ಶಿಕ್ಷಕನೊಂದಿಗೆ ಶಿಕ್ಷಕಿ ಬಂಧನ – ಇಬ್ಬರನ್ನು ವಶಕ್ಕೆ ತಗೆದುಕೊಂಡು ತನಿಖೆ ಕೈಗೊಂಡ ಪೊಲೀಸರು…..

Suddi Sante Desk
ಶಿಕ್ಷಕನೊಂದಿಗೆ ಶಿಕ್ಷಕಿ ಬಂಧನ – ಇಬ್ಬರನ್ನು ವಶಕ್ಕೆ ತಗೆದುಕೊಂಡು ತನಿಖೆ ಕೈಗೊಂಡ ಪೊಲೀಸರು…..

ಬೀದರ್  –

ಪ್ರೌಢ ಶಾಲೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನೊಬ್ಬನನ್ನು ಬಂಧನ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ ಕಮಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಕಾಮುಕ ಶಿಕ್ಷಕನನ್ನು ಪೋಕ್ಸೋ ಕಾಯ್ದೆಯಡಿ ಬಂಧನ ಮಾಡಲಾಗಿದೆ.ಮಾಧವ್ ಲಾಂಚಕರ್ ಎಂಬುವನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಾಗಿದ್ದು ಬಾಲಕಿಯ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಪೋಕ್ಸೋ ಮತ್ತು ಐಪಿಸಿ 354(a) ಪ್ರಕಾರ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಒಂದು ಹೇಯ ಕೃತ್ಯ ಎಸಗಿದ ಶಿಕ್ಷಕನ ಜೊತೆಗೆ ಇದಕ್ಕೆ ಸಹಕರಿಸಿದ ಓರ್ವ ಶಿಕ್ಷಕಿಯನ್ನು ಸಹ ಬಂಧಿಸಲಾಗಿದೆ ಗ್ರಾಮದ ಶಾಲೆಯಲ್ಲಿ 9 ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಮತ್ತು ಆಕೆಯ ಗೆಳತಿಯನ್ನು ತನ್ನ ಕೋಣೆಗೆ ಬರುವಂತೆ ಕರೆದಿದ್ದ ಶಿಕ್ಷಕ ನಂತರ ಗೆಳತಿಯನ್ನು ವಾಪಸ್ ಕಳುಹಿಸಲಾಗಿದೆ.

ವಿದ್ಯಾರ್ಥಿನಿಯನ್ನು ಕೋಣೆ ಒಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ ಶಿಕ್ಷಕನ ವರ್ತನೆಗೆ ಹೆದರಿದ ಬಾಲಕಿ ಅತನಿಂದ ಬಿಡಿಸಿಕೊಂಡು ಅಳುತ್ತಾ ಮನೆಗೆ ಬಂದು, ತನ್ನ ತಂದೆಗೆ ಮಾಹಿತಿ ನೀಡಿದ್ದಾಳೆ.ಅದೇ ದಿನ ರಾತ್ರಿ ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿಯ ಮನೆಗೆ ಬಂದು ಲೈಂಗಿಕ ಕಿರು ಕುಳದ ಬಗ್ಗೆ ಯಾರಿಗಾದರೂ ಹೇಳಿದರೆ ನಿಮ್ಮ ಮಗಳನ್ನು ಶಾಲೆಯಿಂದ ತೆಗೆದು ಹಾಕಲಾಗು ವುದು ನಿಮ್ಮದೇ ಮರ್ಯಾದೆ ಹೋಗುತ್ತದೆ.

ಈ ವಿಷಯ ಇಲ್ಲಿಗೆ ಮುಚ್ಚಿ ಹಾಕಿ ಎಂದು ಬೆದರಿಕೆ ಹಾಕಿದ್ದಾಳೆ ಹಾಗಾಗಿ ಈ ಬಗ್ಗೆ ಕುಟುಂಬಸ್ಥರ ಜತೆ ಚರ್ಚಿಸಿ ಠಾಣೆಯಲ್ಲಿ ದೂರು ಕೊಡಲು ತಡ ವಾಗಿದೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಮತ್ತು ಕೃತ್ಯ ಸಹಕರಿಸಿದ ಶಿಕ್ಷಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೀದರ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.