಯತ್ತೆ ಯ ಮಕ್ಕಳು ತರಗತಿಯಲ್ಲಿ ತೊಡಗಿಕೊಳ್ಳೊವುದರ ಜೊತೆಗೆ ಬಿಸಿಯೂಟವನ್ನೂ ಪಡೆಯಲಿದ್ದಾರೆ. 2021-22ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಅ.10ರಿಂದ 20 ರವರೆಗೆ ದಸರಾ ರಜೆ ಇದೆ. ಅ.21ರಿಂದ ಮರಳಿ ಶಾಲೆಗಳು ಆರಂಭವಾಗಲಿವೆ. ಈ ವೇಳೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಕೂಡ ಆರಂಭಿಸುವುದು ಸೂಕ್ತವಾಗಿದೆ ಎಂದು ಶಿಕ್ಷಣ ಇಲಾಖೆ ಲೆಕ್ಕಾಚಾರ ಹಾಕುತ್ತಿದೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದ ಅಗತ್ಯ ಹೆಚ್ಚಾಗಿದೆ ಹೀಗಾಗಿ ಇದಕ್ಕೆ ಸ್ಪಂದಿಸಿರುವ ಸಿಎಂ ಶೀಘ್ರದಲ್ಲೇ ಈ ಸಂಬಂಧ ಆದೇಶ ಹೊರಡಿಸಲು ಶಿಕ್ಷಣ ಇಲಾಖೆಗೆ ಸೂಚಿಸು ವುದಾಗಿ ಭರವಸೆ ನೀಡಿದ್ದಾರೆ.ಈ ಯೋಜನೆ ಮರು ಆರಂಭಕ್ಕೆ ಹಾಲಿ ಶಿಕ್ಷಣ ಸಚಿವರಾಗಿರುವ ಬಿ.ಸಿ. ನಾಗೇಶ್ ಕೂಡ ಒಲವು ತೋರಿದ್ದಾರೆ ಹೀಗಾಗಿ ದಸರಾ ರಜೆ ಕಳೆದ ಬಳಿಕ ಶಿಕ್ಷಣ ಇಲಾಖೆಯು ಬಿಸಿಯೂಟ ಕಾರ್ಯಕ್ರಮ ಆರಂಭಿಸಲಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು